ಪ್ರಾಯಕ್ಕೆ ಬಂದ ನಂತರ ಒಂದೇ ಮದುವೆ ಯಾವಾಗ ಎಂಬ ಒಂದು ಪ್ರಶ್ನೆಯನ್ನು ನಿರಂತರವಾಗಿ ಕೇಳುತ್ತಾರೆ. ಮದುವೆಗೆ ಸ್ವಲ್ಪ ತಡವಾದರೂ ಸಂಬಂಧಿಕರು, ಸ್ನೇಹಿತರು, ನೆರೆಹೊರೆಯವರು ಹೀಗೆ ಎಲ್ಲರೂ ಒಂದೇ ಸಮಯದಲ್ಲಿ ಕೇಳುತ್ತಾರೆ. ವಿವಾಹವು ಖಾಸಗಿ ವಿಷಯವಾಗಿರುವುದರಿಂದ, ಅಂತಹ ಪ್ರಶ್ನೆಗೆ ಕೆಲವರು ಮುಜುಗರ ಅಥವಾ ಕೋಪವನ್ನು ಅನುಭವಿಸುತ್ತಾರೆ. ಕೆಲವೊಮ್ಮೆ ಅಂತಹ ಪ್ರಶ್ನೆಯನ್ನು ನಿರ್ಲಕ್ಷಿಸುವುದು ಒಳ್ಳೆಯದು. ಆದರೆ ಇಂತಹ ಪ್ರಶ್ನೆಗೆ ಯುವಕ ತನ್ನ ಮನೆಯ ಸಮೀಪವೇ ಯುವತಿಯನ್ನು ಕೊಂದ ಘಟನೆ ಇಂಡೋನೇಷ್ಯಾದಲ್ಲಿ ವರದಿಯಾಗಿದೆ.
ಆ ಯುವತಿ ನಿನ್ನ ಮದುವೆ ಯಾವಾಗ ಎಂದು ಸತತವಾಗಿ ಕೇಳಿದ್ದಕ್ಕೆ 28 ವರ್ಷದ ತರುಣ ತನ್ನ ಮನೆಯ ಪಕ್ಕದಲ್ಲಿರುವ 32 ವರ್ಷದ ಮಹಿಳೆಯ ಕೊಲೆ ಮಾಡಿದ ವರದಿ ಪೊಲೀಸರು ನೀಡಿದ್ದಾರೆ. ಪೊಲೀಸರ ಹೇಳಿಕೆಯ ಪ್ರಕಾರ ಮಹಿಳೆಯು ಆರೋಪಿಯ ಮನೆಗೆ ಹೋದಾಗ ಆದಷ್ಟು ಬೇಗ ಮದುವೆಯಾಗು ಎಂದು ಸೂಚಿಸಿದ್ದಳು.
ಈ ರೀತಿಯಾಗಿ ತನ್ನ ವಿಚಾರ ಹೇಳಿದ ನಂತರ ತರುಣನಿಗೆ ತನ್ನ ಅಪಮಾನವಾದ ಹಾಗೆ ಎನಿಸಿದೆ. ಎರಡನೆಯ ದಿನ ಆ ಯುವತಿಯ ಮನೆಗೆ ಹೋಗಿ ಬೆಡ್ ರೂಮಿನಲ್ಲಿ ಎಳೆದೊಯ್ದು ಕುತ್ತಿಗೆ ಒತ್ತಿ ಹತ್ಯೆಗೈದಿದ್ದಾನೆ. ಮಹಿಳೆಯು ಸ್ವರಕ್ಷಣೆಯ ಸಲುವಾಗಿ ಆರೋಪಿಯ ಬೆರಳನ್ನು ಕಚ್ಚಿದ್ದಳೆಂದು ಪೊಲೀಸರು ಹೇಳಿದರು. ಮಹಿಳೆಯನ್ನು ಕೊಲೆಗೈದ ನಂತರ ಆರೋಪಿ ಆಕೆಯ ಮೊಬೈಲ್ ಮತ್ತು ಪರ್ಸ್ ತೆಗೆದುಕೊಂಡು ಪರಾರಿಯಾದ್ದನು. ಆದರೆ ಪೊಲೀಸರು ಆತನನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.