ನಟ ಪೃಥ್ವಿ ಅಂಬರ್

ನಟ ಪೃಥ್ವಿ ಅಂಬರ್ ತಾಯಿ ಇನ್ನಿಲ್ಲ..ಆದರೆ ನಿಜಕ್ಕೂ ಏನಾಗಿದೆ ನೋಡಿ..ಇದಕ್ಕೇ ಹೇಳೋದು ವಿಧಿ ಅಂತ…

CINEMA/ಸಿನಿಮಾ

ಕನ್ನಡದ ಖ್ಯಾತ ನಟ ದಿಯಾ ಸಿನಿಮಾ ಮೂಲಕ ಹೆಸರು ಮಾಡಿದ ನಟ ಪೃಥ್ವಿ ಅಂಬರ್ ಅವರು ಇಂದು ತಮ್ಮ ತಾಯಿಯನ್ನು‌ ಕಳೆದುಕೊಂಡಿದ್ದು ಪೃಥ್ವಿ ಅಂಬರ್ ಅವರ ಮನೆಯಲ್ಲಿ ಸೂತಕದ ಛಾಯೆ ಮೂಡಿದೆ.. ಹೌದು ಪೃಥ್ವಿ ಅಂಬರ್ ಅವರ ತಾಯಿ ಸುಜಾತ ಅಂಬರ್ ಅವರಿಗೆ ಇನ್ನೂ ಚಿಕ್ಕ ವಯಸ್ಸು ಆದರೆ ವಿಧಿಯ ನಿರ್ಣಯವೇ ಬೇರೆ ಇತ್ತು.. ನಿನ್ನೆ ಅನಾರೋಗ್ಯದ ಕಾರಣ ಕೊನೆಯುಸಿರೆಳೆದಿದ್ದಾರೆ.. ಆದರೆ ಪೃಥ್ವಿ ಅಂಬರ್ ತಾಯಿಯ ಘಟನೆಯ ಕಾಕತಾಳಿಯತೆಯನ್ನು ಕೇಳಿದರೆ ನಿಜಕ್ಕೂ ಮನಕಲಕುತ್ತದೆ..

ಹೌದು ಪೃಥ್ವಿ ಅಂಬರ್ ಅವರ ತಾಯಿ ಸುಜಾತ ಅಂಬರ್ ಅವರು ವೀರಪ್ಪ ಅಂಬರ್ ಅವರ ಧರ್ಮಪತ್ನಿಯಾಗಿದ್ದು ಮನೆ ಮಾತ್ರವಲ್ಲ ಹೊರಗೂ ಕೂಡ ಸಾಕಷ್ಟು ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದರು.. ಇವರು ದುರ್ಗಾಪರಮೇಶ್ವರಿ‌ ಮಹಿಳಾ ಸಂಘದ ಕಾರ್ಯದರ್ಶಿಯೂ ಆಗಿದ್ದ ಸುಜಾತ ಅವರು ತಮ್ಮನ್ನು ತಾವು ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು.. ಇನ್ನು ಇತ್ತ ಮಗ ಪೃಥ್ವಿ ಅಂಬರ್ ಸಿನಿಮಾ ನೃತ್ಯ ಅಂತ ನಟನೆಯ ಕಡೆಗೆ ಒಲವು ಮೂಡಿಸಿಕೊಂಡಾಗ ಅವರ ತಾಯಿ ಸುಜಾತ ಅವರು ಮಗನ ಬೆನ್ನಿಗೆ ನಿಂತು ಅವರನ್ನು ಬೆಂಬಲಿಸಿದ್ದರು..

ನಟ ಪೃಥ್ವಿ ಅಂಬರ್ ತಾಯಿ ಇನ್ನಿಲ್ಲ.. ಆದರೆ ನಿಜಕ್ಕೂ ಏನಾಗಿದೆ ನೋಡಿ.. ಇದಕ್ಕೇ ಹೇಳೋದು ವಿಧಿ ಅಂತ.. – Star News Kannada.in

ಇತ್ತ ವರ್ಷದ ಹಿಂದೆ ಜೊತೆಜೊತೆಯಲಿ ಧಾರಾವಾಹಿಗೆ ಬಂದ ನಂತರ ಪೃಥ್ವಿ ಅಂಬರ್ ಅವರು ಹೆಸರು ಮಾಡಿ ಜನ ಗುರುತಿಸುವಂತಾಗಿತ್ತು.. ನಂತರದಲ್ಲಿ ಬಿಡುಗಡೆಯಾದ ದಿಯಾ ಸಿನಿಮಾ ಪೃಥ್ವಿ ಅವರ ಜೀವನದಲ್ಲಿ ದೊಡ್ಡ ಯಶಸ್ಸನ್ನು ನೀಡಿತು.. ಇನ್ನು ದಿಯಾ ಸಿನಿಮಾದ ಸಕ್ಸಸ್ ನಂತರ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಆದ ಪೃಥ್ವಿ ಶಿವಣ್ಣನ ಜೊತೆ ಅಭಿನಯಿಸುವ ಅವಕಾಶವನ್ನು ಪಡೆದರು.. ಶಿವಣ್ಣನ ಜೊತೆ ಅಭಿನಯಿಸಿದ ಬೈರಾಗಿ ಸಿನಿಮಾ ಕೂಡ ಬಿಡುಗಡೆಯಾಗಿ ಪೃಥ್ವಿ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.. ಶುಗರ್ ಲೆಸ್, ಫಾರ್ ರಿಜ್.. ಸೇರಿದಂತೆ ಇನ್ನು ಅನೇಕ ಸಿನಿಮಾಗಳಲ್ಲಿ ಪೃಥ್ವಿ ಬ್ಯುಸಿ ಆಗಿದ್ದರು..

ಆದರೆ ಸಾಕಷ್ಟು ವರ್ಷಗಳ ಕಾಲ ಕಷ್ಟ ಪಟ್ಟು ಸತತ ಪರಿಶ್ರಮದ ಮೂಲಕ ಈಗ ಯಶಸ್ಸು ಕಂಡು ಒಳ್ಳೆಯ ಜೀವನ ಮಾಡುವ ಸಮಯದಲ್ಲಿ ಮಗನ ಏಳಿಗೆಯನ್ನು ನೋಡುವ ಸಮಯದಲ್ಲಿ ತಾಯಿತೇ ಇಷ್ಟು ಚಿಕ್ಕ ವಯಸ್ಸಿಗೆ ಇಲ್ಲವಾಗಿದ್ದು ನಿಜಕ್ಕೂ ಬೇಸರದ ಸಂಗತಿ.. ಅದರಲ್ಲೂ ಪೃಥ್ವಿ ಅಂಬರ್ ಜನರಿಗೆ ಇಷ್ಟವಾಗಲು ಮುಖ್ಯ ಕಾರಣವೇ ದಿಯಾ ಸಿನಿಮಾದಲ್ಲಿ ತಾಯಿಯ ಜೊತೆಗಿನ ಆ ಬಾಂಧವ್ಯ.. ಆದಿ ಹಾಗೂ ಆತನ ತಾಯಿಯ ನಡುವಿನ ಸ್ನೇಹ ಪ್ರೀತಿ ಕಂಡು ಎಷ್ಟೋ ಮಕ್ಕಳು ತಮ್ಮ ತಮ್ಮ ತಾಯಿಯ ಬಗ್ಗೆ ಮತ್ತಷ್ಟು ಗಢರವ ಹಚ್ಚಿಸಿಕೊಂಡದ್ದೂ ಉಂಟು..

Pruthvi Ambaar | ಪೃಥ್ವಿ ಅಂಬರ್‌ ತಾಯಿ ಹಿನ್ನೆಲೆ ಏನು ಗೊತ್ತಾ? *Sandalwood - YouTube

ಸಿನಿಮಾದಲ್ಲಿ ಆದಿ ಹಾಗೂ ಆ ತಾಯಿ ಮಗನ ಸೆಂಟಿಮೆಂಟ್.. ತಾಯಿಯನ್ನು ಕಳೆದುಕೊಂಡಾಗ ಪೃಥ್ವಿ ಅಭಿನಯುಸಿದ್ದ ರೀತಿ ಪ್ರೇಕ್ಷಕರನ್ನೂ ಸಹ ಕಣ್ಣೀರಿಡಿಸುವಂತೆ ಮಾಡಿತ್ತು.. ಆದರೆ ಕಾಕತಾಳಿಯವೆನ್ನುವಂತೆ ನಿಜ ಜೀವನದಲ್ಲಿಯೂ ಸಹ ಪೃಥ್ವಿ ಅವರ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಸಾಕಷ್ಟು ಚಿಕಿತ್ಸೆ ಪಡೆದರೂ ಸಹ ಫಲಕಾರಿಯಾಗದೇ ನಿನ್ನೆ ಕೊನೆಯುಸಿರೆಳೆದುಬಿಟ್ಟರು.. ಇತ್ತ ತಾಯಿಯನ್ನು ಕಳೆದುಕೊಂಡ ಪೃಥ್ವಿ ಅಂಬರ್ ಅವರ ಮೂಕ ರೋಧನೆ ಮನಕಲಕುವಂತಿತ್ತು.. ಸುಜಾತ ಅವರ ಅಂತಿಮ ಸಂಸ್ಕಾರವನ್ನು ಇಂದು ನೆರವೇರಿಸಲು ಕುಟುಂಬ ನಿರ್ಧಾರ ಮಾಡಿದ್ದು ತಾಯಿಯನ್ನು ಕಳೆದುಕೊಂಡ ಪೃಥ್ವಿಗೆ ಸ್ನೇಹಿತರು ಸಾಂತ್ವಾನ ಹೇಳಿ ಧೈರ್ಯ ತುಂಬಿದ್ದಾರೆ..

ನಟ ಪೃಥ್ವಿ ಅಂಬರ್ ತಾಯಿ ಇನ್ನಿಲ್ಲ.. ಆದರೆ ನಿಜಕ್ಕೂ ಏನಾಗಿದೆ ನೋಡಿ.. ಇದಕ್ಕೇ ಹೇಳೋದು ವಿಧಿ ಅಂತ.. – Star News Kannada.in

ಇತ್ತ ಶಿವಣ್ಣ, ಅನಿರುದ್ಧ್, ಧನಂಜಯ್ ಸೇರಿದಂತೆ ಸಾಕಷ್ಟು ಸಿನಿಮಾ‌ ಸ್ನೇಹಿತರುಸಹ ಪೃಥ್ವಿ ಅಂಬರ್ ಅವರ ತಾಯಿಯ ಅಗಲಿಕೆಗೆ ಕಂಬನಿ ಮಿಡಿದು ಸಂತಾಒಅ ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ ಪೃಥ್ವಿ ಅಂಬರ್ ಜೊತೆ ಮಾತನಾಡಿ ಸಾಂತ್ವಾನ ಹೇಳಿದ್ದಾರೆ.. ಸುಜಾತ ಅಂಬರ್‌ ಅವರಿಗೆ ಶಾಂತಿ ದೊರಕಲಿ. ತಾಯಿಯ್ನು ಕಳೆದುಕೊಂಡ ಪೃಥ್ವಿ ಅಂಬರ್‌ ಅವರಿಗೆ ಈ ನೋವ ತಡೆಯುವ ಶಕ್ತಿ ಆ ಭಗವಂತ ನೀಡಲಿ..

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...