ಸ್ನೇಹಿತರೆ, ಕನ್ನಡದ ಖ್ಯಾತ ಹಾಗೂ ನೆಚ್ಚಿನ ನಿರೂಪಕರಲ್ಲಿ ಅನುಶ್ರೀ ಅವರು ಕೂಡ ಒಬ್ಬರು. ಇನ್ನು ಅವರು ಒಂದು ಕಾಲದಲ್ಲಿ ಕೇವಲ rs.250 ಕಾರ್ಯಕ್ರಮ ನೀಡಿರುವುದು ಉಂಟು, ಆದರೆ ಈಗ ಅವರ ಈಗಿನ ಸಂಭಾವನೆ ಸಾವಿರ ಸಾವಿರದಷ್ಟು ಹೆಚ್ಚಾಗಿದೆ. ಹೌದು ಬಿಗ್ ಬಾಸ್ ಕನ್ನಡದಲ್ಲಿ ವಿಜಯ್ ರಾಘವೇಂದ್ರ, ಅರುಣ್ ಸಾಗರ್, ನಿಖಿತಾ ತುಕ್ರಾಲ್, ನರೇಂದ್ರಬಾಬು ಮತ್ತು ಇನ್ನಿತರ ಸ್ಪರ್ಧಿಗಳೊಂದಿಗೆ ಬಿಗ್ ಬಾಸ್ ಕನ್ನಡದ ಮೊದಲ ಆವೃತ್ತಿಯಲ್ಲಿ ಅನುಶ್ರೀ ಅವರು ಭಾಗವಹಿಸಿದ್ದರು. ನಂತರ ಅವರು 12 ವಾರಗಳ ಕಾಲ ಇದ್ದರು ಮತ್ತು ಕೊನೆಯ 6ನೇ ಸ್ಥಾನದಲ್ಲಿದ್ದರು.
ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಲು ಆರಂಭಿಸಿದರು. ಇನ್ನು ಮೂಲತಹ ಮಂಗಳೂರಿನವರಾದ ಅನುಶ್ರೀ ಯವರು ಮಂಗಳೂರು ಮೂಲದ ನಮ್ಮ ಟಿವಿ ಚಾನಲ್ ಮೂಲಕ ಅಂತ್ಯಕ್ಷರಿ ಮ್ಯೂಸಿಕ್ ಶೋ ಕಾರ್ಯಕ್ರಮದ ಮೂಲಕ ತಮ್ಮ ಜರ್ನಿ ಯನ್ನು ಪ್ರಾರಂಭಿಸುತ್ತಾರೆ. ಇನ್ನು ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕ ಗುರುಕಿರಣ್ ಶಿವಶರಣ್ ಶೆಟ್ಟಿ ಅವರ ಒಡೆತನದ ಮಂಗಳೂರು ಮೂಲದ ಟಿವಿ ಚಾನೆಲ್ ನಲ್ಲಿ ಯಾಂಕರ್ ಆಗಿ ಪಿಯುಸಿ ಮುಗಿಸಿದ ಕೂಡಲೇ ಅವರು ತಮ್ಮ ವೃತ್ತಿಜೀವನವನ್ನು ಆರಂಭಿಸಿದರುಆನಂತರ
ಒಂದೊಂದೇ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದರು. ಅಲ್ಲದೆ ಈಟಿವಿಯಲ್ಲಿ ಡಿಮಾಂಡಪ್ಪೋ ಡಿಮಾಂಡು ಕಾರ್ಯಕ್ರಮ ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ನಂತರ ಅವರು ಈಟಿವಿ ಕನ್ನಡ, ಕಸ್ತೂರಿ, ಜಿ ಟಿವಿ ಕನ್ನಡ ಮತ್ತು ಸುವರ್ಣ ಟಿವಿ ಹೀಗೆ ಮುಂತಾದ ವಾಹಿನಿಯಲ್ಲಿ ಕಾಣಿಸಿಕೊಂಡರು. ಇನ್ನು ಜನಪ್ರಿಯ ಕಾರ್ಯಕ್ರಮ ಲಾಗಿರುವ ಸರಿಗಮಪ, ಡ್ಯಾಂಸ್ ಕರ್ನಾಟಕ ಡ್ಯಾಂಸ್, ಕುಣಿಯೋನು ಬಾರ, ಕಾಮಿಡಿ ಕಿಲಾಡಿಗಳು ಹೀಗೆ ಅನೇಕ ರಿಯಾಲಿಟಿ ಶೋಗಳಿಗೆ ನಿರೂಪಣೆ ಮಾಡಿದ್ದಾರೆ.
ಇನ್ನು ನಿರೂಪಣೆ ಜೊತೆಗೆ ಸಿನಿಮಾದಲ್ಲೂ ಅಭಿನಯಿಸಿರುವ ಅನುಶ್ರೀ ಬೆಂಕಿಪಟ್ಟಣ ಎಂಬ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಕೂಡ ಮಾಡಿದ್ದಾರೆ. ಇನ್ನು ಕನ್ನಡದಲ್ಲಿ ಅಕುಲ್ ಬಾಲಾಜಿ ಅವರನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿ ಅನುಶ್ರೀ ಅವರು ಇದ್ದಾರೆ. ಸದ್ಯ ಕುಟುಂಬದ ಜವಾಬ್ದಾರಿಯನ್ನು ಹೊತ್ತಿರುವ ಅನುಶ್ರೀ ತಮ್ಮ ಹಾಗೂ ತಾಯಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಹಾಗೆಯೇ ಹಿರಿಯ ನಟಿ ಕಲ್ಪನಾ ಎಂದರೆ ಅವರಿಗೆ ತುಂಬಾನೇ ಇಷ್ಟ ಅಂತೆ
ಇನ್ನು ಇಂತಹ ನಟಿ ಇನ್ನು ಯಾಕೆ ಮದುವೆ ಆಗಿಲ್ಲ ಎಂಬ ಪ್ರಶ್ನೆ ಹಲವರದು, ಹೌದು ನಟಿ ಅನುಶ್ರೀ ಮದುವೆ ಎಂದಾಗಲೆಲ್ಲ ಇನ್ನೂ ಕೂಡ ಸಾಧನೆ ಮಾಡಬೇಕು ತಮ್ಮ ತಮ್ಮನನ್ನು ಒಂದು ದಡ ಸೇರಿಸಬೇಕು ಆನಂತರ ನಾನು ಕೂಡ ಸೆಟಲ್ ಆಗಿ ಮದುವೆ ಆಗ್ತೀನಿ ಅಂತ ಹೇಳುತ್ತಲೇ ಬಂದಿದ್ದಾರೆ. ಒಟ್ಟಿನಲ್ಲಿ ಸದ್ಯ ಕುಟುಂಬದ ಜವಾಬ್ದಾರಿ ಹೊತ್ತಿರುವ ನಟಿ ಅನುಶ್ರೀ ಯಾವಾಗ ಸಿಹಿಸುದ್ದಿ ಕೊಡ್ತಾರೆ ಅಂತ ಕಾದುನೋಡಬೇಕಾಗಿದೆ. ಸ್ನೇಹಿತರೆ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.