ನನಗೆ ಫ್ರಿಡ್ಜ್ ಒಳಗೆ ಹೋಗಲು ಮನಸ್ಸಿಲ್ಲ,ಆದಿಲ್ ಅನ್ನು ಮದುವೆಯಾಗಿ ತಪ್ಪು ಮಾಡಿದೆ ಎಂದ ರಾಕಿ ಸಾವಂತ್.

CINEMA/ಸಿನಿಮಾ Entertainment/ಮನರಂಜನೆ

Rakhi Sawant And Adil Khan Controversy: ನಟಿ ರಾಖಿ ಸಾವಂತ್ (Rakhi Sawant) ಇತ್ತೀಚಿಗೆ ಮದುವೆ ವಿಚಾರದಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಟಿ ರಾಖಿ ಸಾವಂತ್ ಆದಿಲ್ ಅನ್ನು ಇತ್ತೀಚಿಗೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದು ಮದುವೆ ವಿಚಾರದಲ್ಲಿ ಸಾಕಷ್ಟು ವಿವಾದಗಳು ನಡೆಯುತ್ತಿದೆ. ಇದೀಗ ಮತ್ತೆ ರಾಕಿ ಸಾವಂತ್ ಆದಿಲ್ ಖಾನ್ ಮೇಲೆ ಗಂಭೀರ ಆರೋಪ ಮಾಡುತ್ತಿದ್ದಾರೆ.

ನಟಿ ರಾಖಿ ಸಾವಂತ್ ಮತ್ತೆ ಆದಿಲ್ ವಿಚಾರವಾಗಿ ಕಣ್ಣೀರಿಟ್ಟಿದ್ದಾರೆ. ಮೊದಲು ಕ್ಯಾಮೆರಾಗಳ ಮುಂದೆ ಆದಿಲ್ ಖಾನ್  (Adil Khan) ಅನ್ನು ಹಾಡಿ ಹೊಗಳುತ್ತಿದ್ದ ರಾಖಿ ಸಾವಂತ್ ಈಗ ಅವನ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಬೇರೆ ಹುಡುಗಿಯ ಜೊತೆ ಅವನು ಸಂಬಂಧವನ್ನು ಹೊಂದಿದ್ದಾನೆ ಎಂದು ಕಣ್ಣೀರಿಟ್ಟಿದ್ದಾರೆ.

Rakhi Sawant And Adil Khan Controversy
Image Source: India Today

ನಾನು ಆದಿಲ್ ನನ್ನ ಮದುವೆಯಾಗಿ ತಪ್ಪು ಮಾಡಿದೆ
ನಟಿ ರಾಕಿ ಸಾವಂತ್ ನಾನು ಆದಿಲ್ ನನ್ನ ಮದುವೆಯಾಗಿ ತಪ್ಪು ಮಾಡಿದೆ ಎಂದು ಅಳುತ್ತಿದ್ದಾರೆ. ಆದಿಲ್ ಗೆ ಬೇರೆ ಹುಡುಗಿಯೊಂದಿಗೆ ಅನೈತಿಕ ಸಂಬಂಧವಿದೆ. ಇದೆ ಕಾರಣಕ್ಕೆ 8 ತಿಂಗ್ಳು ನಮ್ಮ ಮದುವೆಯ ಬಗ್ಗೆ ಸುಮ್ಮನಿರಲು ಹೇಳಿದ್ದ. ಅವನು ಆಕೆಯ ಕಾರಣದಿಂದ ನಮ್ಮ ಮದುವೆಯನ್ನು ನಿರಾಕರಿಸಿದ್ದ. ನಂತರ ಅಭಿಮಾನಿಗಳು ಮತ್ತು ಮಾಧ್ಯಮಗಳಿಗೆ ಹೆದರಿ ಆದಿಲ್ ನಮ್ಮ ಮದುವೆಯನ್ನು ಒಪ್ಪಿಕೊಂಡ. ನಾನು ಸುಮ್ಮನಿದ್ದು ಸಾಕಾಗಿದೆ.

ಆದಿಲ್ ನ ಸಂಬಂಧವು ನನ್ನ ವೈವಾಹಿಕ ಜೀವನ ಹಾಳು ಮಾಡಿದೆ ಎಂದಿರುವ ರಾಕಿ, ನಾನು ಫ್ರಿಡ್ಜ್(Fridge) ಒಳಗೆ ಹೋಗುವುದಿಲ್ಲ, ಫ್ರಿಡ್ಜ್ ಒಳಗೆ ಹೋಗಲು ನಾನು ಇಷ್ಟಪಡುದಿಲ್ಲ ಎಂದು ಅಳುತ್ತಿದ್ದಾರೆ. ಈ ವೇಳೆ ಆ ಯುವತಿಗೆ ರಾಕಿ ಎಚ್ಚರಿಕೆ ನೀಡಿದ್ದಾರೆ. ‘ನೀನು ಒಬ್ಬ ಹೆಣ್ಣಾಗಿ ಇನ್ನೊಂದು ಹೆಣ್ಣಿನ ಜೀವನ ಹಾಳು ಮಾಡುತಿದ್ದಿ. ಅವನು ನನಗೆ ಮೋಸ ಮಾಡಿದ್ದಾರೆ ನಿನಗೂ ಮೋಸ ಮಾಡುತ್ತಾನೆ ಎನ್ನುದನ್ನು ಮರೆಯಬೇಡ’ ಎಂದಿದ್ದಾರೆ.
Rakhi Sawant And Adil Khan Controversy
Image Source: Times Of India

ಆದಿಲ್ ನ ಹುಡುಗಿ ಬೆದರಿಕೆ ಹಾಕುತ್ತಿದ್ದಾಳೆ ಎಂದ ರಾಕಿ
ಆದಿಲ್ ಮರಳಿ ಬಂದರೆ ನಾನು ಕ್ಷಮಿಸಲು ಸಿದ್ದ. ಆದರೆ ಫ್ರಿಡ್ಜ್ ನ ಒಳಗಡೆ ಹೋಗಲಾರೆ. ನನ್ನ ಸ್ವಾಭಿಮಾನಕ್ಕಾಗಿ ಹೇಗೆ ಹೊರಡಬೇಕೆಂದು ನನಗೆ ತಿಳಿದಿದೆ. ನಾನು ಇತರ ಹುಡುಗಿಯರಂತೆ ಮೌನವಾಗಿರುತ್ತೇನೆ ಎಂದು ಭಾವಿಸಬೇಡ.

ನೀವು ನನಗೆ ಬೆದರಿಕೆ ಹಾಕಿದರೆ ನಾನು ಅದನ್ನು ಸಹಿಸುವುದಿಲ್ಲ ಎಂದು ಹೇಳಿರುವ ರಾಕಿ, ಅಧಿಲ್ ನ ಹುಡುಗಿ ತಮಗೆ ಬೆದರಿಕೆ ಹಾಕುತ್ತಿದ್ದಾಳೆ ಎಂದಿದ್ದಾರೆ. ನನ್ನ ಕಣ್ಣೀರಿಗೆ ದೇವರು ಸೇಡು ತೀರಿಸಿಕೊಳ್ಳುತ್ತಾನೆ. ಹೆಂಡತಿಗೆ ನಿಷ್ಠನಾಗದವನು ಇಂದಿಗೂ ಇತರರಿಗೆ ನಿಷ್ಠನಾಗುವುದಿಲ್ಲ ಎಂದು ಹೇಳಿದ್ದಾರೆ.
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...