ಬಿಗ್ ಬಾಸ್ ಮನೆಯಿಂದ ಹೊರಬಂದು ಸಿಹಿ ಸುದ್ದಿ ನೀಡಿದ ರಾಕೇಶ್ ಅಡಿಗ ಮತ್ತು ಅಮೂಲ್ಯ ಗೌಡ! ನಾಲಿಗೆ ಹೊರಹಾಕಿ ಅಮೂಲ್ಯ ಹೇಳಿದ್ದೇನು ನೋಡಿ!!

Kannada News: ಬಿಗ್ ಬಾಸ ಸೀಸನ್ 9 ಗ್ರಾಂಡ್ (Bigg Boss season 9) ಆಗಿ ಮುಗಿದಿದೆ. ಬಿಗ್ ಬಾಸ್ ಮನೆಯಲ್ಲಿ 18 ಸ್ಪರ್ಧಿಗಳು ತಮ್ಮದೇ ಆದ ರೀತಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಆಟ ಆಡಿದ್ದಾರೆ. ಮನೋರಂಜನೆ (entertainment) ನೀಡಿದ್ದಾರೆ. ಒಂದೊಂದೇ ವಾರ ಮುಗಿಯುತ್ತಿದ್ದಂತೆ ಒಬ್ಬೊಬ್ಬರೇ ಸ್ಪರ್ಧಿಗಳು (contestent) ಮನೆಯಿಂದ ಹೊರ ಹೋಗುತ್ತಾರೆ. ಕೊನೆಯಲ್ಲಿ ಉಳಿದ ಮೂರು ಸ್ಪರ್ಧಿಗಳು ಟ್ರೋಫಿಗಾಗಿ ಜಿದ್ದಾ ಜಿದ್ದಿ ನಡೆದು ಕಡೆಗೆ ವಿನ್ನರ್ ರೂಪೇಶ್ ಶೆಟ್ಟಿ (roopesh Shetty)ಎಂದು ಘೋಷಣೆಯು ಆಗತ್ತೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ, ಕೆಲವು ಸ್ಪರ್ಧಿಗಳು ಪರಸ್ಪರ ಬಾಂಡಿಂಗ್ ಬೆಳೆಸಿಕೊಂಡಿರುತ್ತಾರೆ. ಅದರಲ್ಲಿ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆದ ಜೋಡಿ ಅಂದ್ರೆ ರೂಪೇಶ್ ಶೆಟ್ಟಿ ಹಾಗೂ ಸಾನಿಯಾ ಅಯ್ಯರ್ (sanya ayyar) ಅದೇ ರೀತಿ ರಾಕೇಶ್ ಅಡಿಗ (rakesh adiga) ಹಾಗೂ ಅಮೂಲ್ಯ ಗೌಡ (amulya gowda) ಜೋಡಿ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ರೂಪೇಶ್ ಶೆಟ್ಟಿ ಹಾಗೂ ಸಾನಿಯಾ ಅಯ್ಯರ್ ಇಬ್ಬರೂ ಓಟಿಟಿಯಲ್ಲಿ ಒಟ್ಟಿಗೆ ಸ್ಪರ್ಧಿಗಳಾಗಿ ಇದ್ದವರು ಕೊನೆಗೆ ಬಿಗ್ ಬಾಸ್ ಸೀಸನ್ 9 ಕೂಡ ಆಯ್ಕೆಯಾಗಿದ್ದರು.

ಇನ್ನು ರಾಕೇಶ ಅಡಿಗ ಕೂಡ ಓಟಿಪಿ ಸ್ಪರ್ಧಿಯಾಗಿಯೇ ಬಿಗ್ ಬಾಸ್ ಸೀಸನ್ 9ರ ಮನೆಯಲ್ಲಿ ಮುಂದುವರೆದಿದ್ದವರು. ಇನ್ನು ಬಿಗ್ ಬಾಸ್ ಸೀಸನ್ 9ಕ್ಕೆ ನವೀನರ ಸಾಲಿನಲ್ಲಿ ಅಮೂಲ್ಯ ಗೌಡ ಕೂಡ ಸ್ಪರ್ಧಿಯಾಗಿ ಬಂದಿದ್ದರು. ಫಿನಾಲೆ ವಾರದ ವರೆಗೂ ಬಿಗ್ ಬಾಸ್ ಮನೆಯಲ್ಲಿ ಇದ್ದ ಅಮೂಲ್ಯ ಅತ್ಯುತ್ತಮ ಆಟ ಪ್ರದರ್ಶನ ಮಾಡಿದ್ದಾರೆ. ಹೌದು ಅಮೂಲ್ಯ ಗೌಡ ಬಹುತೇಕ ಎಲ್ಲಾ ಟಾಸ್ಕ್ಗಳಲ್ಲಿಯೂ ಕೂಡ ಅತ್ಯುತ್ತಮವಾಗಿ ಆಟ ಆಡಿದ್ದಾರೆ ಇನ್ನು ಮನೋರಂಜನೆಗೆ ವಿಷಯಕ್ಕೆ ಬಂದರೆ ಮಾತ್ರ ತುಸು ಕಡಿಮೆ ಎನಿಸುತ್ತಿತ್ತು ಅದನ್ನು ಬಿಟ್ಟರೆ ಬಿಗ್ ಬಾಸ್ ಮನೆಯಲ್ಲಿ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

Rakesh adiga amulya gowda recent photos

ರಾಕೇಶ್ ಅಡಿಗ ಬಹಳ ಸೈಲೆಂಟ್ ಹಾಗೂ ತಾಳ್ಮೆಯಿಂದ ಇರುವ ವ್ಯಕ್ತಿತ್ವಕ್ಕೆ ಹೆಸರಾದವರು. ಬಿಗ್ ಬಾಸ್ ಮನೆಯಲ್ಲಿ ಎಂತಹ ಟಾಸ್ಕ್ ಇದ್ದರೂ ಸ್ವಲ್ಪ ಕೋಪ ಮಾಡಿಕೊಳ್ಳದೆ ಆ ಟಾಸ್ಕ್ ಗಳನ್ನು ಕಂಪ್ಲೀಟ್ ಮಾಡುತ್ತಿದ್ದರು. ಯಾರ ಜೊತೆಗೂ ಜಗಳ ಆಡದೆ ಬೇಕಾ ಬಾಸ್ ಮನೆಯ ಜರ್ನಿಯನ್ನು ಕಂಪ್ಲೀಟ್ ಮಾಡಿರುವ ಏಕೈಕ ವ್ಯಕ್ತಿ ಅಂದ್ರೆ ಅದು ರಾಕೇಶ್ ಅಡಿಗ. ರಾಕೇಶ್ ಅಡಿಗ ಹಾಗೂ ಅಮೂಲ್ಯ ಗೌಡ ಅವರ ಸ್ವಭಾವ ವಿರುದ್ಧವಾಗಿದ್ದರು ಇಬ್ಬರ ನಡುವೆ ಉತ್ತಮ ಸ್ನೇಹ ಬೆಳೆದಿತ್ತು.

ಅಮೂಲ್ಯ ಗೌಡ ಸದಾ ರಾಕೇಶ್ ಅಡಿಗ ಅವರಿಗೆ ಅಂಟಿಕೊಂಡೆ ಇರುತ್ತಿದ್ದರು. ಇವರಿಬ್ಬರ ನಡುವಿನ ಸ್ನೇಹವನ್ನು ಪ್ರೀತಿಯು ಇರಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಆದರೆ ನಮ್ಮಿಬ್ಬರದು ಕೇವಲ ಸ್ನೇಹ ಅಷ್ಟೇ ಎಂದು ಈಗಾಗಲೇ ಅಮೂಲ್ಯ ಹಾಗೂ ರಾಕೇಶ್ ಅಡಿಗ ಸ್ಪಷ್ಟನೆಯನ್ನು ಕೂಡ ನೀಡಿದ್ದರು. ಇನ್ನು ಬಿಗ್ ಬಾಸ್ ಮನೆಯಿಂದ ಹೊರಬಂದ ರಾಕೇಶ್ ಅಡಿಗ ಹಾಗೂ ಅಮೂಲ್ಯ ಗೌಡ ಬಿಗ್ ಬಾಸ್ ಮನೆಯಿಂದ ಆಚೆಯೂ ಕೂಡ ಭೇಟಿ ಆಗಿದ್ದಾರೆ.

ಬಿಗ್ ಬಾಸ್ ಸ್ಪರ್ಧೆಯನ್ನು ಮುಗಿಸಿದ ನಂತರವೂ ಇವರಿಬ್ಬರ ಸ್ನೇಹ ಅದೇ ರೀತಿ ಮುಂದುವರೆಯುತ್ತಾ ಇರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ರಾಕೇಶ್ ಅಡಿಗ ಅವರನ್ನ ಭೇಟಿ ಆಗಿರುವ ಅಮೂಲ್ಯ ಗೌಡ ಅವರ ಜೊತೆಗೆ ತರಾವರಿ ಸೆಲ್ಫಿ ತೆಗೆದುಕೊಂಡು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನನಗೆ ಸಿಕ್ಕ ಜೀವನದ ಅತ್ಯುತ್ತಮ ಗೆಳೆಯ ನೀನು, ನಿನ್ನಷ್ಟು ತಾಳ್ಮೆಯಿಂದ ಇರಲು ಹೇಗೆ ಸಾಧ್ಯ ಇಂತಹ ವ್ಯಕ್ತಿಯು ಇರುತಾನ ಎಂದು ನನಗೆ ಸಾಕಷ್ಟು ಬಾರಿ ಅನ್ನಿಸಿದೆ ನಿನ್ನ ಸ್ನೇಹಕ್ಕೆ ಧನ್ಯವಾದಗಳು ಎಂದು ಅಮೂಲ್ಯ ಗೌಡ ರಾಕೇಶ್ ಅಡಿಗ ಅವರ ಬಗ್ಗೆ ಬರೆದುಕೊಂಡಿದ್ದಾರೆ.

Rakesh adiga amulya gowda recent photos
Rakesh adiga amulya gowda recent photos

ಅಮೂಲ್ಯ ಗೌಡ ಹಾಗೂ ರಾಕೇಶ್ ಅಡಿಗ ಅವರ ಹೆಸರಿನಲ್ಲಿ ರಾಕುಲ್ಯ ಎನ್ನುವ ಫ್ಯಾನ್ಸ್ ಪೇಜ್ ಕೂಡ ಓಪನ್ ಆಗಿದ್ದು, ಇವರಿಬ್ಬರ ಸ್ನೇಹ ಹೀಗೆ ಸದಾ ಕಾಲ ಇರಲಿ ಇವರು ಯಾವಾಗಲೂ ಜೀವನದಲ್ಲಿ ಸಂತೋಷವಾಗಿರಲಿ ಎಂದು ಕಮೆಂಟ್ ಕೂಡ ಮಾಡುತ್ತಿದ್ದಾರೆ. Rakesh adiga amulya gowda recent photos ಇನ್ನು ಬಿಗ್ ಬಾಸ್ ನ ಬಹುತೇಕ ಎಲ್ಲಾ ಸ್ಪರ್ಧಿಗಳು ಮತ್ತೆ ಮತ್ತೆ ಬಿಗ್ ಬಾಸ್ ಮನೆಯಿಂದ ಆಚೆಯೂ ಭೇಟಿಯಾಗುತ್ತಾ ತಮ್ಮ ಸ್ನೇಹ ಸಂಬಂಧ ಮುಂದುವರಿಸುತ್ತಿರುವುದು ಖುಷಿಯ ವಿಚಾರ. ಅಮೂಲ್ಯ ಗೌಡ ಹಾಗೂ ರಾಕೇಶ್ ಅಡಿಗ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮಾಡಿ ತಿಳಿಸಿ.You might also like

Comments are closed.