ಸಿನಿಮಾರಂಗವು ಎಲ್ಲರಿಗೂ ಕೂಡ ಸುಲಭವಾಗಿ ಕೈ ಹಿಡಿಯುವುದಿಲ್ಲ. ಕೆಲವರು ಈ ಸಿನಿಮಾರಂಗದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದರೆ, ಇನ್ನು ಕೆಲವರಿಗೆ ಅವಕಾಶವು ಬಂದು ಬಿಡುತ್ತದೆ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಸ್ಟಾರ್ ಪಟ್ಟವನ್ನು ಅಲಂಕರಿಸುವವರು ಇದ್ದಾರೆ. ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಅನಸೂಯಾ ಕೂಡ ಒಬ್ಬರು. ಹೌದು ನಟಿಯಾಗಿ ಮಾತ್ರವಲ್ಲ ನಿರೂಪಕಿಯಾಗಿಯೂ ಎಲ್ಲರ ಪ್ರೀತಿಯನ್ನು ಸಂಪಾದಿಸಿಕೊಂಡಿದ್ದಾರೆ. ನಟಿ ಅನಸೂಯಾರವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿದ್ದು, ಆಗಾಗ ತಮ್ಮ ಫೋಟೋ ವಿಡಿಯೋಗಳನ್ನು ಅಭಿಮಾನಿಗಳ ಜೊತೆಯಲ್ಲಿ ಶೇರ್ ಮಾಡುತ್ತಿರುತ್ತಾರೆ…
ಇತ್ತೀಚಿಗಷ್ಟೇ ಪತಿ ಸುಶಾಂಕ್ ಭಾರಧ್ವಜ್ ಅವರ ಜೊತೆಗೆ ಬೀಚ್ ನಲ್ಲಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಹೌದು, ಪತಿ ಸುಶಾಂಕ್ ಭಾರದ್ವಾಜ್ ಜೊತೆ ಬೀಚ್ ನಲ್ಲಿದ್ದ ವಿಡಿಯೋವನ್ನು ಶೇರ್ ಮಾಡಿದ್ದು, ಆ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಅನಸೂಯಾ ಮತ್ತು ಸುಶಾಂಕ್ ಪರಸ್ಪರ ಪ್ರೀತಿ ಯಿಂದ ಅಪ್ಪಿಕೊಂಡಿದ್ದು ಮಾತ್ರವಲ್ಲದೇ, ಲಿಪ್ಲಾಕ್ ಮತ್ತು ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ 12 ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅನಸೂಯಾ ತನ್ನ ಪತಿಯೊಂದಿಗೆ ಬೀಚ್ ನಲ್ಲಿ ಸಮಯ ಕಳೆದಿದ್ದಾರೆ.
ಇನ್ನು, ಈ ವಿಡಿಯೋವನ್ನು ಶೇರ್ ಮಾಡಿ , ‘ ಆತ್ಮೀಯ ನಿಕ್ಕು.. ನಾವಿಬ್ಬರೂ ಜೊತೆಗಿರೋದೇ ನನಗೆ ಅದ್ಭುತ ಪ್ರದೇಶ. ನೀನು ನನ್ನ ಪಕ್ಕದಲ್ಲಿದ್ದರೆ ನಾನು ಒಂದು ಕೈಯಿಂದ ಈ ಜಗತ್ತನ್ನು ಗೆಲ್ಲಬಲ್ಲೆ. ನಮ್ಮ ಪ್ರೀತಿಯ ಪಯಣದಲ್ಲಿ ಹಲವು ಮಧುರ ನೆನಪುಗಳು , ಹಲವು ಏರಿಳಿತಗಳು , ಹಲವು ಮಧುರ ಕ್ಷಣಗ ಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ನಿನ್ನನ್ನು ಪ್ರೀತಿಸುತ್ತೇನೆ. ನನಗೆ ವಯಸ್ಸಾಗುವವರೆಗೂ ನಿನ್ನನ್ನು ಪ್ರೀತಿಸುತ್ತಲೇ ಇರುತ್ತೇನೆ ಬರೆದುಕೊಂಡಿದ್ದಾರೆ. ಇದೀಗ ಮತ್ತೊಂದು ಡ್ಯಾನ್ಸ್ ವಿಡಿಯೋದ ಮೂಲಕ ಗಮನ ಸೆಳೆದಿದ್ದಾರೆ.
ಅಂದಹಾಗೆ ಅನಸೂಯಾರವರು ಕಿರುತೆರೆಯಲ್ಲಿ ನಿರೂಪಕಿಯಾಗಿ ವೃತ್ತಿ ಜೀವನ ಆರಂಭಿಸಿದವರು. ಆದರೆ ಈ ಬಣ್ಣದ ಬದುಕಿಗೆ ಬರುವ ಮೊದಲು ಎಂಬಿಎಯಲ್ಲಿ ಎಚ್‌ಆರ್ ಪದವಿ ಪಡೆದುಕೊಂಡಿರುವ ಅನಸೂಯಾರವರು ಪ್ರಾರಂಭದಲ್ಲಿ ಬ್ಯಾಂಕಿನಲ್ಲಿ ಟೆಲಿಕಾಲರ್ ಕೆಲಸ ಮಾಡುತ್ತಿದ್ದರು. ಆದರೆ ಆ ಸಮಯದಲ್ಲಿಯೇ 5,000 ಸಂಬಳ ಪಡೆಯುತ್ತಿದ್ದರು ಅನಸೂಯಾ. ಹೀಗಿರುವಾಗ ಕಾಮಿಡಿ ಶೋವೊಂದನ್ನು ನಿರೂಪಣೆ ಮಾಡುವ ಅವಕಾಶವೊಂದು ಸಿಗುತ್ತದೆ. ಹೀಗೆ 2013 ರಲ್ಲಿ ಹಾಸ್ಯ ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಮೂಲಕ ಮೊದಲ ಬಾರಿಗೆ ನಿರೂಪಕಿಯಾಗಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.
ಅಷ್ಟೇ ಅಲ್ಲದೇ ಅದಕ್ಕೂ ಮೊದಲು 2013 ರಲ್ಲಿ ನಾಗಾ ಚಿತ್ರದಲ್ಲಿ ಎನ್ ಟಿಆರ್ ಕಾಣಿಸಿಕೊಂಡಿದ್ದರು. 2016 ರಲ್ಲಿ ನಾಗಾರ್ಜುನ ಅಭಿನಯದ ಸೊಗ್ಗಾಡೆ ಚಿನ್ನಿ ನಯನ ನಾಗ್ ಕಿ ಮರಡಿಲು ಬಜ್ಜಿ ಪಾತ್ರದಲ್ಲಿ ಅಭಿನಯಿಸಿದರು. ಇತ್ತೀಚೆಗಷ್ಟೇ ಬಿಡುಗಡೆಯಾದ ಅಲ್ಲು ಅರ್ಜುನ್ ರವರ ಪುಷ್ಪ, ರವಿತೇಜ ರವರ ಖಿಲಾಡಿ ಮತ್ತು ಪ್ರಕಾಶ್ ರಾಜ್ ರವರ ರಂಗಮಾರ್ತಾಂಡ ಅದ್ಭುತವಾಗಿ ನಟಿಸುವ ಮೂಲಕ ಅದ್ಭುತ ನಟಿ ಎನಿಸಿಕೊಂಡಿದ್ದಾರೆ. ಇನ್ನು, ಪುಷ್ಪ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನೇಮ್ ಫೇಮ್ ತಂದುಕೊಟ್ಟಿದ್ದು, ಸಾಕಷ್ಟು ಸಿನಿಮಾಗಳು ಇವರ ಕೈಯಲ್ಲಿದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಈ ನಟಿಯೂ ವೇದಿಕೆಯ ಮೇಲೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ನಟಿ ಅನಸೂಯಾರವರ ಈ ವಿಡಿಯೋ ಸದ್ಯಕ್ಕೆ ಎಲ್ಲರ ಮೆಚ್ಚುಗೆ ಗಳಿಸಿದೆ. ಈ ಡ್ಯಾನ್ಸ್ ವಿಡಿಯೋ ನೋಡಿ ಫಿದಾ ಆಗಿದ್ದಾರೆ.