agnisakshi-vaishnavi-gowda-hot

ಹಿಂದಿ ಹಾಡೊಂದಕ್ಕೆ ಬಾಲಿವುಡ್ ಮೀರಿಸುವಂತೆ ಎತ್ತಿ ಕುಣಿದ ನಟಿ ವೈಷ್ಣವಿ ಗೌಡ! ನೋಡಿ ವೈರಲ್ ವಿಡಿಯೋ!!

CINEMA/ಸಿನಿಮಾ Entertainment/ಮನರಂಜನೆ

ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಪರಿಚಯವಿರುವ ವೈಷ್ಣವಿ ಗೌಡ ಅಂದರೆ ಗೊತ್ತಿರಲೇ‌ ಬೇಕು.‌ ಬೆಳದಿಂಗಳ ಬಾಲೆಯಂತೆ ಹಾಲಿನಂತೆ ಹೊಳೆಯುವ ಮೈ ಕಾಂತಿಯ ವೈಷ್ಣವಿ ಗೌಡ ಗುಳಿ ಕೆನ್ನೆ ಸುಂದರಿಯೂ‌ ಹೌದು. ಇವರು ಬಣ್ಣದ ಲೋಕಕ್ಕೆ ಬಂದಿದ್ದು ಆಕಸ್ಮಿಕ ಅನ್ನಬಹುದು.‌ ಒಂದು‌‌ ಬಾರಿ‌ ತನ್ನ ತಾಯಿಯೊಂದಿಗೆ ಯಾವುದೋ ದೇವಸ್ಥಾನಕ್ಕೆ ಹೋಗಿದ್ದಾಗ ಅಲ್ಲಿ ಒಬ್ಬ ಸಹಾಯಕ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದರು.‌ ಅದು ದೇವಿ ಧಾರವಾಹಿಯ ನಿರ್ದೇಶಕರಾಗಿದ್ದರು.‌ ವೈಷ್ಣವಿ ಅವರನ್ನು ನೋಡಿದ ಅವರು ತಮ್ಮ‌ ಸೀರಿಯಲ್ ಗೆ ಆಫರ್ ಕೊಟ್ಟಿದ್ದರು.‌

ಅಲ್ಲಿಂದ ಅವರ ಬಣ್ಣದ ಲೋಕದ ಜರ್ನಿ‌ ಆರಂಭವಾಯಿತು.‌ಇನ್ನು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ಇವರು ತಮ್ಮ ನಟನೆಗಾಗಿ ಪದವಿಯನ್ನು ಅರ್ಧಕ್ಕೇ ಬಿಟ್ಟರು. ನಂತರ ಬೆಂಗಳೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಮೂಲಕ ಪದವಿ ವ್ಯಾಸಾಂಗ ಮುಗಿಸಿದ್ದರು. ಇವರು ಹಾಗೂ ನಟಿ ಅಮೂಲ್ಯ ಅವರು ಕ್ಲೋಸ್ ಫ್ರೆಂಡ್ಸ್ ಕೂಡ ಹೌದು. ಇನ್ನು ಇವರು ದೇವಿ ಧಾರವಾಹಿಯಲ್ಲಿ ನಟಿಸಿದ್ದರೂ ಫೇಮಸ್ ಆಗಿದ್ದು ಜನಮನ್ನಣೆ ಗಳಿಸಿದ್ದು ಮಾತ್ರ ಕಲರ್ಸ್ ಕನ್ನಡದ ಅಗ್ನಿ ಸಾಕ್ಷಿ ಧಾರವಾಹಿ ಮೂಲಕ.

ಹಾಟ್ ಅವತಾರದಲ್ಲಿ ಅಗ್ನಿ ಸಾಕ್ಷಿ ವೈಷ್ಣವಿಗೌಡ ಫೋಟೋ ಶೂಟ್!- Kannada Prabha

ಅಲ್ಲಿಂದ ಅವರು ಅಭಿಮಾನಿಗಳನ್ನು‌‌ ಪಡೆದುಕೊಂಡಿದ್ದು ಅದರಲ್ಲಿ ಸನ್ನಿಧಿ ಪಾತ್ರ ಮಾಡಿದ ಕಾರಣ ಸನ್ನಧಿಯಾಗಿಯೇ ಜನರ ಮನಸ್ಸಲ್ಲಿ ಉಳಿದುಕೊಂಡಿದ್ದಾರೆ. ಅದಾದ ನಂತರ ಇವರು ಇವರು `ಗಿರಿಗಿಟ್ಲೆ’ ಮೂಲಕ ನಾಯಕಿಯಾಗಿ ಚಂದನವನವನ್ನೂ ಪ್ರವೇಶಿಸಿದ್ದಾರೆ.‌ಅಷ್ಟೇ ಅಲ್ಲ‌ ಬಿಗ್ ಬಾಸ್ ಸ್ಪರ್ಧಿಯಾಗಿ ಭಾಗವಹಿಸಿ, ಇನ್ನಷ್ಟು ಜನರಿಗೆ ಹತ್ತಿರವಾಗಿದ್ದರು.‌ ಅಲ್ಲಿ ಅವರ ನಡತೆ, ಕಾಮೆಡಿ, ಧ್ಯಾನ, ಯೋಗ, ಡ್ರೆಸ್ಸಿಂಗ್ ಸ್ಟೈಲ್ ಈ ಎಲ್ಲವೂ ಫೇಮಸ್ ಆಗಿ ಕೊನೆಯ ನಾಲ್ಕನೇ ಸ್ಪರ್ಧಿಯಾಗಿ ಹೊರಬಂದಿದ್ದರು. ಇನ್ನು ಭರತನಾಟ್ಯಂ, ಕುಚಿಪುಡಿ ಮತ್ತು ಬೆಲ್ಲಿ ಡ್ಯಾನ್ಸಿಂಗ್‌ನಲ್ಲಿ ಪರಿಣಿತಿ ಇರುವ ಭರ್ಜರಿ ಕಾಮಿಡಿ ಎಂಬ ರಿಯಾಲಿಟಿ ಶೋ ಅನ್ನು ನಿರೂಪಣೆ ಮಾಡಿದ್ದರು.

ಅದೇ ರೀತಿ ಕುಣಿಯೋಣ ಬಾರ ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಕೂಡ ಭಾಗವಹಿಸಿದ್ದರು. ಹೀಗೆ ಪ್ರತಿಭಾನ್ವಿತೆಯಾಗಿರುವ ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಕತ್ ಆಕ್ಟೀವ್ ಆಗಿದ್ದಾರೆ. ಯಾವಾಗಲೂ ತಮ್ಮ ಡ್ಯಾನ್ಸ್ ವಿಡಿಯೋಗಳನ್ನು ಶೇರ್ ಮಾಡುತ್ತಿರುವ ವೈಷವಿ ಅವರು ಈ ಬಾರಿ ಆಲಿಯಾ ಭಟ್ ನಟಿಸಿರುವ ಗಂಗೂ ಭಾಯಿ ಸಿನಿಮಾದ ಸೂಪರ್ ಸ್ಟೆಪ್ ಒಂದನ್ನು ವೈಷ್ಣವಿ ಅವರು ಮಾಡಿದ್ದಾರೆ. ಬಿಳಿ ಶರ್ಟ್ ಹಾಗೂ ಸ್ಟೈಲಿಷ್ ಲಂಗ ಹಾಕಿಕೊಂಡು ಮಾಡಿರುವ ಈ ಡ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.