ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಖ್ಯಾತಿ ಪಡೆದವರು ನಟಿ ಅಮೂಲ್ಯ. ಚೈಲ್ಡ್ ಆರ್ಟಿಸ್ಟ್ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಅಮೂಲ್ಯ ಕೆಲವೇ ವರ್ಷಗಳಲ್ಲಿ ಹೀರೋಯಿನ್ ಆದರು. ಚೈಲ್ಡ್ ಆರ್ಟಿಸ್ಟ್ ದರ್ಶನ್, ಸುದೀಪ್ ರಂತಹ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು, ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಹೀರೋಯಿನ್ ಆಗಿ ಎಂಟ್ರಿ ಕೊಟ್ಟರು. ಅಮೂಲ್ಯ ಹೀರೋಯಿನ್ ಆದಾಗ ಅವರಿಗೆ 13 ವರ್ಷವಾಗಿತ್ತು.

ಅತಿ ಚಿಕ್ಕ ವಯಸ್ಸಿಗೆ ಹೀರೋಯಿನ್ ಆದ ನಟಿಯರ ಸಾಲಿಗೆ ಸೇರಿಕೊಂಡರು ಅಮೂಲ್ಯ. ನಂತರದ ದಿನಗಳಲ್ಲಿ ಗಣೇಶ್, ಚಿರಂಜೀವಿ ಸರ್ಜಾ, ಯಶ್, ಅಜಯ್ ರಾವ್, ನನಪಿರಲಿ ಪ್ರೇಮ್ ಸೇರಿದಂತೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಜೊತೆ ನಟಿಸಿದರು ಅಮೂಲ್ಯ. ಇವರು ನಟಿಸಿದ ಸಿನಿಮಾಗಳೆಲ್ಲವು ಸೂಪರ್ ಹಿಟ್ ಆಗುತ್ತಿದ್ದವು. ಸ್ಯಾಂಡಲ್ ವುಡ್ ನ ಸ್ಟಾರ್ ನಟಿಯಾಗಿ ಮಿಂಚಿದ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಾಜಕೀಯ ರಂಗದಲ್ಲಿ ಸಕ್ರಿಯರಾಗಿರುವ ಜಗದೀಶ್ ಅವರ ಜೊತೆಗೆ ಮದುವೆಯಾದರು ನಟಿ ಅಮೂಲ್ಯ. ಮದುವೆಯಾಗಿ ಕೆಲ ವರ್ಷಗಳ ಬಳಿಕ ಈ ವರ್ಷ ಶಿವರಾತ್ರಿ ಹಬ್ಬದಂದು ಅವಳಿ ಮಕ್ಕಳಿಗೆ ಜನ್ಮ ನೀಡಿದರು..
ಮದುವೆಯಾದ ಬಳಿಕ ಚಿತ್ರರಂಗದಿಂದ ದೂರವೇ ಉಳಿದ ಅಮೂಲ್ಯ ಅವರು, ಇದೀಗ ತಮ್ಮ ಮಕ್ಕಳ ಪಾಲನೆ ಮತ್ತು ಪೋಷಣೆಯಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಇನ್ನು ಮಕ್ಕಳಾದ ಬಳಿಕ ಆಗೊಮ್ಮೆ ಈಗೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಇದೀಗ ಅಮೂಲ್ಯ ಅವರು ಮೊದಲ ಬಾರಿಗೆ ಇನ್ಸ್ಟಾಗ್ರಾಮ್ ರೀಲ್ಸ್ ಮಾಡಿದ್ದಾರೆ. ಅಮೂಲ್ಯ ಅವರು ರೀಲ್ಸ್ ಮಾಡಿರುವುದು “ಆಣೆ ಮಾಡಿ ಹೇಳುತ್ತೀನಿ, ನಾನು ನಿನ್ನವಳೇ..” ಹಾಡಿಗೆ. ಇದು ಗುರು ಶಿಷ್ಯರು ಸಿನಿಮಾದ ಹಾಡು..

ನಟ ಶರಣ್ ಹಾಗೂ ನಟಿ ನಿಷ್ವಿಕಾ ನಾಯ್ಡು ಅಭಿನಯದ ಸಿನಿಮಾ ಇದಾಗಿದ್ದು, ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಸೃಷ್ಟಿಸಿದೆ. ಈ ಹಾಡು ಯೂಟ್ಯೂಬ್ ನಲ್ಲಿ 25 ಲಕ್ಷಕ್ಕಿಂತ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ. ಅಜನೀಶ್ ಲೋಕನಾಥ್ ಅವರು ಈ ಹಾಡಿಗೆ ಸಂಗೀತ ನೀಡಿದ್ದಾರೆ. ಅಮೂಲ್ಯ ಅವರಿಗೆ ಈ ಹಾಡು ತುಂಬಾ ಇಷ್ಟ ಆಗಿರುವ ಕಾರಣ ಈ ಸುಂದರವಾದ ಹಾಡಿಗೆ, ಲಂಗಾ ದಾವಣಿ ಧರಿಸಿ, ಸುಂದರವಾಗಿ ಸ್ಟೆಪ್ಸ್ ಹಾಕಿ ರೀಲ್ಸ್ ಮಾಡಿದ್ದಾರೆ. “ಮೊದಲ ರೀಲ್ ಗೆ ನನ್ನ ಮೆಚ್ಚಿನ ಹಾಡು..” ಎಂದು ಕ್ಯಾಪ್ಶನ್ ನೀಡಿ, ಮೊದಲ ಇನ್ಸ್ಟಾಗ್ರಾಮ್ ರೀಲ್ಸ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ ನಟಿ ಅಮೂಲ್ಯ.

ಜೊತೆಗೆ ನಿರ್ದೇಶಕ ತರುಣ್ ಸುಧೀರ್ ಅವರಿಗೆ ವಿಶಸ್ ತಿಳಿಸಿದ್ದಾರೆ. ಇನ್ನು ಅಮೂಲ್ಯ ಅವರ ಈ ರೀಲ್ಸ್ ವಿಡಿಯೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ, ಎರಡು ಮಕ್ಳಳ ತಾಯಿಯ ಹಾಗೆ ನೀವು ಕಾಣಿಸುತ್ತಿಲ್ಲ ಎನ್ನುತ್ತಿದ್ದಾರೆ. ಮಕ್ಕಳಾದ ಬಳಿಕ ಅಮೂಲ್ಯ ಅವರು ಫಿಟ್ನೆಸ್ ಕಡೆಗೆ ಗಮನ ಹರಿಸಿ, ಇನ್ನು ಸ್ಲಿಮ್ ಆಗಿ ಕಾಣುತ್ತಿದ್ದು, ಅಮೂಲ್ಯ ಅವರು ಮಕ್ಕಳಾದ ಬಳಿಕ ಸಹ ಬಹಳ ಸುಂದರವಾಗಿ ಕಾಣುತ್ತಿದ್ದಾರೆ. ಈ ಹೊಸ ರೀಲ್ಸ್ ವಿಡಿಯೋ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ.
View this post on Instagram