2ನೇ ಮದುವೆ ಆಗಿರುವ ಖ್ಯಾತ ನಟಿ ಹಾಗೂ ನಿರ್ಮಾಪಕನ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ? ಕೇಳಿದ್ರೆ ನೀವು ಕೂಡ ಆಶ್ಚರ್ಯ ಪಡ್ತೀರ.

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಸುದ್ದಿ ಏನೆಂದರೆ, ತಮಿಳು ಚಿತ್ರರಂಗ ಹಾಗು ಕಿರುತೆರೆಯ ನಟಿಯಾಗಿರುವ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ರವರ ಮದುವೆ ವಿಚಾರ. ಇಂತಹ ವಿಚಿತ್ರ ಮದುವೆಗಳು ಸಾಕಷ್ಟು ಬಾರಿ ನಡೆದಿದೆ ಆದರೆ ಇದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನೆಟ್ಟಿಗರ ಗಮನವನ್ನು ಸೆಳೆದಂತಹ ಮದುವೆಯಾಗಿದೆ.

ರವೀಂದ್ರನ್ ಚಂದ್ರಶೇಖರ್ ರವರ ನಿರ್ಮಾಣ ಸಂಸ್ಥೆಯಲ್ಲಿ ಮೂಡಿಬಂದಿರುವ ಸಿನಿಮಾದಲ್ಲಿ ಕೂಡ ಮಹಾಲಕ್ಷ್ಮಿ ಈಗಾಗಲೇ ಹಲವಾರು ಬಾರಿ ನಟಿಸಿದ್ದಾರೆ. ಮಹಾಲಕ್ಷ್ಮಿ ಅವರು ಈಗಾಗಲೇ ಒಂದು ಮದುವೆಯಾಗಿದ್ದು ಇದು ಅವರಿಗೆ ಎರಡನೇ ಮದುವೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಇಬ್ಬರಿಗೂ ಕೂಡ ಇದು ಎರಡನೇ ಮದುವೆಯಾಗಿದೆ. ಇವರಿಬ್ಬರೂ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಮದುವೆ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ.

Producer Ravinder Chandrasekhar who is married to a famous actress

ಇನ್ನು ಇವರಿಬ್ಬರ ಆಕಾರ ವಿಕಾರಗಳಿಗಿಂತ ಹೆಚ್ಚಾಗಿ ಸದ್ಯಕ್ಕೆ ಇವರಿಬ್ಬರ ನಡುವಿನ ವಯಸ್ಸಿನ ಅಂತರವೂ ಕೂಡ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಇಬ್ಬರೂ ಕೂಡ ಮದುವೆ ಆಗಿರುವುದು ತಿರುಪತಿಯ ದೇವಸ್ಥಾನದಲ್ಲಿ ಹಾಗೂ ನಂತರ ಚೆನ್ನಾಗಿ ಬಂದು ಅದ್ದೂರಿಯಾಗಿ ರಿಸೆಪ್ಶನ್ ಕೂಡ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಇವರಿಬ್ಬರ ವಯಸ್ಸಿನ ಅಂತರ ಯಾಕೆ ಚರ್ಚೆ ಆಗುತ್ತಿದೆ ಎಂಬುದಾಗಿ ನೀವು ನೋಡಬಹುದಾಗಿದೆ. ಬನ್ನಿ ಹಾಗಿದ್ದರೆ ಇವರಿಬ್ಬರ ನಡುವಿನ ವಯಸ್ಸಿನ ಅಂತರವೆಷ್ಟು ಇವರಿಬ್ಬರ ವಯಸ್ಸೆಷ್ಟು ಎಂಬುದನ್ನು ತಿಳಿದುಕೊಳ್ಳೋಣ.

ನಟಿ ಮಹಾಲಕ್ಷ್ಮಿ ಅವರಿಗೆ 32 ವರ್ಷ ವಯಸ್ಸಾಗಿದ್ದು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರಿಗೆ 52 ವರ್ಷ ವಯಸ್ಸಾಗಿದೆ. ಅಂದರೆ ನಟಿ ಮಹಾಲಕ್ಷ್ಮಿ ಅವರು ತನಗಿಂತ 20 ವರ್ಷ ದೊಡ್ಡವರಾಗಿರುವ ರವೀಂದ್ರನ್ ಚಂದ್ರಶೇಖರ್ ಅವರೊಂದಿಗೆ ವಿವಾಹ ಆಗಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಇವರಿಬ್ಬರ ಮದುವೆಯನ್ನು ಮನಬಂದಂತೆ ಟೀಕಿಸುತ್ತಿದ್ದಾರೆ. ಒಟ್ಟಾರೆಯಾಗಿ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಕೂಡ ಇವರಿಬ್ಬರ ಬಗ್ಗೆ ಟ್ರೋಲ್ ಮಾಡುವಂತಹ ಪೋಸ್ಟ್ಗಳು ಕಂಡುಬರುತ್ತಿವೆ. ಇವರಿಬ್ಬರ ಮದುವೆ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಪ್ರಾಮಾಣಿಕವಾಗಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

You might also like

Comments are closed.