ಕನ್ನಡ ಚಿತ್ರರಂಗ ಕೃಷ್ಣ ಎಂದೇ ಗುರುತಿಸಿಕೊಂಡಿರುವ ಅಜಯ್ ರಾವ್ ನಟನೆಯ ಶೋಕಿವಾಲ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದೆ. ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಸ್ಮಾರಕದ ಎದುರು ಚಿತ್ರತಂಡ ಟೀಸರ್ ರಿಲೀಸ್ ಮಾಡಿತ್ತು,
ಸಿನಿಮಾ ಡಿಫರೆಂಟ್ ಆಗಿದೆ ಎಂದು ಸಿನಿ ರಸಿಕರ ನಿರೀಕ್ಷೆ ಹೆಚ್ಚಿಸಿತ್ತು. ಟೀಸರ್, ಟ್ರೈಲರ್ ಮತ್ತು ಪೋಸ್ಟರ್ ಒಳ್ಳೆಯ ಪ್ರತಿಕ್ರಿಯೆ ಪಡೆದ ಕಾರಣ ಸಿನಿಮಾ ನಿರೀಕ್ಷೆ ಮಟ್ಟ ಮುಟ್ಟಲಿದೆ ಎಂದುಕೊಂಡಿದ್ದರು ಆದರೆ ಈಗ ತಂಡಕ್ಕೆ ಬೇಸರವಾಗಿದೆ.
ಸಿನಿಮಾ ಪ್ರೆಸ್ ಮೀಟಿಂಗ್ ನಲ್ಲಿ ಪತ್ರಕರ್ತರು ಸಿನಿಮಾದ ಕಲೆಕ್ಷನ್ ಬಗ್ಗೆ ಪ್ರಶ್ನೆ ಕೇಳಿದಾಗ ಅಜಯ್ ರಾವ್ ಅವರು ಹೀಗೆ ಉತ್ತರಿಸಿದರು ಇವತ್ತಿಗೆ ಯಾವ ಮುಚ್ಚುಮರೆ ಇಲ್ಲ ಸಿನಿಮಾಗೆ ಯಾವ ಕಲೆಕ್ಷನ್ಸ್ ಇಲ್ಲ ತುಂಬಾ ಪ್ರಾಮಾಣಿಕವಾಗಿ ಉತ್ತರ ಕೊಡ್ತೀನಿ. ಎಷ್ಟು ಜನ ಸಿನಿಮಾ ನೋಡಿರುತ್ತಾರೆ ಅವರು ನಮಗೆ ಪ್ರಾಮಾಣಿಕವಾಗಿ ಸಿನಿಮಾ ಇಷ್ಟ ಅಂತ ಹೇಳಿದ್ದಾರೆ.
ಸಿನಿಮಾ ನೋಡಿ ತುಂಬಾ ಎಂಜಾಯ್ ಮಾಡಿದ್ದಾರೆ ಆದರೆ ಕಲೆಕ್ಷನ್ ಇಲ್ಲ. ನಮಗೆ ನಂಬಿಕೆ ಇದೆ ಒಳ್ಳೆಯ ಸಿನಿಮಾ ಕೈ ಬಿಡುವುದಿಲ್ಲ. ಎಲ್ಲೋ ಒಂದು ಕಡೆ ಸರಿಯಾದ ರೀತಿಯಲ್ಲಿ ಸಿನಿಮಾ ಬಗ್ಗೆ ಜನರಿಗೆ ತಲುಪಿಲ್ಲದೆ ಇರಬಹುದು, ಜನರಿಗೆ ಸಿನಿಮಾ ನೋಡುವ ಆಸಕ್ತಿ ಕಡಿಮೆ ಆಗಿಬಹುದು ಬೇರೆ ಬೇರೆ ಫ್ಯಾಕ್ಟರ್‌ಗಳು ಇರಬಹುದು ಆದರೆ ನಾನು ಆಡಿಯನ್ಸ್‌ನ ದೂರುವುದಿಲ್ಲ.
ವೀಕ್ಷಕರು ಒಳ್ಳೆ ಸಿನಿಮಾನ ಗೆದ್ದೆ ಗೆಲ್ಲಿಸುತ್ತಾರೆ. ವರ್ಡ್ ಆಫ್ ಮೌತ್‌ನಿಂದ ಸಿನಿಮಾ ಬಗ್ಗೆ ಹರಡಬೇಕಿದೆ. ಒಳ್ಳೆ ಸಿನಿಮಾ ಮಾಡಿರುವುದರಿಂದಲೇ ಸಿನಿಮಾ ರಿಲೀಸ್ ಆದಮೇಲೆ ಕೂಡ ನಾವು ಕಲೆಕ್ಷನ್ ಇಲ್ಲ ಅನ್ನುವ ಪರಿಸ್ಥಿತಿ ಇರುವುದಕ್ಕೆ ನಿಮ್ಮ ಮುಂದೆ ಮಾತನಾಡುತ್ತಿರುವುದು.