Actress-Pragathi-Mahavadi

ಒಬ್ಬಂಟಿ ಜೀವನ ಸಾಕಾಗಿದೆ ಮೂರನೇ ಮದುವೆಯಾಗಬೇಕು ಅನ್ನೋ ಆಸೆ ಇದೆ,ಆದರೆ ಈ ವಯಸ್ಸಿನಲ್ಲಿ ಆಗಬಹುದಾ ಎಂದ ನಟಿ ಪ್ರಗತಿ! ಮನದ ಆಸೆ ಹೊರಹಾಕಿದ ನಟಿ ಹೇಳಿದ್ದೇನು ನೋಡಿ!!

CINEMA/ಸಿನಿಮಾ Entertainment/ಮನರಂಜನೆ

Actress Pragathi: ಟಾಲಿವುಡ್ (Tollywood) ನಲ್ಲಿ ಪೋಷಕ ನಟಿಯಾಗಿ ಗುರುತಿಸಿಕೊಂಡ ನಟಿ ಪ್ರಗತಿ ಸಾಕಷ್ಟ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ ಇನ್ನು ನಟಿ ಪ್ರಗತಿ ಸಿನಿಮಾ (Film)ದಲ್ಲಿ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾ (Social Media) ದಲ್ಲಿಯೂ ಕೂಡ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುತ್ತಾರೆ. ಹಾಗಾಗಿ ನಟಿ ಪ್ರಗತಿ ಜನರೊಂದಿಗೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ ತಮ್ಮ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ.

ಇನ್ನು ವರ್ಕೌಟ್ (Workout) ವಿಷಯ ಬಂದರೆ ಇವರ ವಯಸ್ಸಿಗೂ ಮೀರಿದ ಪರಿಶ್ರಮ ಇವರದ್ದು. ಈ ವಯಸ್ಸಿನಲ್ಲಿಯೂ ಕೂಡ ಹೆವಿ ವರ್ಕೌಟ್ ಮಾಡುವ ಪ್ರಗತಿ ಇನ್ಸ್ಟಾಗ್ರಾಮ್ (Instagram) ನಲ್ಲಿ ಡ್ಯಾನ್ಸ್ (Dance) ಮಾಡುವುದರ ಮೂಲಕ ರಿಲ್ಸ್ (Reels) ಮಾಡುವುದರ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಆದರೆ ಅವರ ಈ ಪರಿಶ್ರಮವನ್ನು ಕೆಲವರು ಟ್ರೋಲ್ ಮಾಡುವುದು ಉಂಟು ಆದರೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಪ್ರಗತಿ ಸಿಂಗಲ್ ಮದರ್.

ಬಹಳ ವರ್ಷಗಳಿಂದ ದೂರಾಗಿದ್ದು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿ ತಪ್ಪು ಮಾಡಿಬಿಟ್ಟೆ ಎಂದು ಅವರ ಹೇಳಿಕೊಂಡಿದ್ದು ಇದೆ. ನಟಿ ಪ್ರಗತಿ ಸಿನಿಮಾಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದು 1994 ರಲ್ಲಿ. ಮೂರು ವರ್ಷಗಳ ಕಾಲ ತಮಿಳು, ಮಲಯಾಳಂ ನಲ್ಲಿ ನಾಯಕಿಯಾಗಿ ನಟಿಸಿದರು 90ರ ದಶಕದಲ್ಲಿ ಕಿರುತೆರೆಯ ಧಾರವಾಹಿಗಳಲ್ಲಿಯೂ ಕೂಡ ಪ್ರಗತಿ ಅಭಿನಯಿಸಿದ್ದಾರೆ.

Actress-Pragathi-Mahavadi
Actress-Pragathi-Mahavadi

ಮದುವೆಯಾಗಿ ಚಿತ್ರರಂಗದಿಂದ ದೂರಾಗಿದ್ದ ಪ್ರಗತಿ ಐದು ವರ್ಷಗಳ ನಂತರ ಮಹೇಶ್ ಬಾಬು ನಟನೆಯ ಬಾಬಿ ಸಿನಿಮಾದ ಮೂಲಕ ಮತ್ತೆ ಚಿತ್ರರಂಗಕ್ಕೆ ವಾಪಸ್ ಬರುತ್ತಾರೆ. ಆರಂಭಿಸಿರುವ ನಟಿ ಪ್ರಗತಿ ಪೋಷಕ ನಟಿಯಾಗಿ ಅಭಿನಯಿಸುತ್ತಿದ್ದಾರೆ. ನಟಿ ಪ್ರಗತಿ ಅವರಿಗೆ ಪೊಲೀಸ್ ಆಗಬೇಕು ಎನ್ನುವ ಕನಸು ಇತ್ತಂತೆ. ಆದರೆ ಓದಲು ಸಾಧ್ಯವಾಗದೆ ಮದುವೆಯಾಗಿ ಸೆಟಲ್ ಆಗಬೇಕು ಎಂದುಕೊಂಡರು.

ಹಾಗಾಗಿ ಚಿಕ್ಕ ವಯಸ್ಸಿನಲ್ಲಿ ಮದುವೆಯಾದ ಪ್ರಗತಿ ಗಂಡನಿಂದ ದೂರ ಆದ ಬಳಿಕ ಇದು ನನ್ನ ತಪ್ಪು ನಿರ್ಧಾರ ಎಂದು ಹೇಳಿಕೊಂಡಿದ್ದಾರೆ. ನನ್ನ ಆವೇಶ, ಅಹಂಕಾರ, ಏನು ಬೇಕಾದರೂ ಮಾಡ್ತೀನಿ ಎನ್ನುವ ಹಠ ಇದೆಲ್ಲದರಿಂದ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಆದೆ. ಆದರೆ ಅದರಿಂದ ಸಾಕಷ್ಟು ಸಮಸ್ಯೆ ಎದುರಿಸಿದೆ ಎಂದು ಪ್ರಗತಿ ಹೇಳಿಕೊಂಡಿದ್ದರು. ಮದುವೆ ಎನ್ನುವ ತಪ್ಪು ನಡೆದುಹೋದರೆ ಅದರಿಂದ ಹಿಂದಿರುಗಿ ಬರುವುದು ಬಹಳ ಕಷ್ಟ.

ನಾನು ನಾಯಕಿಯಾಗಿ ನಟಿಸುತ್ತಿದ್ದ ಸಮಯದಲ್ಲಿಯೇ ನನಗೆ ಮದುವೆ ಆಗಿದ್ದು ಅದರಿಂದ ನಾನು ಕಳೆದುಕೊಂಡಿದ್ದೆ ಹೆಚ್ಚು ಎಂದು ಪ್ರಗತಿ ಹೇಳಿದ್ದಾರೆ. ಪ್ರಗತಿಗೆ ಸಂಗಾತಿ ಬೇಕಂತೆ ಪೋಷಕ ನಟಿಯಾಗಿ ಶ್ರಮಿಸಿದ ರೀತಿಯಲ್ಲಿ ನಾಯಕಿಯಾಗಿದ್ದಾಗ ಕೆಲಸ ಮಾಡಿದರೆ ನನ್ನ ಲೈಫ್ ಬೇರೆ ಇರುತ್ತಿತ್ತು ಎಂದು ಹೇಳಿಕೊಳ್ಳುವ ಪ್ರಗತಿ ಎರಡನೇ ಮದುವೆ ಆಗುವ ಯೋಚನೆ ಇದೆಯಾ ಎನ್ನುವ ಪ್ರಶ್ನೆಗೆ ಈ ರೀತಿಯಾಗಿ ಉತ್ತರಿಸಿದ್ದಾರೆ.

Actress-Pragathi-Mahavadi
Actress-Pragathi-Mahavadi

‘ಮದುವೆ ಎನ್ನುವುದಕ್ಕಿಂತ ಜೊತೆಗೆ ಇರಲು ಒಬ್ಬ ಸಂಗಾತಿ ಬೇಕು ಜೊತೆಗಾರ ಬೇಕು ಎನಿಸುತ್ತೆ. ಆದರೆ ನನ್ನ ಮೆಚ್ಯುರಿಟಿಗೆ ಮ್ಯಾಚ್ ಆಗುವಂತ ವ್ಯಕ್ತಿ ಸಿಗಬೇಕು ಕೆಲವೊಂದು ವಿಷಯಗಳಲ್ಲಿ ನನಗೆ ಕಾನ್ಫಿಡೆನ್ಸ್ ಜಾಸ್ತಿ ಅದೇ ಸಮಸ್ಯೆ ಆಗುತ್ತೆ’ ಎಂದು ಹೇಳಿದ್ದಾರೆ. ಅಲ್ಲದೆ ಈಗ ಯಾರೊಂದಿಗೂ ಅಡ್ಜಸ್ಟ್ ಆಗುವುದು ಕೂಡ ಕಷ್ಟ.

20 ರ ಹರೆಯ ಆಗಿದ್ದರೆ ಅಡ್ಜಸ್ಟ್ ಆಗುತ್ತಿದೆ ಆದರೆ ಇದು ಮದುವೆ ವಯಸ್ಸಲ್ಲ ಹಾಗಾಗಿ ಯಾರೊಂದಿಗೂ ಅಡ್ಜಸ್ಟ್ ಆಗೋದು ಕಷ್ಟ ಎಂದು ಹೇಳುವ ಪ್ರಗತಿ ಇದೀಗ ಮಗಳ ಜೊತೆ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ ಆದರೆ ಸಿನಿಮಾಗಳಲ್ಲಿ ಹೆಚ್ಚು ಬೇಡಿಕೆ ಗಳಿಸಿಕೊಂಡಿರುವ ನಟಿ ಪ್ರಗತಿ ಸದ್ಯ ವೃತ್ತಿ ಜೀವನದಲ್ಲಿ ಬ್ಯುಸಿ ಆಗಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...