actress-sitara

ಚಿತ್ರರಂಗದಿಂದ ದೂರಾದ ನಟಿ ಸಿತಾರ ಶಬರಿ ಮಲೆಯಲ್ಲಿ ಕಾಣಿಸಿಕೊಂಡಿದ್ದಾರೆ.! ಅಯ್ಯಪ್ಪ ಮಾಲೆ ಹಾಕಿಕೊಂಡು ದರ್ಶನ ಪಡೆದ ನಟಿ.!

Entertainment/ಮನರಂಜನೆ

ಬಹುಭಾಷ ನಟಿ ಸೀತಾರಾ ಅವರು ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ 90ರ ದಶಕದಿಂದಲೂ ಕೂಡ ಸಕ್ರಿಯವಾಗಿರುವ ನಟಿ. ತಮ್ಮ ಅಮೋಘ ನಟನೆ ಹಾಗೂ ತಾವು ಆಯ್ದುಕೊಂಡ ಪಾತ್ರಗಳಿಂದ ಬಹಳ ಖ್ಯಾತಿ ಪಡೆದ ಇವರು ಕನ್ನಡಿಗರಿಗೂ ಕೂಡ ಚಿರಪರಿಚಿತರು. ಮೂಲತಃ ಕೇಳದವರಾದ ಇವರು ತಮ್ಮ ಸಿನಿ ಜರ್ನಿಯನ್ನು ಕೂಡ ಮಲಯಾಳಂ ಸಿನಿಮಾಗಳಿಂದ ಆರಂಭಿಸಿದರು.

ಮೋಹನ್ ಲಾಲ್ ಮಮ್ಮುಟಿ ಅಂತಹ ಫೇಮಸ್ ನಟರೊಂದಿಗೆ ತೆರೆ ಹಂಚಿಕೊಂಡ ಇವರು ಬಳಿಕ ತಮಿಳು ಕನ್ನಡ ಸಿನಿಮಾರಂಗದತ್ತ ಕುರಿತು ಗಮನ ಹರಿಸಿದರು. ಇವರು ತಮ್ಮ ವೃತ್ತಿ ಜೀವನದಲ್ಲಿ ಸುಮಾರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅರ್ಧದಷ್ಟು ಕನ್ನಡ ಸಿನಿಮಾಗಳೇ ಇದೆ ಎನ್ನುವುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ವಿಷಯ.

ಹಾಲುಂಡ ತವರು, ಕಾವ್ಯ ಮುಂತಾದ ಕೌಟುಂಬಿಕ ಕಥಾ ಹಂದರವುಳ್ಳ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಸಿತಾರ ಅವರು ಕನ್ನಡದಲ್ಲಿ ವಿಷ್ಣುವರ್ಧನ್ ಅವರಿಗೆ ಅತ್ಯುತ್ತಮ ಜೋಡಿ ಆಗಿದ್ದರು. ವಿಷ್ಣುವರ್ಧನ್ ಅಂಬರೀಶ್ ರಾಮ್ ಕುಮಾರ್ ಶಶಿಕುಮಾರ್ ಹೀಗೆ ಆ ಕಾಲದ ಘಟ್ಟದ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಾಯಕ ನಟಿಯಾಗಿ ಸೀತಾರಾ ಅಭಿನಯಿಸಿದ್ದರು.

ಇವರು ಸಿನಿಮಾ ಬದುಕಿನಲ್ಲಿ ಉತ್ತುಂಗ ಸ್ಥಾನದಲ್ಲಿ ಇದ್ದಾಗಲೇ ನಿಧಾನವಾಗಿ ಬಣ್ಣದ ಪ್ರಪಂಚದ ನಂಟು ಕಳೆದುಕೊಂಡರು. ಬಳಿಕ ಅವರು ವಿದೇಶದಲ್ಲಿ ನೆಲೆಸಿದ್ದಾರೆ ಎನ್ನುವ ಗಾಳಿ ಸುದ್ದಿಗಳು ಕೂಡ ಹರಿದಾಡಿದ್ದವು. ಇನ್ನು ಕೆಲವರು ಅವರು ಮದುವೆಯಾಗಿ ಸೆಟೆಲ್ ಆಗಿದ್ದಾರೆ ಸಿನಿಮಾ ರಂಗಕ್ಕೆ ಬೈಬೈ ಹೇಳಿದ್ದಾರೆ ಎಂದು ಕೂಡ ಮಾತನಾಡುತ್ತಿದ್ದರು.

Actress Sithara reveals the reason for being unmarried - Tamil News -  IndiaGlitz.com

ಬಹಳ ವರ್ಷಗಳ ಬಳಿಕ ಮತ್ತೆ ತಮ್ಮ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿದ ಇವರು ಈಗ ತಾಯಿಯ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೂ ಇವರು ಭಾರತದಲ್ಲೇ ನೆಲೆಸಿದ್ದು ಇನ್ನು ಅವಿವಾಹಿತರಾಗಿಯೇ ಉಳಿದಿದ್ದಾರೆ ಎನ್ನುವುದು ತಿಳಿದು ಬಂದಿದೆ.

ಆತ್ಮೀಯರೊಬ್ಬರ ಸಾ’ವಿನಿಂದ ಬಹಳ ಮಾನಸಿಕವಾಗಿ ಕುಗ್ಗಿ ಹೋದ ಇವರು ಬದುಕಿನ ಬಗ್ಗೆ ಆಸಕ್ತಿ ಕಳೆದುಕೊಂಡು ಒಂಟಿಯಾಗಿರುವ ನಿರ್ಧಾರ ಮಾಡಿದ್ದರಂತೆ ಈ ಬಗ್ಗೆ ಅವರೇ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಬದುಕಿನ ಬಗ್ಗೆ ಆಸಕ್ತಿ ಕಳೆದುಕೊಂಡವರಿಗೆ ಸಾಮಾನ್ಯವಾಗಿ ಆಧ್ಯಾತ್ಮದ ಕಡೆ ಆಕರ್ಷಣೆ ಇರುತ್ತದೆ. ಅದಕ್ಕೆ ಹೊಲುವಂತೆ ಸೀತಾರಾ ಅವರೂ ಕೂಡ ಈಗ ಹಾಗೆ ಬದುಕುತ್ತಿದ್ದಾರೆ ಎನ್ನಬಹುದು.

ಯಾಕೆಂದರೆ ಇತ್ತೀಚೆಗೆ ಅವರು ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಹಿಂದೂ ಧರ್ಮಿಯರ ಪಾಲಿಗೆ ಬಹಳ ವಿಶೇಷ ಆಗಿರುವ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಪಡೆದಿದ್ದಾರೆ. ಮಹಿಳೆಯರಿಗೆ ಅಲ್ಲಿ ಪ್ರವೇಶ ನಿ’ಷಿ’ದ್ಧ. ಆದರೆ ಸಿತಾರರವರು ಪದ್ಧತಿಯಂತೆಯೇ ಅಯ್ಯಪ್ಪ ಮಾಲೆತೊಟ್ಟು ಮಾಲಾಧಾರಿಯಾಗಿ ಹೋಗಿ ಇತರ ಮಹಿಳೆಯರ ಜೊತೆಗೆ ಸಾಮಾನ್ಯರಂತೆ ಹೋಗಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ.

ಈಗ ಸೋಶಿಯಲ್ ಮೀಡಿಯಾದಲ್ಲಿ ಆ ಫೋಟೋಗಳು ವೈರಲ್ ಆಗಿವೆ, ಎಲ್ಲರ್ ಸೀತಾರಾ ಅವರ ಭಕ್ತಿಯನ್ನು ಮೆಚ್ಚಿ ಮಾತನಾಡುತ್ತಿದ್ದಾರೆ. ಸೀತಾರಾ ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅವರ ಚಕ್ರವ್ಯೂಹ ಸಿನಿಮಾದಲ್ಲೂ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಅದಾದ ಬಳಿಕ ತಾಯಿಯಾಗಿ ಅಮ್ಮ ಐ ಲವ್ ಯು ಎನ್ನುವ ಸಿನಿಮಾದಲ್ಲೂ ಕಾಣಿಸಿಕೊಂಡು ಗೆದ್ದರು. ಮತ್ತೊಮ್ಮೆ ಅವರನ್ನು ಕನ್ನಡ ಸಿನಿಮಾ ಗಳಲ್ಲಿ ನೋಡುವ ಭಾಗ್ಯ ಕನ್ನಡಿಗರಿಗೆ ಸಿಗಲಿ ಅವರ ಮುಂದಿನ ಬದುಕು, ಅವರ ಇಚ್ಛೆಯಂತೆ ಇರಲಿ ಎಂದು ಅಭಿಮಾನಿಗಳಾಗಿ ನಾವು ಕೂಡ ಹರಸೋಣ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.