AMULYA-LOWDA

ಕಮಲಿ ಸೀರಿಯಲ್ ಮುಗ್ಧ ಹಳ್ಳಿ ಹುಡುಗಿ ಪಾತ್ರದಾರಿ ಅಮೂಲ್ಯ ಗೌಡ,ನಿಜಜೀವನದ ಅವತಾರ ನೋಡಿದ್ರೆ ಗಾಬರಿಯಾಗದೆ ಇರದು ನೋಡಿ.!

Entertainment/ಮನರಂಜನೆ

ಬಣ್ಣದ ಲೋಕದಲ್ಲಿ ನಟಿಸುವ ಹಲವಾರು ನಟ ನಟಿಯರು ಸಿನಿಮಾ ಜೀವನ ಮತ್ತು ನಿಜ ಜೀವನದಲ್ಲಿ ತುಂಬಾ ವ್ಯತ್ಯಾಸಗಳಿರುತ್ತವೆ. ಹೌದು ಪರದೆ ಮೇಲೆ ಅವರು ಪಾತ್ರಗಳನ್ನು ನಿರ್ವಹಿಸುವ ಸಾಕಷ್ಟು ಬದಲಾವಣೆಗಳನ್ನು ಕೂಡ ಮಾಡಿಕೊಂಡಿರುತ್ತಾರೆ. ಪಾತ್ರಕ್ಕೆ ತಕ್ಕಂತೆ ವಿವಿಧ ರೀತಿಯ ಉಡುಪುಗಳನ್ನು ಅವರು ಧರಿಸಬೇಕಾಗುತ್ತದೆ. ಇನ್ನು ಪರದೆ ಮೇಲೆ ಒಂದು ರೀತಿಯ ಉಡುಪು ಧರಿಸಿದರೆ ಜೀವನದಲ್ಲಿ ಮತ್ತೊಂದು ರೀತಿಯ ಉಡುಪನ್ನು ಅವರು ಬಹಳ ಇಷ್ಟಪಡುತ್ತಾರೆ.

ಇದೇ ರೀತಿ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರವಾಹಿ ನಟಿ ಅಮೂಲ್ಯ ಕೂಡ ಪರದೆ ಮೇಲೆ ಹಳ್ಳಿ ಹುಡುಗಿಯಾಗಿ ನಿಜಜೀವನದಲ್ಲಿ ಮಾಡರ್ನ್ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಾರೆ. ಹೌದು ಕಮಲಿ ಧಾರಾವಾಹಿಯ ಮೂಲಕ ಕನ್ನಡಿಗರ ಮನೆಮಾತಾಗಿರುವ ನಟಿ ಅಮೂಲ್ಯ ಗೌಡ ಅವರು ಧಾರಾವಾಹಿಯಲ್ಲಿ ಹಳ್ಳಿಹುಡುಗಿ ಪಾತ್ರಕ್ಕೆ ತಕ್ಕಂತೆ ಎರಡು ಜಡೆಗಳನ್ನು ಹಾಕಿ ಪಕ್ಕ ಹಳ್ಳಿ ಹುಡುಗಿ ಎಂಬಂತೆ ಕಾಣಿಸಿಕೊಳ್ಳುತ್ತಾರೆ. ಆದರೆ ನಿಜಜೀವನದಲ್ಲಿ ಮಾಡರ್ನ್ ಬಟ್ಟೆಗಳನ್ನು ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಇನ್ನು ಹಲವಾರು ಜನರು ಅವರ ಮಾಡರ್ನ್ ಡ್ರೆಸ್ ಕುರಿತಾಗಿ ಹಲವಾರು ಕಮೆಂಟ್ಗಳನ್ನು ಕೂಡ ಮಾಡುತ್ತಾರೆ. ಆದರೆ ಅಮೂಲ್ಯ ಗೌಡ ಅವರು ತೆರೆಮೇಲೆ ಕಾಣುವುದು ಜೀವನದ ಒಂದು ಭಾಗವಾದರೆ, ನಿಜಜೀವನದ ರೂಪರೇಷಗಳು ಬೇರೆಯಾಗಿಯೇ ಇರುತ್ತವೆ ಎಂದು‌ ಹೇಳುತ್ತಾರೆ. ಇನ್ನು ಅಮೂಲ್ಯ ಗೌಡ ಅವರಿಗೆ ಮಾಡೆಲ್ ಡ್ರೆಸ್ ಎಂದರೆ ತುಂಬಾ ಇಷ್ಟವಂತೆ. ಹಾಗಾಗಿ ಅವರು ಮಾಡಲು ಡ್ರೆಸ್ಸನ್ನು ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅಮೂಲ್ಯ ಗೌಡ ಅವರಿಗೆ ಕೀರ್ತಿ ತಂದುಕೊಟ್ಟಿದ್ದು ಕಮಲಿ ಧಾರಾವಾಹಿ. ಧಾರವಾಹಿಯಲ್ಲಿ ಅಮೂಲ್ಯ ಗೌಡ ಅವರು ಕಮಲಿ ಪಾತ್ರದಲ್ಲಿ ಮಿಂಚಿದ್ದಾರೆ.

ಎರಡು ಜಡೆಗಳನ್ನು ಹಾಕಿಕೊಂಡು, ಲಂಗ ದಾವಣಿ ಧರಿಸಿ, ಮಂಡ್ಯ ಭಾಷೆ ಮಾತನಾಡುತ್ತಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿರುವ ಅಮೂಲ್ಯ ಗೌಡ ಅವರು ಇದೀಗ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಇನ್ನು ಅವರ ಇಂತಹ ಹಳ್ಳಿ ಹುಡುಗಿಯ ಪಾತ್ರಕ್ಕೂ ನಿಜ ಜೀವನಕ್ಕೂ ತುಂಬಾ ವ್ಯತ್ಯಾಸವಿದೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅಮೂಲ್ಯ ಗೌಡ ಅವರು ಮೋಡರ್ನ್ ಲುಕ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಇವರ ಮಾಡರ್ನ್ ಲುಕ್ ಕೆಲವರಿಗೆ ಇಷ್ಟವಾದರೆ ಮತ್ತೆ ಕೆಲವರಿಗೆ ಇವರು ಹಳ್ಳಿ ಹುಡುಗಿಯಾಗಿ ಕಾಣಬೇಕೆಂಬ ಆಸೆ ಇದೆಯಂತೆ. ಅಮೂಲ್ಯ ಗೌಡ ಅವರು ಯಾರಿಗುಂಟು ಯಾರಿಗಿಲ್ಲ ಎಂಬ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದರು.

ನಂತರ ಅವರಿಗೆ ಪುನರ್ ವಿವಾಹ, ಸ್ವಾತಿಮುತ್ತು, ಅರಮನೆ ಹೀಗೆ ಮುಂತಾದ ಧಾರಾವಾಹಿಗಳಲ್ಲಿ ಘಟಿಸುವ ಅವಕಾಶ ಒದಗಿ ಬಂದಿದ್ದು, ಈ ಧಾರವಾಹಿಗಳಲ್ಲಿ ಅವರು ಹೆಚ್ಚಾಗಿ ಮಾಡರ್ನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಇವರಿಗೆ ಖ್ಯಾತಿ ಮತ್ತು ಕೀರ್ತಿಯನ್ನು ತಂದುಕೊಟ್ಟಿದ್ದು ಮಾತ್ರ ಕಮಲಿ ಧಾರಾವಾಹಿ. ಇನ್ನು ಇದೀಗ ಹಲವಾರು ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಒದಗಿ ಬಂದಿದ್ದು, ಅಮೂಲ್ಯ ಗೌಡ ಅವರು ಅನ್ನ ಹಾಕಿದ ಕಮಲಿ ಧಾರಾವಾಹಿಯನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳುತ್ತಾರೆ. ಇನ್ನು ಅವರ ಮಾಡರ್ನ್ ಲುಕ್ ಫೋಟೋಗಳನ್ನು ನೀವು ಇಲ್ಲಿ ವೀಕ್ಷಿಸಬಹುದು. ಇನ್ನು ಈ ಸುದ್ದಿ ನಿಮಗೆ ಇಷ್ಟವಾಗಿದ್ದರೆ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.