ದಕ್ಷಿಣ ಭಾರತ ಚಿತ್ರರಂಗದ ಆಕ್ಷನ್ ಕಿಂಗ್ ಎಂದೇ ಖ್ಯಾತಿ ಪಡೆದಿರುವವರು ನಟ ಅರ್ಜುನ್ ಸರ್ಜಾ. ಇವರು ಸರ್ಜಾ ಕುಟುಂಬದ ಗೌರವವನ್ನು ಎತ್ತಿ ಹಿಡಿಯುತ್ತಿರುವ ಮಗ. ಅರ್ಜುನ್ ಸರ್ಜಾ ಅವರು ಕನ್ನಡ ಚಿತ್ರರಂಗಕ್ಕಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಹಿರಿಯ ನಟ ಶಕ್ತಿ ಪ್ರಸಾದ್ ಅವರ ಮಗ.
ಇಂದು ದಕ್ಷಿಣ ಭಾರತದ ಆಕ್ಷನ್ ಕಿಂಗ್ ಎಂದು ಖ್ಯಾತಿ ಪಡೆದು, ಎಲ್ಲರ ಫೇವರೆಟ್ ನಟ ಆಗಿದ್ದಾರೆ. ಅರ್ಜುನ್ ಸರ್ಜಾ ಅವರಿಗೆ ಇಬ್ಬರು ಹೆಣ್ಣುಮಕ್ಕಳು. ಐಶ್ವರ್ಯ ಅರ್ಜುನ್ ಮತ್ತು ಅಂಜನ ಅರ್ಜುನ್. ಐಶ್ವರ್ಯ ಸರ್ಜಾ ಅವರು ನಟಿಯಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. 2918ರಲ್ಲಿ ಪ್ರೇಮ ಬರಹ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಐಶ್ವರ್ಯ ಅರ್ಜುನ್.
ಈ ಸಿನಿಮಾವನ್ನು ಸ್ವತಃ ಅರ್ಜುನ್ ಸರ್ಜಾ ಅವರೇ ನಿರ್ದೇಶನ ಮಾಡಿದ್ದರು. ತಮಿಳು ಮತ್ತು ಕನ್ನಡ ಎರಡು ಭಾಷೆಗಳಲ್ಲಿ ಒಂದೇ ಸಾರಿ ನಿರ್ದೇಶನ ಮಾಡಿ, ಸಿನಿಮಾ ಬಿಡುಗಡೆ ಮಾಡಿದ್ದರು ಅರ್ಜುನ್ ಸರ್ಜಾ. ಕನ್ನಡ ಚಿತ್ರರಂಗಕ್ಕೆ ಮಗಳನ್ನು ಪರಿಚಯ ಮಾಡಿಸಿದ್ದರು. ಅದಕ್ಕಿಂತ ಮೊದಲೇ ಐಶ್ವರ್ಯ ಅರ್ಜುನ್ ಅವರು ತಮಿಳು ಸಿನಿಮಾ ಒಂದರ ಮೂಲಕ ನಟನೆ ಶುರು ಮಾಡಿದ್ದರು.
ಪ್ರೇಮ ಬರಹ ಸಿನಿಮಾ ತೆರೆಕಂಡು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಐಶ್ವರ್ಯ ಅರ್ಜುನ್ ನಟನೆ ಕನ್ನಡ ಸಿನಿಪ್ರಿಯರಿಗೆ ಇಷ್ಟವಾಗಿತ್ತು. ಆದರೆ ಪ್ರೇಮ ಬರಹ ಸಿನಿಮಾ ನಂತರ ಐಶ್ವರ್ಯ ಅರ್ಜುನ್ ಇನ್ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಐಶ್ವರ್ಯ ಅರ್ಜುನ್ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದಾರೆ.ಐಶ್ವರ್ಯ ಅರ್ಜುನ್ ಅವರು ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದು, ತಮಿಳಿನಲ್ಲಿ ಸುಮಾರು ನಾಲಕ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಐಶ್ವರ್ಯ ಅರ್ಜುನ್ ಅವರು ತಮ್ಮ ಹೊಸ ಫೋಟೋಗಳನ್ನು, ರೀಲ್ಸ್ ವಿಡಿಯೋಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ.
ಐಶ್ವರ್ಯ ಅರ್ಜುನ್ ಅವರು ಕನ್ನಡದಲ್ಲಿ ನಟ ಚಂದನ್ ಅವರ ಜೊತೆ ಹಾಗು ತಂದೆ ಅರ್ಜುನ್ ಸರ್ಜಾ ಅವರ ಜೊತೆ ಸಿನಿಮಾವನ್ನು ಮಾಡಿದ್ದಾರೆ. ಸದ್ಯ ಐಶ್ವರ್ಯ ಅರ್ಜುನ್ ಅವರಿಗೆ ಸಾಕಷ್ಟು ತಮಿಳು ಸಿನಿಮಾಗಳಲ್ಲಿ ಆಫ಼ರ್ ಗಳು ಬರುತ್ತಿದ್ದು, ಕಥೆಯನ್ನು ತಂದೆಯ ಜೊತೆಯಲ್ಲೇ ಕೇಳಿ ನಂತರ ಸಿನಿಮಾವನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಐಶ್ವರ್ಯ ಅರ್ಜುನ್ ಅವರ ಹೊಸ ಫೋಟೋಗಳನ್ನು, ಈಗ ಅವರು ಹೇಗಿದ್ದಾರೆ ಎಂದು ನೀವು ಇಲ್ಲಿ ನೋಡಬಹುದು. ಐಶ್ವರ್ಯ ಅರ್ಜುನ್ ಅವರು ಕೆಲವು ತಮಿಳು ಹಾಗು ಕನ್ನಡದ ರಿಯಾಲಿಟಿ ಶೋಗಳಲ್ಲಿ ಕೂಡ ಆಗಾಗ ಅತಿಥಿಯಾಗಿ ಭಾಗವಹಿಸಿದ್ದಾರೆ.
ಫ್ಯಾಮಿಲಿ ಜೊತೆಗಿನ ಸುಂದರ ಕ್ಷಣಗಳನ್ನು ಹಾಗು ಹೊಸದಾದ ವಿಭಿನ್ನವಾದ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಳ್ಳುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಗಳನ್ನು ಅಪ್ಡೇಟ್ ಮಾಡುತ್ತಾರೆ ಐಶ್ವರ್ಯ. ರೀಲ್ಸ್ ಮತ್ತು ಇವರ ಡ್ಯಾನ್ಸ್ ಗಳಿಗೆ ಭಾರಿ ಮೆಚ್ಚುಗೆ ಸಿಗುತ್ತದೆ. ಇತ್ತೀಚೆಗೆ ಐಶ್ವರ್ಯ ಅರ್ಜುನ್ ಹೊಸ ಇನ್ಸ್ಟಾಗ್ರಾಮ್ ರೀಲ್ಸ್ ವಿಡಿಯೋ ಒಂದನ್ನು ಶೇರ್ ಮಾಡಿದ್ದು.
ಇದರಲ್ಲಿ ಬಿಳಿ ಬಣ್ಣದ ಶರ್ಟ್ ಧರಿಸಿ ಕುಳಿತಿರುವ ಐಶ್ವರ್ಯ, ಡ್ಯಾನ್ಸ್ ಮಾಡುತ್ತಲೇ ಸುಂದರವಾಗಿ ರೆಡಿಯಾಗುತ್ತಾರೆ. ಇದು ತುಂಬಾ ಕ್ರಿಯೇಟಿವ್ ಆದ ರೀಲ್ಸ್ ಆಗಿದ್ದು, ನೆಟ್ಟಿಗರು ಕಾಂಪ್ಲಿಮೆಂಟ್ಸ್ ನೀಡುತ್ತಿದ್ದಾರೆ. ಐಶ್ವರ್ಯ ಅವರ ಕ್ರಿಯೇಟಿವಿಟಿಗೆ ಮೆಚ್ಚುಗೆ ಸಿಕ್ಕಿದೆ. ನೀವು ಕೂಡ ಈ ರೀಲ್ಸ್ ವಿಡಿಯೋ ತಪ್ಪದೇ ನೋಡಿ.