ಸದ್ಯ ಸಿನಿಮಾ ನಟಿಯರ ಬಗ್ಗೆ ಅಥವಾ ಕಿರುತರೆ ಕಲಾವಿದೆಯರ ಬಗ್ಗೆ ಒಳ್ಳೆಯದನ್ನ ಯೋಚಿಸುವುದಕ್ಕಿಂತ ಕೆಟ್ಟದ್ದನ್ನು ಮಾತನಾಡುವವರೇ ಜಾಸ್ತಿಯಾಗಿದ್ದು ಯಾವುದೇ ನಟಿ ಫೇಮಸ್ ಆದರೆ ಆಕೆ ಯಾರೊಂದಿಗೂ ಸ್ಪಂದಿಸಿರಬೇಕು ಹಾಗಾಗಿ ಇಷ್ಟು ಬೇಗ ಜನಪ್ರಿಯ ಆಗಿದ್ದಾಳೆ ಎಂದು ಮಾತನಾಡಿಕೊಳ್ಳುತ್ತಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಸಿನಿಮಾ ನಟಿಯರು ಹಾಕುವ ಪ್ರತಿಯೊಂದು ಪೋಸ್ಟ್ ಸಹ ಸಿಕ್ಕಾಪಟ್ಟೆ ಲೈಕ್ ಗಳಿಸುತ್ತವೆ.
ಇನ್ನು ಟಾಲಿವುಡ್ ನ ಪ್ರಖ್ಯಾತ ನಟಿ ಹಾಗೂ ನಿರೂಪಕಿ ಆಗಿರುವ ಅನಸೂಯ ಅವರು ಇತ್ತೀಚಿಗೆ ಹೆಚ್ಚು ಸುದ್ದಿಯಲ್ಲಿದ್ದು ತೆಲುಗಿನಲ್ಲಿ ನಂಬರ್ ಒನ್ ನಿರೂಪಕಿ ಎನಿಸಿಕೊಂಡಿರುವ ಅನಸೂಯ ಟಾಲಿವುಡ್ ನ ಸಿನಿಮಾಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮವಿದ್ದರೂ ಕೂಡ ಅವರೇ ನಿರೂಪಣೆ ಮಾಡುತ್ತಾರೆ. ಈ ಖ್ಯಾತ ನಿರೂಪಕಿ ಹಾಗೂ ಟಾಲಿವುಡ್ ನ ಸ್ಟಾರ್ ನಟ ವಿಜಯ್ ದೇವರಕೊಂಡ ಅವರ ನಡುವೆ ಈ ಹಿಂದೆ ಜಟಾಪಟಿ ನಡೆದಿದ್ದು ವಿಜಯಚ ದೇವರಕೊಂಡ ಅವರ ನಟನೆಯ ಸೂಪರ್ ಬ್ಲಾಕ್ ಬಸ್ಟರ್ ಸಿನಿಮಾ ಅರ್ಜುನ್ ರೆಡ್ಡಿ.
ಇನ್ನು ಈ ಸಿನಿಮಾದ ಕಾರ್ಯಕ್ರಮದಲ್ಲಿ ನಿರೂಪಕಿ ಅನುಸೂಯ ಮತ್ತು ವಿಜಯ ದೇವರಕೊಂಡ ಅವರ ನಡುವೆ ಮಾತು ನೆಡೆದಿದ್ದು ವಿಜಯ ದೇವರಕೊಂಡ ಹುಡುಗಿಯರ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ವೇದಿಕೆಯ ಮೇಲೆಯೇ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ನಿರೂಪಕಿ ಅನುಸೂಯ. ಅದಾದ ಬಳಿಕ ವಿಜಯ ದೇವರ ಕೊಂಡ ಅವರ ಯಾವುದೇ ಸಿನಿಮಾದ ಪ್ರಮೋಷನ್ ಇರಲಿ ಅಥವಾ ಯಾವುದೇ ಕಾರ್ಯಕ್ರಮವಿರಲಿ ಅದಕ್ಕೆ ನಿರೂಪಕಿಯಾಗಿ ಅನುಸೂಯ ಬರುತ್ತಿರಲಿಲ್ಲ
ಸದ್ಯ ಇತ್ತೀಚಿಗೆ ವಿಜಯ ದೇವರಕೊಂಡ ಅವರ ಸಿನಿಮಾ ಬಾಲಿವುಡ್ ನಲ್ಲಿ ತೆರೆಕಂಡಿದ್ದು ಅದುವೇ ಲೈಗರ್ ಸಿನಿಮಾ. ಆದರೆ ಈ ಸಿನಿಮಾ ನಿರೀಕ್ಷೆಯ ಮಟ್ಟ ತಲುಪುವಲ್ಲಿ ಸೋತಿದೆ. ಹೌದು ಬಹಳ ನಿರೀಕ್ಷೆಯನ್ನು ಹುಟ್ಟು ಹಾಕಿದ್ದ ಲೈಗರ್ ಸಿನಿಮಾ ಸೋತಿದ್ದಕ್ಕಾಗಿ ಚಿತ್ರತಂಡ ಬೇಸರ ವ್ಯಕ್ತಪಡಿಸಿದರೆ ನಿರೂಪಕಿ ಅನುಸೂಯ ಮಾತ್ರ ಈ ಸೋಲನ್ನ ಸಂಭ್ರಮಿಸಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದರು.
ಕರ್ಮ ಮತ್ತೆ ಬರುತ್ತೆ ಎನ್ನುವ ಪೋಸ್ಟ್ ಹಾಕಿ ಲೈಗರ್ ಸಿನಿಮಾ ಸೋತಿದ್ದರ ಬಗ್ಗೆ ಬರೆದುಕೊಂಡಿದ್ದು ಅನುಸೂಯ ಹೀಗೆ ಬರೆಯುತ್ತಿದ್ದಂತೆ ವಿಜಯ ದೇವರಕೊಂಡ ಅವರ ಅಭಿಮಾನಿಗಳು ನಿರೂಪಕಿ ಅನುಸೂಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೌದು ಸಾಮಾಜಿಕ ಜಾಲತಾಣದಲ್ಲಿ ನಿರೂಪಕಿ ಅನುಸೂಯ ಅವರನ್ನ ಸಾಕಷ್ಟು ಪ್ರಶ್ನೆ ಮಾಡಿದ್ದು ಈಗಾಗಲೇ ಸೈಲೆಂಟ್ ಆಗಿ ವಿಜಯ್ ಅಭಿಮಾನಿಗಳು ಹಾಗೂ ಅನುಸೂಯ ನಡುವೆ ವಾರ್ ಆರಂಭವಾಗಿದೆ.
ಈ ಸಮಯದಲ್ಲಿ ಕೆಲವು ಅಭಿಮಾನಿಗಳು ಕೆಟ್ಟದಾಗಿಯೂ ಕಮೆಂಟ್ ಮಾಡುತ್ತಿದ್ದು ಅದರಲ್ಲಿ ಒಬ್ಬ ವ್ಯಕ್ತಿ ಕೇಳಿರುವ ಪ್ರಶ್ನೆಗೆ ಅನುಸೂಯ ಖಡಕ್ ಉತ್ತರವನ್ನು ಕೂಡ ನೀಡಿದ್ದಾರೆ. ಹೌದು ಆತ ಕೇಳಿದ ಅಸಹ್ಯಕರವಾದ ಪ್ರಶ್ನೆ ಏನು ಗೊತ್ತಾ? ಆತ ಒಂದು ದಿನಕ್ಕೆ ನಿನ್ನ ರೇಟ್ ಎಷ್ಟು ಎಂದು ಕೇಳಿದ್ದು ಈ ಕಾಮೆಂಟ್ ನೋಡಿ ಸುಮ್ಮನಾಗದ ಅನಸೂಯ ಅದಕ್ಕೆ ಸರಿಯಾಗಿ ಉತ್ತರ ನೀಡಿದ್ದಾರೆ.
ನಿಮ್ಮ ಸಹೋದರಿ ಅಥವಾ ನೀವು ಮದುವೆಯಾಗಿದ್ದರೆ ನಿಮ್ಮ ಹೆಂಡತಿಯ ಬಳಿ ಒಂದು ದಿನಕ್ಕೆ ಎಷ್ಟು ತೆಗೆದುಕೊಳ್ಳುತ್ತಾರೆ ಎಂದು ಕೇಳಿ ಎಂದು ಆತನ ಕಮೆಂಟ್ ಗೆ ರಿಪ್ಲೈ ಮಾಡಿದ್ದು ಈ ಉತ್ತರವನ್ನು ನೋಡಿ ಕಮೆಂಟ್ ಮಾಡಿರುವ ವ್ಯಕ್ತಿ ಹೆದರಿ ಕೂಡಲೇ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾನೆ. ಸದ್ಯ ಈಗಾಗಲೇ ಅನಸೂಯ ಅವರ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇನ್ನು ಅನಸೂಯ ಅವರನ್ನ ಆಂಟಿ ಎಂದು ಕೆಲವರು ಕರೆದಿದ್ದಾರೆ. ಹೀಗೆ ತನ್ನ ಬಗ್ಗೆ ಕೆಟ್ಟದಾಗಿ ಕಮೆಂಟ್ ಹಾಕುವವರಿಗೆ ನಿರೂಪಕಿ ಅನುಸೂಯ ಸರಿಯಾಗಿಯೇ ವಾರ್ನಿಂಗ್ ಕೊಟ್ಟಿದ್ದಾರೆ.