1 ರೂ ಪೇಮೆಂಟ್ ಮಾಡಿ ಮಾರುತಿ ಕಾರು ಖರೀದಿಸಿ : ಮಾರುತಿ ಕೊಡ್ತಿದೆ ಬಂಪರ್ ಆಫರ್

ಅತಿ ದೊಡ್ಡ ಕಾರು ಖರೀದಿಯ ಕಾರ್ನೀವಲ್ ಇದೀಗ ಭಾರತಕ್ಕೆ ಆಗಮಿಸಿದೆ. ಮಾರುತಿ ಸುಜುಕಿ ಕೇವಲ ರೂ. 1 ಡೌನ್ ಪೇಮೆಂಟ್‌ನಲ್ಲಿ ವಾಹನ ಖರೀದಿ ಮಾಡುವ ಆಫರ್ ಗಳನ್ನು ನೀಡಿದೆ. ಕೇವಲ ರೂ. 1 ಮುಂಗಡ ಪಾವತಿ, ನಂತರ ಆಕರ್ಷಕ ಮಾಸಿಕ ಕಂತುಗಳೊಂದಿಗೆ ವಾಹನವನ್ನು ಶೋರೂಂನಿಂದ ವಾಹನ ಮಾಲೀಕರಿಗೆ ಹಸ್ತಾಂತರಿಸಲಾಗುವುದು. ಅಷ್ಟೇ ಅಲ್ಲ, ಪ್ರಮುಖ ವಾಹನಗಳ ಮೇಲೆ ರೂ. 59000 ವರೆಗೆ ದೊಡ್ಡ ರಿಯಾಯಿತಿಯನ್ನೂ ನೀಡಲಾಗಿದೆ.

ಮಾರುತಿ ತನ್ನ ಆಫರ್‌ಗಳನ್ನು ಬಿಡುಗಡೆ ಮಾಡುತ್ತಾ, ತನ್ನ ಹೆಚ್ಚು ಮಾರಾಟವಾಗುವ ವಾಹನಗಳ ಮೇಲೆ ವಿವಿಧ ರಿಯಾಯಿತಿಗಳನ್ನು ನೀಡಿದೆ. ಈ ಹೊಸ ಆಫರ್ ಗಳಲ್ಲಿ ಗ್ರಾಹಕರು ರೂ. 59000 ವರೆಗೆ ಉಳಿಸಬಹುದು. ಈ ಆಫರ್ ಅನ್ನು ನೀಡಿರುವ ಪ್ರಮುಖ ಮೂರು ವಾಹನಗಳ ಬಗ್ಗೆ ತಿಳಿಯೋಣ ಬನ್ನಿ. ಮಾರುತಿಯ ಚಿಕ್ಕ SUV ಶೈಲಿಯ ವಾಹನ ಎಕ್ಸ್ ಪ್ರೆಸೋ ಮೇಲೆ ಮಾರುತಿ ರೂ. 44000 ರಿಯಾಯಿತಿಯನ್ನು ಲಭಿಸುವಂತೆ ಮಾಡಿದೆ.

ಈ ವಾಹನವು ಪೆಟ್ರೋಲ್ ಮತ್ತು CNG ಎರಡರಲ್ಲೂ ಲಭ್ಯವಿದೆ. ಸಿಎನ್‌ಜಿಯಲ್ಲಿ ಈ ವಾಹನದ ಮೈಲೇಜ್ ಪ್ರತಿ ಕಿಲೋ ಮೀಟರ್ ಗೆ, 32.73 ಕೆಜಿ ಸಿಎನ್ ಜಿ ಆಗಿದೆ. ಈ ಕಾರಿನ ಬೆಲೆಯ ಕುರಿತಾಗಿ ಮಾತನಾಡುವುದಾದರೆ, ಇದು ರೂ. 4,25,000, ಆದರೆ ರೂ. 44000 ರಿಯಾಯಿತಿ ನಂತರ ಇದರ ಬೆಲೆ ಕೇವಲ 3.81 ಲಕ್ಷ ರೂಪಾಯಿಗಳಾಗಿದೆ. ಮಾರುತಿಯ ಅತ್ಯಂತ ಜನಪ್ರಿಯ ಫ್ಯಾಮಿಲಿ ಗಾಡಿಗಳಲ್ಲಿ ಮೊದಲ ಹೆಸರು ವ್ಯಾಗನಾರ್ ಆಗಿದೆ.

ಮಾರುತಿ ಸುಜುಕಿ ಈ ವಾಹನದ ಮೇಲೆ ಗರಿಷ್ಠ ರಿಯಾಯಿತಿಗಳನ್ನು ನೀಡಿದೆ. ರೂ. 59000 ಉಳಿತಾಯ ಮಾಡುವ ಮೂಲಕ ನೀವು ಈ ವಾಹನವನ್ನು ರೂ.4.95 ಲಕ್ಷಕ್ಕೆ ಖರೀದಿಸಬಹುದಾಗಿದೆ.‌ಈ ಕಾರಿನ ಮೂಲ ಬೆಲೆ ರೂ.5.53 ಲಕ್ಷದಿಂದ ಪ್ರಾರಂಭವಾಗುತ್ತದೆ. ಕಾರು ಪೆಟ್ರೋಲ್ ಎಂಜಿನ್‌ನಲ್ಲಿ ಪ್ರತಿ ಲೀಟರ್‌ಗೆ 24 ಕಿ.ಮೀ. ಮೈಲೇಜ್ ನೀಡುತ್ತದೆ, ಅದೇ ಸಿಎನ್‌ಜಿ ಆಯ್ಕೆಯಲ್ಲಿ, ಈ ಕಾರಿನ ಮೈಲೇಜ್ ಪ್ರತಿ ಕೆಜಿ ಸಿಎನ್‌ಜಿಗೆ 35 ಕಿಮೀ ಆಗಿದೆ.

ಮಾರುತಿಯ ಆರಂಭಿಕ ಶ್ರೇಣಿಯ ವಾಹನಗಳಲ್ಲಿ Altok 10 ವಾಹನವು ಇದೀಗ ಅಗ್ಗದ ಮಾರುತಿ ವಾಹನಗಳಲ್ಲಿ ಒಂದಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಎಂಜಿನ್‌ಗೆ 25 ಕಿಲೋಮೀಟರ್ ಮೈಲೇಜ್ ನೀಡುವ ಈ ವಾಹನವು ರೂ.3.99 ಲಕ್ಷ ಬೆಲೆಯಲ್ಲಿ ಲಭ್ಯವಿದೆ. ಈ ವಾಹನದ ಮೇಲೆ ಕಂಪನಿಯು 43,100 ರೂಪಾಯಿಗಳ ರಿಯಾಯಿತಿಯನ್ನು ಒದಗಿಸಿದೆ, ಇದರಿಂದಾಗಿ ಈ ವಾಹನದ ಬೆಲೆ ಇಂದು 3.57 ಲಕ್ಷಕ್ಕೆ ಆಗಿದೆ.

You might also like

Comments are closed.