ಯುವತಿಯರು ಯಾವ ವಯಸ್ಸಿಗೆ ಮದುವೆ ಆಗಲು ಹಾತೊರೆಯುತ್ತಿರುತ್ತಾರೆ ಗೊತ್ತಾ? ಈ ವಯಸ್ಸಿನಲ್ಲಿ ಮದುವೆಯಾದರೆ ಅವರು ಗಂಡನ ಜೊತೆ ಸುಖವಾಗಿ ಬಾಳುತ್ತಾರೆ! ಸರಿಯಾದ ವಯಸ್ಸು ಇದೇ ನೋಡಿ!!

Today News / ಕನ್ನಡ ಸುದ್ದಿಗಳು

ಭಾರತ ಮಹಿಳೆಯರ ಪರವಾಗಿ ಇರುವ ಏಕೈಕ ರಾಷ್ಟ್ರ ಅನ್ನೋದು ಎಲ್ಲರಿಗೂ ಗೊತ್ತು. ಭಾರತದಲ್ಲಿ ಮಹಿಳೆಯರಿಗೆ ಸಿಗುವಷ್ಟು ಗೌರವ, ಮರ್ಯಾದೆ, ಸಮಾನತೆ ಇತರ ಯಾವ ದೇಶದಲ್ಲಿಯೂ ಸಿಗಲಿಕ್ಕಿಲ್ಲ. ಹಾಗಂತ ಇಲ್ಲಿಯೂ ಮಹಿಳೆಯರು ಶೋಷಣೆಗೆ ಒಳಗಾಗೋದೇ ಇಲ್ಲ ಎಂದು ಹೇಳುವ ಹಾಗಿಲ್ಲ. ಆದರೆ ಮಹಿಳೆಯರಿಗೆ ಹೆಚ್ಚಿನ ಮಹತ್ವವನ್ನ ಕೊಡುವ ರಾಷ್ಟ್ರ ನಮ್ಮದು ಅಂತ ಹೇಳಿಕೊಳ್ಳುವುದಕ್ಕೆ ನಿಜಕೂ ಹೆಮ್ಮೆಯಾಗುತ್ತೆ. ಉದಾಹರಣೆಗೆ ಹೆಣ್ಣು ಮಕ್ಕಳ ಮದುವೆಯ ವಿಷಯವನ್ನೇ ತೆಗೆದುಕೊಂಡರೆ, ಮೊದಲಿದ್ದ ಕಟ್ಟು ನಿಟ್ಟಿನ ಪರಿಸ್ಥಿತಿ ಈಗ ಇಲ್ಲ.

ಮೊದಲು ದೇಶದಲ್ಲಿ ಬಾಲ್ಯ ವಿವಾಹ ಪದ್ಧತಿ ಚಾಲ್ತಿಯಲ್ಲಿತ್ತು ಕ್ರಮೇಣ ಅದು ಮಾಸಿಹೋಗಿ ಒಬ್ಬ ಹೆಣ್ಣುಮಗಳು ಮೈ ನೆರೆದ ಮೇಲೆ ಆಕೆ ನಾ ಮದುವೆ ಮಾಡಬೇಕು ಎನ್ನುವ ಪದ್ಧತಿ ಚಾಲ್ತಿಗೆ ಬಂತು. ಕ್ರಮೇಣ ಈ ಪದ್ಧತಿಯು ಕೂಡ ದೂರವಾಗಿ ಹೆಣ್ಣು ಮಕ್ಕಳನ್ನು 18 ವರ್ಷಕ್ಕೆ ಮದುವೆ ಮಾಡಬೇಕು ಎನ್ನುವ ರೂಲ್ಸ್ ಬಂತು. ಹೌದು ದೇಶದಲ್ಲಿ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದೆ ಎಂದರೆ ಅವರಿಗೆ ಮದುವೆಯ ವಯಸ್ಸು ಎಂದು ಅರ್ಥ.

ಹಾಗಾಗಿ 18 ವರ್ಷದ ವಯಸ್ಸಿನ ಹೆಣ್ಣು ಮಕ್ಕಳನ್ನು ಮೆಚ್ಯುರಿಟಿಗೆ ಬಂದವರು ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಸ್ವಲ್ಪ ಪ್ರಬುದ್ಧತೆ ಬಂದಿರುತ್ತದೆ ಹಾಗಾಗಿ ಈ ಸಮಯದಲ್ಲಿ ಮದುವೆ ಮಾಡಿದರೆ ಸಂಸಾರ ನಡೆಸಿಕೊಂಡು ಹೋಗುವ ತಾಕತ್ತು ಆಕೆಗೆ ಇರುತ್ತೆ ಅನ್ನುವ ಉದ್ದೇಶ ಎಲ್ಲರದ್ದು.

ಆದರೆ ಇದೀಗ ಈ ನಿಯಮವನ್ನ ಕೂಡ ಬದಲಾಯಿಸಿ ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು 18ರಿಂದ 21 ವರ್ಷ ವಯಸ್ಸಿಗೆ ಏರಿಕೆ ಮಾಡಿದೆ ಸರ್ಕಾರ. ಇದರಿಂದ ದೇಶದ ಎಲ್ಲಾ ಹೆಣ್ಣು ಮಕ್ಕಳಿಗೂ ಕೂಡ ತುಂಬಾನೇ ಸಂತಸವಾಗಿದೆ ಇದಕ್ಕೆ ಕಾರಣ ಏನು ಗೊತ್ತಾ. ಸಾಕಷ್ಟು ಮನೆಗಳಲ್ಲಿ ವಯಸ್ಸು 18 ಆಗುತ್ತಿದ್ದ ಹಾಗೆ ಮದುವೆಯ ಬಗ್ಗೆ ಮಾತುಕತೆ ಶುರುವಾಗಿಬಿಡುತ್ತದೆ.

ಆಗ ಹೆಣ್ಣು ಮಕ್ಕಳಿಗೆ ಡಿಗ್ರಿ ವ್ಯಾಸಂಗವನ್ನು ಕೂಡ ಮುಗಿಸುವುದಕ್ಕೆ ಸಾಧ್ಯವಿಲ್ಲ. ಇಂದಿನ ಹೆಣ್ಣು ಮಕ್ಕಳು ತಾವು ಸ್ವಾವಲಂಬವಾಗಿ ಬದುಕಬೇಕು ಎಂದು ಬಯಸುತ್ತಾರೆ ಹಾಗಾಗಿ ಚೆನ್ನಾಗಿ ಓದಿ ಒಂದು ಕೆಲಸವನ್ನು ಗೆಟ್ಟಿಸಿಕೊಳ್ಳಬೇಕು ಎಂದು ಕಾಯುತ್ತಿರುತ್ತಾರೆ. ಆದರೆ 18 ವರ್ಷ ಆಗುತ್ತಿದ್ದ ಹಾಗೆ ಮದುವೆಯ ಬಂಧದಲ್ಲಿ ಅವರನ್ನು ಕಟ್ಟಿ ಹಾಕುತ್ತೇವೆ. ಇದರಿಂದ ಅದೆಷ್ಟು ಮಹಿಳೆಯರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿದ್ದು ಇದೆ.

ಹೆಣ್ಣಿಗೆ ಒಮ್ಮೆ ಮದುವೆಯಾಯಿತು ಅಂದ್ರೆ ಆಕೆಯ ಜೀವನ ತುಂಬಾನೇ ಬದಲಾಗಿ ಹೋಗುತ್ತೆ ತಂದೆ ತಾಯಿಯ ಜೊತೆಗಿದ್ದ ಸ್ವಾತಂತ್ರ್ಯವಾಗಲಿ ಆ ಪ್ರೀತಿ ವಾತ್ಸಲ್ಯವಾಗಲಿ ಗಂಡನ ಮನೆಯಲ್ಲಿ ಸಿಕ್ಕೆ ಸಿಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲದೆ ಒಮ್ಮೆ ಗಂಡನ ಮನೆಗೆ ಸೇರಿದ ನಂತರ ಹೆಣ್ಣಿನ ಆಸೆ ಕನಸುಗಳನ್ನು ಈಡೇರಿಸಿಕೊಳ್ಳುವುದು ಅಷ್ಟು ಸುಲಭದ ಮಾತು ಅಲ್ಲ. ಮನೆಯ ನಾ ನಿಭಾಯಿಸಿಕೊಂಡು ಸಂಸಾರವನ್ನು ತೂಗಿಸಿಕೊಂಡು ಹಾಗೆಯೇ ವೃತ್ತಿಯನ್ನು ಮಾಡುವುದು ಬಹಳ ಕಷ್ಟಕರವಾದ ವಿಷಯ. ಅದು ಅಲ್ದೆ 18ರಲ್ಲಿ ಹೆಣ್ಣು ಮಕ್ಕಳಿನ ಪ್ರಬುದ್ಧತೆ ಹೆಚ್ಚಾಗಿ ಇರುವುದಿಲ್ಲ.

ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡ ಸರ್ಕಾರ ಇದೀಗ 18 ವರ್ಷದಿಂದ 21 ವರ್ಷಕ್ಕೆ ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು ನಿಗದಿ ಮಾಡಿದೆ. ಇದರಿಂದ ಸಾಕಷ್ಟು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ ಎಲ್ಲಾ ಕಾಲೇಜಿನ ಯುವತಿಯರು. ವರ್ಷ 18 ಆಯ್ತು ಅಂದ್ರೆ ಮದುವೆಯ ಬಗ್ಗೆ ಮಾತನಾಡುತ್ತಿದ್ದರು. ಈಗ ನಾವು ಓದಿ ನಮ್ಮ ಕಾಲ್ ಮೇಲೆ ನಾವು ನಿಂತುಕೊಳ್ಳುವ ಹಂತಕ್ಕೆ ಬಂದಾಗ ಮದುವೆಯ ಬಗ್ಗೆ ಯೋಚನೆ ಮಾಡಬಹುದು ಸರ್ಕಾರ ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಇದಾಗಿದೆ ಎಂದು ಯುವತಿಯರು ಸರ್ಕಾರದ ಈ ಯೋಜನೆಯ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.