Akshatha

ಒಬ್ಬ ಅಂತ ಹೋಗಿದಕ್ಕೆ ನಾಲ್ಕು ಜನ ರಾತ್ರಿಯಲ್ಲ ನನ್ನ ತಿಂದು ಮುಗಿಸಿದರು,ಕಣ್ಣೀರಿಟ್ಟ ಅಕ್ಷತಾ ಕೆ‌ ಸಿ.

Entertainment/ಮನರಂಜನೆ

ದಲಿತ ಸಮುದಾಯದ ಕರಿಬಸಪ್ಪ ಹಾಗೂ ಲಿಂಗಾಯತ ಸಮುದಾಯದ ಸರೋಜ ಜಾತಿ ವ್ಯವಸ್ಥೆಯ ವಿರೋಧಿಸಿಯೇ ಒಂದಾಗಿದ್ದರು. ಆ ದಂಪತಿಗಳಿಗೆ ಜೂನ್ 1, 1991 ರಲ್ಲಿ ಮಗನಾಗಿ ಹುಟ್ಟಿ ಗಣೇಶ ನೆಂಬ ಹೆಸರಿನಲ್ಲಿ ಬೆಳೆಯುತ್ತಾಳೆ. ಬಾಲ್ಯದಲ್ಲೆ ಅಪ್ಪ ತೀರಿಹೋಗುತ್ತಾರೆ. ಚುರುಕಾದ ಬಾಲಕ ಗಣೇಶನನ್ನು ರಾಣೆಬೆನ್ನೂರಿನ ಶಿಕ್ಷಕಿ ಸುಂದರಾ ರಾಮಚಂದ್ರ ಓದಿಸುತ್ತಾರೆ. ಮಗು ಬಾಲ್ಯದಲ್ಲೇ ರಂಗೋಲಿ ಹಾಕುವುದು, ಹೆಣ್ಣು ಮಕ್ಕಳಂತೆ ಆಡುವುದು, ಲಂಗ–ದಾವಣಿ ತೊಡುವುದು ಮಾಡುತ್ತದೆ.

ಗಂಡಾಳ್ವಿಕೆ ಸಮಾಜ ‘ಚಕ್ಕಾ’, ‘ಮಾಮಾ’ ಎಂದು ಅಸಹ್ಯವಾಗಿ ವರ್ತಿಸುತ್ತದೆ. ಪಿಯುಗೆ ಬಂದಾಗ ಹುಡುಗಿ ಹೆಸರಲ್ಲಿ ಕರೆದು, ಚಪ್ಪಾಳೆ ಹೊಡೆದು ಹೀಯಾಳಿಸುತ್ತಾರೆ. ಮನೆಯಲ್ಲಿ ಹೇಳಿಕೊಂಡರೆ, ‘ನೀನು ಸರಿಯಾಗಿದ್ದರೆ, ಅವರೂ ಸರಿಯಾಗಿರುತ್ತಾರೆ’ಎಂದು ಬೈಯುತ್ತಾರೆ. ಇತ್ತ ಹುಡುಗನ ಒಳಗಣ ಹೆಣ್ಣು ಬಲಗೊಳ್ಳುತ್ತಾಳೆ. ಇದನ್ನು ನಿಯಂತ್ರಿಸಲಾಗದೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿಯೂ ಬದುಕುಳಿಯುತ್ತಾಳೆ. ಪದವಿ ತರಗತಿಯಲ್ಲಿ ಪ್ರಾಧ್ಯಾಪಕರೊಬ್ಬರು ಅವನನ್ನು ನಿಲ್ಲಿಸಿ, ‘ನೀನು ಹೆಣ್ಣೋ ಗಂಡೋ’ ಎಂದು ಕುಹಕವಾಡುತ್ತಾರೆ.

ಈ ಘಟನೆಯಿಂದ ಬೇಸತ್ತ ಮನೆಯವರು ಹುಡುಗನಿಗೆ ಮದುವೆಗೆ ಸಿದ್ಧತೆ ನಡೆಸುತ್ತಾರೆ. ಅದರೆ ಮಾನಸಿಕವಾಗಿ ಹೆಣ್ಣಾದ ಹುಡುಗನಿಗೆ ಇನ್ನೊಂದು ಹೆಣ್ಣನ್ನು ವರಿಸಲು ಹೇಗೆ ಸಾಧ್ಯ? ಆಕೆಯ ಜೀವನ ಏಕೆ ಹಾಳು ಮಾಡಬೇಕು? ಎಂಬ ಪ್ರಶ್ನೆ ಕಾಡುತ್ತದೆ. ಇದನ್ನು ವಿರೋಧಿಸಿ ಮನೆಬಿಟ್ಟು ತನ್ನಂತೆಯೇ ಇರುವ ಲಿಂಗತ್ವ ಅಲ್ಪಸಂಖ್ಯಾತರನ್ನು ಸೇರಿಕೊಳ್ಳುತ್ತಾನೆ. `ಓದಿ ಅಧಿಕಾರಿಯಾಗುವ ಕನಸಿನಲ್ಲಿದ್ದ ನನಗೆ, ಸಾಮಾಜಿಕ ಕಿರುಕುಳದಿಂದಾಗಿ ‘ಹೆಣ್ತನ’ವೇ ಪ್ರಮುಖವಾಯಿತು. ಕಿವಿ–ಮೂಗು ಚುಚ್ಚಿಕೊಳ್ಳಬೇಕು, ಸೀರೆ ಉಡಬೇಕೆಂಬ ಆಸೆಯನ್ನು ಈಡೇರಿಸಿಕೊಂಡೆನು.

ನನ್ನ ಬಳಿ ದೇಹ ಬಿಟ್ಟು, ಬೇರೆ ಯಾವ ಆಸ್ತಿಯೂ ಇರಲಿಲ್ಲ. ಯಾರೂ ಕೆಲಸ ನೀಡಲಿಲ್ಲ. ಭಿಕ್ಷಾಟನೆ, ಲೈಂ-ಗಿಕ ಕಾರ್ಯಕರ್ತೆಯರ ಒಡನಾಟ ಅನಿವಾರ್ಯವಾಯಿತು. ಒಬ್ಬ ಎಂದು ಕರೆದುಕೊಂಡು ಹೋಗಿ ಐದಾರು ಜನ ಹುರಿದುಮುಕ್ಕಿದರು. ನಿನಗಿರುವುದು ಏನು ಎಂದು ರಸ್ತೆಯಲ್ಲೇ ಬ-ಟ್ಟೆ ಬಿಚ್ಚಿ ನಿಲ್ಲಿಸಿದರು. ಎಂದು ಕಣ್ಣೀರಿಡುತ್ತ ಹೇಳಿಕೊಂಡಿದ್ದಾರೆ ಅಕ್ಷತಾ ಕೆ ಸಿ ಅಲಿಯಾಸ್ ಗಣೇಶ್. ಇದೀಗ ಅಕ್ಷತಾ ಕರ್ನಾಟಕ ಲೈಂ-ಗಿಕ ಅಲ್ಪಸಂಖ್ಯಾತರ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕದ ದಲಿತ ಸಂಘರ್ಷ ಸಮಿತಿಯ ಹಾವೇರಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...