ಬಿಗ್ ಬಾಸ್ ಸೀಸನ್ 9 ಸಿಕ್ಕಾಪಟ್ಟೆ ಥ್ರಿಲಿಂಗ್ ಆಗಿದೆ. ಈಗಾಗಲೇ ಮನೆಯಲ್ಲಿ ಇರುವ ಎಲ್ಲಾ ಸದಸ್ಯರ ಮನೆಯವರು ಬಿಗ್ ಬಾಸ್ ಮನೆಯ ಒಳಗೆ ಬಂದು ಹೋಗಿದ್ದಾರೆ. ತಮ್ಮ ಮನೆಯವರನ್ನು ನೋಡಿದ ಖುಷಿಯಲ್ಲಿ ಎಲ್ಲಾ ಸ್ಪರ್ಧಿಗಳು ಕಣ್ಣೀರಿಟ್ಟಿದ್ದಾರೆ, ಭಾವುಕರಾಗಿದ್ದರು. ಇನ್ನೇನು ಗ್ರ್ಯಾಂಡ್ ಫೈನಲ್ ಹತ್ತಿರ ಬರುತ್ತಿದೆ. ಸ್ಪರ್ಧಿಗಳಲ್ಲಿ ಉಳಿದುಕೊಳ್ಳುವ ಆಸೆ, ಮನೆಯಿಂದ ಹೋಗುವ ಆತಂಕವೂ ಜಾಸ್ತಿ ಆಗುತ್ತಿದೆ.
ಇನ್ನು ವಾರಾಂತ್ಯದ ಕಿಚ್ಚನ ಪಂಚಾಯ್ತಿ ಯಲ್ಲಿ ಸಾಕಷ್ಟು ವಿಚಾರಗಳ ಚರ್ಚೆ ಆಗುತ್ತಿದೆ. ವಾರ ಪೂರ್ತಿ ಮನೆಯವರ ಬರುವಿಕೆಗಾಗಿ ಕಾದ ಬಿಗ್ ಬಾಸ್ ಸ್ಪರ್ಧಿಗಳು ಅದಕ್ಕಾಗಿ ಬ್ಯಾಟರಿ ರಿಚಾರ್ಜ್ ಟಾಸ್ಕ್ ಗಳನ್ನು ಬಹಳ ಮುತುವರ್ಜಿಯಿಂದ ಆಡಿದ್ದರು. ಎಲ್ಲಾ ಸ್ಪರ್ಧಿಗಳೂ ಬಿಗ್ ಬಾಸ್ ನಿಯಮವನ್ನ ಸರಿಯಾಗಿ ಪಾಲಿಸಿದ್ದರು. ಆದರೂ ಪ್ರಶಾಂತ್ ಸಂಬರ್ಗಿ ಹಾಗೂ ಉಳಿದ ಒಂದೆರಡು ಸದಸ್ಯರು, ಬಿಗ್ ಬಾಸ್ ನಿಯಮವನ್ನು ಮುರಿದ ಕಾರಣ ಬ್ಯಾಟರಿ ಚಾರ್ಜ್ ಕಳೆದುಕೊಂಡಿದ್ದರು.
ಕೊನೆಯಲ್ಲಿ ಇದ್ದ ಕಾವ್ಯಶ್ರೀ, ದೀಪಿಕಾ ದಾಸ್ ಹಾಗೂ ರೂಪೇಶ್ ಶೆಟ್ಟಿ ಅವರು ತಮ್ಮ ಮನೆಯವರನ್ನ ಭೇಟಿ ಮಾಡಲು ಕೇವಲ ಮೂರು ನಿಮಿಷಗಳ ಸಮಯ ಮಾತ್ರ ಇತ್ತು. ಇದರಿಂದ ಈ ಮೂರು ತುಂಬಾನೇ ಬೇಸರಗೊಂಡಿದ್ದರು. ಕೊನೆಗೆ ರೂಪೇಶ್ ಶೆಟ್ಟಿ ಕನ್ಫೇಷನ್ ರೂಮ್ ಗೆ ಹೋದಾಗ ಬಿಗ್ ಬಾಸ್ ಈ ವಾರ ಸ್ಪರ್ದಿಗಳು ಮನೆಯವರನ್ನು ಭೇಟಿ ಆಗಲಿ ಎನ್ನುವುದೇ ಉದ್ದೇಶ. ಹಾಗಾಗಿ ಟಾಸ್ಕ್ ನಲ್ಲಿ ಸೋತರು ಮತ್ತೆ ಬ್ಯಾಟರಿ ಫುಲ್ ಚಾರ್ಜ್ ಮಾಡುವುದಾಗಿ ಹೇಳುತ್ತಾರೆ.
ಕೊನೆಗೆ ಬಿಗ್ ಬಾಸ್ ನ ಎಲ್ಲಾ ಸ್ಪರ್ಧಿಗಳು ಮನೆಯವರನ್ನ ಭೇಟಿಯಾಗಿದ್ದಾರೆ. ಇದೇ ಖುಷಿಯಲ್ಲಿ ವಾರಾಂತ್ಯದ ಕಿಚ್ಚ ಸುದೀಪ್ ಅವರ ಪಂಚಾಯಿತಿ ಆರಂಭವಾಗಿತ್ತು. ಈ ಸಮಯದಲ್ಲಿ ಅಮೂಲ್ಯ ಅವರನ್ನು ಕಿಚ್ಚ ಸುದೀಪ್ ಹಾಲಿನ ವಿಷಯಕ್ಕೆ ಪ್ರಶ್ನೆ ಮಾಡಿದ್ದಾರೆ. ಅಮೂಲ್ಯ ಅವರು ತನಗೆ ಗಟ್ಟಿ ಹಾಲು ಬೇಕು. ನನ್ನ ಹಾಲಿನ ಪ್ಯಾಕೆಟ್ ಸಪರೇಟ್ ಆಗಿ ಇಡಿ ಎಂದು ವಾದ ಮಾಡಿದ್ದರು.
ಇದು ಮನೆಯ ಇತರ ಸದಸ್ಯರಿಗೆ ಬೇಸರವಾಗಿತ್ತು ಎಲ್ಲರೂ ಒಟ್ಟಿಗೆ ಸೇರಿ ಟೀ ಮಾಡಿಕೊಂಡು ಕುಡಿಯೋಣ ಅಂತ ಒಮ್ಮತದ ಅಭಿಪ್ರಾಯಕ್ಕೆ ಬಂದಿದ್ದರು. ಆದರೆ ಅಮೂಲ್ಯ ಮಾತ್ರ ಈ ಮಾತನ್ನು ಒಪ್ಪದೆ ನನಗೆ ಸಪರೇಟ್ ಹಾಲನ್ನು ಕೊಡಬೇಕು ಎಂದು ಹೇಳಿದರು. ಈ ಬಗ್ಗೆ ಪ್ರಶ್ನಿಸಿದ ಕಿಚ್ಚ ಸುದೀಪ್ ‘ಅಮೂಲ್ಯ ಅವರೇ ನಿಮಗೆ ಗಟ್ಟಿ ಹಾಲು ಬೇಕು ಎಂದು ಹೇಳಿದ್ದೀರಿ ಇನ್ನು ಕೆಲವು ಸಂದರ್ಭಗಳಲ್ಲಿ ಹೀಗೆ ಆಗಿದೆ.
ನಿಮಗೆ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟ ಆಗ್ತಿದ್ಯಾ ಅಥವಾ ಇದಕ್ಕೆ ಬೇರೆ ಏನಾದರೂ ಕಾರಣ ಇದಿಯಾ?’ ಎಂದು ಪ್ರಶ್ನಿಸಿದ್ದಾರೆ. ‘ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟ ಆಗುತ್ತಿಲ್ಲ ಸರ್, ಆದರೆ ನಾನು ಕುಡಿಯುವುದು ಎರಡೇ ಸಲ ಟೀ ಹಾಗಾಗಿ ನೀರು ಹಾಕದೆ ಗಟ್ಟಿಯಾಗಿರುವ ಹಾಲು ಬೇಕು ಎಂದು ಹೇಳಿದೆ. ಅದರಲ್ಲೂ ಬೇರೆಯವರಿಗೆ ತೊಂದರೆ ಆಗದೆ ಇರುವ ರೀತಿಯಲ್ಲಿ ನನ್ನ ಪಾಲಿನ ಹಾಲನ್ನು ತೆಗೆದುಕೊಳ್ಳಲು ಅವಕಾಶ ಇದೆ ಎನ್ನುವ ಕಾರಣಕ್ಕಾಗಿ ಮಾತ್ರ ಕೇಳಿದ್ದೇನೆ.
ಇನ್ನು ಎಲ್ಲರೂ ಒಟ್ಟಾಗಿ ಕುಳಿತು ಕಾಫಿ ಕುಡಿಯಬೇಕು ಎನ್ನುವ ವಿಚಾರವಾಗಿ ಇಲ್ಲಿ ಒಬ್ಬೊಬ್ಬರು ಒಂದೊಂದು ಸಮಯಕ್ಕೆ ಕಾಫಿ ಟೀ ಕುಡಿಯುತ್ತಾರೆ. ಎಲ್ಲರೂ ಒಟ್ಟಾಗಿ ಎಷ್ಟು ಕಾಫಿ ಕುಡಿಯುತ್ತಾರೆ ಅನ್ನೋದು ಅವರವರಿಗೆ ಗೊತ್ತು’ ಎಂದು ಅಮೂಲ್ಯ ಉತ್ತರಿಸುತ್ತಾರೆ ಇನ್ನು ಮನೆಯ ಕೆಲವು ಸದಸ್ಯರು ಅಮೂಲ್ಯ ಮಾತಿಗೆ ಸಹಮತ ಸೂಚಿಸಿದರೆ ಬಹುತೇಕ ಎಲ್ಲರೂ ಒಟ್ಟಾಗಿ ಕಾಫಿ ಟೀ ಮಾಡಿಕೊಂಡು ಕುಡಿಯಬೇಕು ಎನ್ನುವ ಮಾತನ್ನೇ ಹೇಳಿದ್ದಾರೆ.
ಒಟ್ಟಿನಲ್ಲಿ ಅಮೂಲ್ಯ ಅವರು ತಮಗೆ ಬೇಕಾಗಿರುವ ವಿಷಯದ ಬಗ್ಗೆ ಸ್ವಲ್ಪವೂ ಹಿಂಜರಿಕೆ ಇಲ್ಲದೆ ಧ್ವನಿ ಎತ್ತುತ್ತಾರೆ. ಇದೇ ಅವರು ಮುಂದಿನ ದಿನಗಳಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಕಾರಣವಾಗಬಹುದು ಎನ್ನುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.