ಗಂಡಸರಿಗೆ ಕಷ್ಟ ಆಗುವ ಈ ಸಾಹಸವನ್ನು ಈ ನಟಿ ಸೀರೆ ಧರಿಸಿ ಮಾಡಿದ್ದು ಹೇಗೆ ನೋಡಿ

ಪ್ರಿಯ ಓದುಗರೇ ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳು ಪುರುಷರನ್ನೇ ಮೀರಿಸುವಂತ ಲೆವೆಲ್ಗೆ ಬೆಳೀತಿದಾರೆ ಇನ್ನು ಕೆಲವು ಮಹಿಳೆಯರು ಪುರುಷರಿಗಿಂತ ಏನು ಕಡಿಮೆ ಇಲ್ಲ ಎಂದು ಮಹಿಳೆಯರು ಪುರುಷರು ಮಾಡುವ ಬಹುತೇಕ ಎಲ್ಲ ಕೆಲಸಗಳನ್ನು, ಸಾಧನೆಯನ್ನು ಮಾಡಿದ್ದಾರೆ. ಅಂತಹದೇ ಪ್ರಯತ್ನವನ್ನು ತೆಲುಗು ನಟಿ ಅದಾ ಶರ್ಮಾ ಅವರು ಮಾಡಿದ್ದಾರೆ. ಕಾರ್ಟ್ ವೀಲ್ ಮಾಡುವುದು ಗಂಡಸರಿಗೆ ಕಷ್ಟ ಎಂದು ಹೇಳುತ್ತಾರೆ ಆದರೆ ಅದಾ ಶರ್ಮಾ ಅವರು ಸೀರೆ ಧರಿಸಿಕೊಂಡು ಕಾರ್ಟ್ ವೀಲ್ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಅದಾ ಶರ್ಮಾ ಅವರು ತೆಲುಗು ಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಕಡಲತೀರದಲ್ಲಿ ಸೀರೆ ಧರಿಸಿಕೊಂಡು ಕಾರ್ಟ್ ವೀಲ್ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಾರ್ಟ್ ವೀಲ್ ಮಾಡುವುದು ಗಂಡಸರಿಗೆ ಕಷ್ಟ ಎಂದು ಹೇಳಲಾಗುತ್ತದೆ ಆದರೆ ಅದಾ ಶರ್ಮಾ ಅವರು ಸೀರೆ ಧರಿಸಿಕೊಂಡು ಸುಲಭವಾಗಿ ಕಾರ್ಟ್ ವೀಲ್ ಮಾಡಿದ್ದಾರೆ ಎಂದು ಅವರ‌ ಪೋಟೊ ಮತ್ತು ವಿಡಿಯೋ ನೋಡಿದರೆ ಆಶ್ಚರ್ಯವಾಗುತ್ತದೆ.

ಜ್ಯಿಮ್ನಾಸ್ಟಿಕ್ ಪಾರುಲ್ ಅರೋರಾ ಸೀರೆ ಧರಿಸಿಕೊಂಡು ತ್ರಿಪಲ್ ಕ್ಲಿಪ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಅವರಂತೆ ಇದೀಗ ಅದಾ ಶರ್ಮಾ ಮಾಡುತ್ತಿರುವ ಕಾರ್ಟ್ ವೀಲ್ ವಿಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ. ಅದಾ ಶರ್ಮಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಿಡಿಯೋದಲ್ಲಿ ಅವರು ಸೀರೆ ಧರಿಸಿಕೊಂಡು ಬಹಳ ಸಲೀಸಾಗಿ ಕಾರ್ಟ್ ವೀಲ್ ಮಾಡಿದ್ದಾರೆ.

ಅದಾ ಶರ್ಮಾ ಅವರು ಗುಲಾಬಿ ಬಣ್ಣದ ಸೀರೆಯನ್ನು ಮಹಾರಾಷ್ಟ್ರದ ಸಾಂಪ್ರದಾಯದಂತೆ ಸೊಂಟಕ್ಕೆ ಕಟ್ಟಿಕೊಂಡು ಬೀಚಿನಲ್ಲಿ ಕಾರ್ಟ್ ವೀಲ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅದಾ ಶರ್ಮಾ ಅವರು ಯಾವುದೇ ಮೇಕಪ್ ಮಾಡಿಕೊಂಡಿರಲಿಲ್ಲ ನೈಜವಾಗಿ ಕಾಣುತ್ತಿದ್ದರು ಅಲ್ಲದೆ ಕೂದಲಿನ ಸಮಸ್ಯೆ ಆಗಬಾರದೆಂದು ತುರುಬಿನಂತೆ ಬಂಧಿಸಿದ್ದರು. ಅದಾ ಶರ್ಮಾ ಅವರು ಹಂಚಿಕೊಂಡ ವಿಡಿಯೋದಲ್ಲಿ ಅವರು ಕಾರ್ಟ್ ವೀಲ್ ಮಾಡಲು ಸಿದ್ಧರಿರುವುದರಿಂದ ಹಿಡಿದು ಕೊನೆಯವರೆಗೆ ಶೂಟ್ ಮಾಡಲಾಗಿದೆ. ಅದಾ ಶರ್ಮಾ ಅವರು ಒಟ್ಟು ನಾಲ್ಕು ಕಾರ್ಟ್ ವೀಲ್ ಮಾಡಿ ತೆರೆದ ತೋಳುಗಳಿಂದ ನೀರಿನ ಕಡೆ ಓಡುವುದು ಕಂಡುಬಂದಿದೆ. ಅವರು ತಾವು ಕಾರ್ಟ್ ವೀಲ್ ಮಾಡಲು ಯಾವುದೇ ಆಯಾಸ ಪಡದೆ ಸಲೀಸಾಗಿ, ಖುಷಿಯಿಂದ ಮಾಡಿದ್ದಾರೆ. ಒಟ್ಟಿನಲ್ಲಿ ತೆಲುಗು ನಟಿ ಅದಾ ಶರ್ಮಾ ಅವರ ಕಾರ್ಟ್ ವೀಲ್ ವಿಡಿಯೋ ಸಖತ್ ವೈರಲ್ ಆಗುತ್ತಿದೆ ಹಾಗೆ ನೋಡಿ ಎಲ್ಲರಿಗೂ ಆಶ್ಚರ್ಯವಾಗುತ್ತಿದೆ.

You might also like

Comments are closed.