ಕನ್ನಡದ ಹೆಸರಾಂತ ನಟ ಲಕ್ಷ್ಮಣ್ ಇನಿಲ್ಲ,ಕಂಬನಿ ಮಿಡಿದ ಚಿತ್ರರಂಗ.

Veteran Kannada actor Laxman passed away: ಕನ್ನಡ ಚಿತ್ರರಂಗದ ಹಿರಿಯ ನಟ ಲಕ್ಷ್ಮಣ್ (Actor Lakshman) ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ.

ಸ್ಯಾಂಡಲ್ ವುಡ್ (Sandalwood) ನ ಹೆಸರಾಂತ ನಟ ಲಕ್ಷ್ಮಣ್ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದೀಗ ನಟ ಲಕ್ಷಣ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

Veteran Kannada actor Laxman passed away
Image Credit: news18

ಹಿರಿಯ ನಟ ಲಕ್ಷ್ಮಣ್ ಇನ್ನಿಲ್ಲ
ಇಂದು ಬೆಳಿಗ್ಗೆ ಹಿರಿಯ ನಟ ಲಕ್ಷ್ಮಣ್ ಅವರಿಗೆ ಎದೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಆಸತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ರಸ್ತೆ ಮಧ್ಯೆದಲ್ಲಿಯೇ ನಟ ಲಕ್ಷ್ಮಣ್ ಅವರು ಕೊನೆ ಉಸಿರು ಎಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಬೆಂಗಳೂರಿನ ಮೂಡಲಪಾಳ್ಯದ ನಿವಾಸದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮಣ್
ಮುನ್ನೂರಕ್ಕೂ ಹೆಚ್ಚು ಸಿನಿಮಾದಲ್ಲಿ ಖಳನಟರಾಗಿ ನಟಿಸಿರುವ ಇವರು ಮಲ್ಲ, ಯಜಮಾನ, ಸೂರ್ಯವಂಶ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ರೆಬೆಲ್ ಸ್ಟಾರ್ ಅಂಬರೀಷ್ (Rebel Star Ambareesh) ಅವರ ನೆಚ್ಚಿನ ನಟ ಅನ್ನುವ ಖ್ಯಾತಿಗೂ ಪಾತ್ರರಾಗಿದ್ದರು.

ಡಾ. ರಾಜಕುಮಾರ್ (D. Rajakumar), ರವಿಚಂದ್ರನ್ (Ravichandran), ಶಿವರಾಜ್ ಕುಮಾರ್ (Shivaraj Kumar) ಹೀಗೆ ಸಾಕಷ್ಟು ದಿಗ್ಗಜ ನಟರೊಂದಿಗೆ ಕೆಲಸ ಮಾಡಿದ ಹೆಗ್ಗಳಿಕೆ ನಟ ಲಕ್ಷ್ಮಣ್ ಇವರದ್ದು.

Actor Laxman, who acted in many films, left this world today
Image Credit: news18

ಸಿನಿಮಾ ರಂಗದಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆದ ನಟ ಲಕ್ಷ್ಮಣ್
ನಟ ಲಕ್ಷ್ಮಣ್ ಅವರ ಸಾವನ್ನು ಕೇಳಿದ ಅಭಿಮಾನಿಗಳು ಭಾವುಕರಾಗಿದ್ದಾರೆ.ಲಕ್ಷ್ಮಣ್ ಅವರ ತಂದೆ ಸೈನಿಕರಾಗಿದ್ದರು. ಅವರ ಸಹೋದರ ಕೂಡ ಪೊಲೀಸ್ ಇಲಾಖೆಯಲ್ಲಿದ್ದರು. ಹಾಗಾಗಿ ಸಹಜವಾಗಿಯೇ ಲಕ್ಷ್ಮಣ್ ಅವರ ಸೆಳೆತ ಖಾಕಿ ಮೇಲೆ ಇದ್ದಿತ್ತು. ಆದರೆ ತಾಯಿ ಒಪ್ಪದ ಕಾರಣದಿಂದಾಗಿ ಬಣ್ಣದ ಪ್ರಪಂಚಕ್ಕೆ ಬಂದರು.

ಕೆಲವು ಕಾಲ ಫ್ಯಾಕ್ಟರಿ ಯಲ್ಲಿ ಕೆಲಸ ಮಾಡಿದರು. ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ನಟರಾಗಿ ಸೇವೆ ಸಲ್ಲಿಸಿ ಅನಂತರ ಸಿನಿಮಾ ರಂಗಕ್ಕೆ ಬಂದರು. ಸಿನಿಮಾ ರಂಗದಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆದರು.

You might also like

Comments are closed.