ಧಾರಾವಾಹಿಗಳ ಮೂಲಕ ಹಲವಾರು ಕಲಾವಿದರು ಕರ್ನಾಟಕದ ಮನೆಮಾತಾಗಿದ್ದಾರೆ. ಅದರಲ್ಲೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಕಿರುತೆರೆ ವೀಕ್ಷಕರ ಮನಸ್ಸಿಗೆ ಬಹಳ ಹತ್ತಿರವಾಗಿದೆ. ಟಿ.ಆರ್.ಪಿ ಯಲ್ಲಿ ಸಹ ಒಳ್ಳೆಯ ಸ್ಥಾನ ಗಳಿಸಿದೆ. ಜೀ ಕನ್ನಡ ವಾಹಿನಿಯ ಪ್ರಮುಖ ಧಾರಾವಾಹಿಗಳಲ್ಲಿ ಒಂದು ಕಮಲಿ. ಹಳ್ಳಿ ಹುಡುಗಿಯ ಕನಸಿನ ಕಥೆ ಕಮಲಿ. ಈ ಧಾರಾವಾಹಿ ಒಳ್ಳೆಯ ಕಥೆ ಹಾಗೂ ಉತ್ತಮ ತಾರಾಗಣ ಹೊಂದಿದ್ದ ಕಾರಣ ಬಹಳ ಜನಪ್ರಿಯತೆ ಗಳಿಸಿತು.

ನಾಯಕಿ ಪಾತ್ರ ನಿರ್ವಹಿಸುವ ಅಮೂಲ್ಯ ಗೌಡ ಈ ಧಾರಾವಾಹಿಯಿಂದ ಬಹಳಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಹಳ್ಳಿ ಹುಡುಗಿಯ ಹಾಗೆ ನಟಿಸಿರುವ ಇವರ ಮುಗ್ಧತೆಗೆ ಕರ್ನಾಟಕದ ಜನತೆ ಫಿದಾ ಆಗಿದ್ದಾರೆ. ರಾಜ್ಯದ ಪ್ರತಿ ಮನೆಯಲ್ಲೂ ಸಹ ಕಮಲಿಯನ್ನು ತಮ್ಮ ಮನೆ ಮಗಳಂತೆಯೇ ಭಾವಿಸುತ್ತಾರೆ. ಕಮಲಿ ಪಾತ್ರ ನಿರ್ವಹಿಸುವ ನಟಿ ಅಮೂಲ್ಯ ಗೌಡ ವೈಯಕ್ತಿಕ ಜೀವನದ ಬಗ್ಗೆ ನಿಮಗೆ ತಿಳಿದಿದೆಯೇ..? ನಿಜ ಜೀವನದಲ್ಲಿ ಅವರು ಹೇಗಿದ್ದಾರೆ ಎಂದು ತಿಳಿಯಲು ಮುಂದೆ ಓದಿ.

ಅಮೂಲ್ಯ ಗೌಡ ಹುಟ್ಟಿದ್ದು ಜನವರಿ 8, 1993 ರಲ್ಲಿ. ಇವರಿಗೆ ಈಗ 27 ವರ್ಷ ವಯಸ್ಸು. ಇವರು ಮೂಲತಃ ಮೈಸೂರಿನವರು. ಇವರ ತಂದೆಯ ಹೆಸರು ಓಂಕಾರ್ ಗೌಡ. ಇವರು ಬೆಳೆದದ್ದೆಲ್ಲ ಮೈಸೂರಿನಲ್ಲೇ. 2014 ರಲ್ಲಿ ಸ್ವಾತಿ ಮುತ್ತು ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟನೆ ಶುರು ಮಾಡಿದರು. ಅದಾದ ನಂತರ ಪುನರ್ ವಿವಾಹ, ಹಾಗೂ ಅರಮನೆ ಧಾರಾವಾಹಿಗಳಲ್ಲಿ ನಟಿಸಿದರು. ಆದರೆ ಹೆಚ್ಚಿನ ಜನಪ್ರಿಯತೆ ಸಿಕ್ಕಿದ್ದು ಕಮಲಿ ಧಾರಾವಾಹಿ ಮೂಲಕ.
ಕಮಲಿ ಧಾರಾವಾಹಿಯಲ್ಲಿ ಹಳ್ಳಿಯ ಹುಡುಗಿ ಪಾತ್ರದಲ್ಲಿ ನಟಿಸಿ ಜನರ ಮನಸ್ಸಿಗೆ ಹತ್ತಿರವಾದರು ಅಮೂಲ್ಯ ಗೌಡ. ಹಳ್ಳಿ ಹುಡುಗಿಯ ಮುಗ್ಧತೆ ಜೊತೆಗೆ ಓದಿ ಸಾಧಿಸಬೇಕು ಎಂಬ ಮನೋಸ್ಥೈರ್ಯ ಹೊಂದಿದ್ದ ಕಮಲಿ ಪಾತ್ರ ಎಲ್ಲರನ್ನು ಆಕರ್ಷಿಸಿತು. ಧಾರಾವಾಹಿಯಲ್ಲಿ ಹಳ್ಳಿ ಹುಡುಗಿಯ ಹಾಗೆ ಲಂಗ ದಾವಣಿ ತೊಟ್ಟು ಮುಗ್ಧತೆಯಿಂದ ಇರುವ ಅಮೂಲ್ಯ ಗೌಡ ನಿಜ ಜೀವನದಲ್ಲಿ ಅದಕ್ಕೆ ವಿರುದ್ಧ. ಅವರನ್ನು ನೋಡಿದರೆ, ಇದು ಕಮಲಿನ ಅಂತ ಒಂದು ಕ್ಷಣ ಅನ್ನಿಸುವುದು ಸಹಜ.

ವೈಯಕ್ತಿಕ ಜೀವನದಲ್ಲಿ ಬಹಳ ಕ್ಯಾಶುವಲ್ ಆಗಿ ಇರುವ ಅಮೂಲ್ಯ ಯಾವಾಗಲೂ ಮಾಡರ್ನ್ ಉಡುಪನ್ನೇ ಧರಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಅಮೂಲ್ಯ ತಮ್ಮ ವೈಯಕ್ತಿಕ ಜೀವನದ ಸುಂದರ ಕ್ಷಣಗಳ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಲಾಕ್ ಡೌನ್ ಸಮಯದಲ್ಲಿ ಪೋಸ್ಟ್ ಮಾಡಿದ್ದ ಅಮೂಲ್ಯರ ಫೋಟೋಗಳು ಬಹಳ ವೈರಲ್ ಆಗಿದ್ದವು. ಮಿನಿ ಸ್ಕರ್ಟ್ ಮತ್ತು ಕ್ರಾಪ್ ಟಾಪ್ ಧರಿಸಿದ್ದ ಅಮೂಲ್ಯರ ಫೋಟೋಗಳಿಗೆ ಕರ್ನಾಟಕದ ಹುಡುಗರು ಫಿದಾ ಆಗಿದ್ದರು.