amulya-ganesh

ಅಮೂಲ್ಯ ಮಗುವಿನ ಜೊತೆ ಆಟವಾಡಿದ ಗಣೇಶ್,ಗರಂ ಆದ ಜಗದೀಶ್

Entertainment/ಮನರಂಜನೆ

ಅಮೂಲ್ಯ ಅವರು ಅತಿ ಚಿಕ್ಕ ವಯಸ್ಸಿನಲ್ಲಿ ಹೀರೋಯಿನ್ ಆಗಿ ನಟಿಸಿ ಕನ್ನಡಿಗರ ಮನಗೆದ್ದು ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್ ಎಂದೇ ಹೆಸರುವಾಸಿಯಾಗಿದ್ದಾರೆ. ಆರನೇ ವಯಸ್ಸಿನಲ್ಲಿಯೇ ನಟಿ ಅಮೂಲ್ಯ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹದಿಮೂರನೇ ವಯಸ್ಸಿಗೆ ಚೆಲುವಿನ ಚಿತ್ತಾರ ಎಂಬ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸುವ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ಸ್ಟಾರ್ ನಟಿಯಾಗಿ ಹೆಸರು ಗಿಟ್ಟಿಸಿಕೊಂಡಿದ್ದ‍ಾರೆ.

ಹೈಸ್ಕೂಲು ಓದುತ್ತಿದ್ದ ವಿದ್ಯಾರ್ಥಿನಿ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮುವುದು ತಮಾಷೆಯ ಮಾತಲ್ಲ. ನಟಿ ಅಮೂಲ್ಯ ಈ ವಿಷಯದಲ್ಲಿ ತುಂಬಾ ಅದೃಷ್ಟವಂತೆ. ನಟಿ ಅಮೂಲ್ಯ ಕೆಲವೇ ಚಿತ್ರಗಳಲ್ಲಿ ಅಭಿನಯಿಸಿದ್ದರೂ ಕೂಡ ಮಾಡಿರುವ ಚಿತ್ರಗಳೆಲ್ಲ ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿವೆ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಕೂಡ ಅಮೂಲ್ಯ ತೆರೆ ಹಂಚಿಕೊಂಡಿದ್ದಾರೆ

ಹಾಗೆ ಅಮೂಲ್ಯ ಅವರ ನಟನೆಗೆ ಫಿಲ್ಮ್ಫೇರ್ ಪ್ರಶಸ್ತಿಗಳು ಕೂಡ ಲಭಿಸಿವೆ ವಿಶೇಷವಾಗಿ ಅಮೂಲ್ಯ ಮತ್ತು ಗಣೇಶ್ ಅವರ ಜೋಡಿ ತೆರೆ ಮೇಲೆ ತುಂಬಾ ಮುದ್ದಾಗಿ ಕಾಣಿಸುತ್ತಿತ್ತು. ಈ ಜೋಡಿ ನಟಿಸಿರುವ ಸಿನಿಮಾಗಳೆಲ್ಲಾ ಸೂಪರ್ ಡೂಪರ್ ಹಿಟ್ ಆಗಿವೆ. ಬಾಲ ನಟಿಯಾಗಿ ಯಶಸ್ಸು ಕಂಡಿದ್ದ ಅಮೂಲ್ಯ ನಿಧಾನವಾಗಿ ಚಿತ್ರರಂಗದಿಂದ ದೂರ ಉಳಿಯಲು ಪ್ರಾರಂಭಿಸುತ್ತಾರೆ. 2017 ರ ನಂತರ ಅಮೂಲ್ಯ ಅವರು ವಿವಾಹಿಕ ಜೀವನಕ್ಕೆ ಕಾಲಿಡುತ್ತಾರೆ ಮತ್ತು ಅದಾದ ನಂತರ ಎನ್ನುವ ಕನ್ನಡ ಸಿನಿಮಾಗಳಲ್ಲಿ ಕೂಡ ಅಮೂಲ್ಯ ಅವರು ಕಾಣಿಸಿಕೊಳ್ಳಲಿಲ್ಲ.

ಆದರೆ ಇಂದಿಗೆ ಕೂಡ ಅಮೂಲ್ಯ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಡಿಮಾಂಡ್ ಇದೆ. ಕಳೆದ ಎರಡು ವರ್ಷಗಳ ಹಿಂದೆ ಡಿಸೆಂಬರ್ ತಿಂಗಳಿನಲ್ಲಿ ಅಮೂಲ್ಯ ಅವರು ಗರ್ಭಿಣಿಯಾಗಿರುವ ವಿಷಯವನ್ನು ಹಂಚಿಕೊಂಡಿದ್ದರು. ಅಮೂಲ್ಯ ಅವರು ತಾಯಿಯಾಗುತ್ತಿರುವ ವಿಷಯ ಇಡೀ ಕರ್ನಾಟಕಕ್ಕೆ ಖುಷಿ ತಂದುಕೊಟ್ಟಿದೆ ಎಂದು ಮಾಧ್ಯಮಗಳೆಲ್ಲ ಪ್ರಸಾರ ಮಾಡಿದ್ದರು.ಅದರಂತೆ ಅಮೂಲ್ಯ ಅವರಿಗೆ ಅವಳಿ ಜವಳಿ ಗಂಡು ಮಕ್ಕಳು ಕೂಡ ಜನಿಸಿದ್ದಾರೆ.

ಶಿವರಾತ್ರಿ ದಿನ ಹುಟ್ಟಿದ್ದದಿಂದ ಮಕ್ಕಳಿಗೆ ಅಥರ್ವ ಹಾಗೂ ಆಧವ್ ಎಂದು ಹೆಸರಿಟ್ಟಿದ್ದಾರೆ. ಇನ್ನು ಮಕ್ಕಳು ಹುಟ್ಟಿದ್ದಾಗ ಸಹ ಗಣೇಶ್ ಅವರು ಬಂದು ನೋಡಿದ್ದರು. ಆದಂತೆ ಇತ್ತೀಚಿಗೆ ಕೂಡ ಪತ್ನಿಯೊಂದಿಗೆ ಅಮೂಲ್ಯ ಮನೆಗೆ ಭೇಟಿನೀಡಿ ಮಕ್ಕೊಳೊಂದಿಗೆ ಆನಂದದಿಂದ ಆಟ ಆಡಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.