ಇದ್ದಕ್ಕಿದ್ದಂತೆ ಮಾವಿನ ತೋಟಕ್ಕೆ ನುಗ್ಗಿದ ನಟಿ ಆಶಿಕ ರಂಗನಾಥ್ ಮಾಡಿದ್ದೇನು ಗೊತ್ತಾ? ವಿಡಿಯೋ ಬಾರಿ ವೈರಲ್ ನೋಡಿ!!

CINEMA/ಸಿನಿಮಾ Entertainment/ಮನರಂಜನೆ

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ, ಆಶಿಕಾ ರಂಗನಾಥ್. ಇಂದು ಇವರು ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ಇರುವ ನಾಯಕಿ, ಸಾಲು ಸಾಲು ಸಿನಿಮಾಗಳು ಆಶಿಕಾ ರಂಗನಾಥ್ ಅವರ ಕೈಯಲ್ಲಿದೆ. ಪ್ರಸ್ತುತ ಆಶಿಕಾ ರಂಗನಾಥ್ ಅವರು ಕನ್ನಡ ಮಾತ್ರವಲ್ಲದೆ ತೆಲುಗು ಭಾಷೆಯಲ್ಲಿ ಸಹ ನಟಿಸಿ, ತೆಲುಗು ಚಿತ್ರರಂಗದ ಕ್ರಶ್ ಆಗಲು ಸಜ್ಜಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಆಶಿಕಾ ಅವರ ವಿಡಿಯೋ ಒಂದು ಈಗ ವೈರಲ್ ಆಗಿದೆ.

ನಟಿ ಆಶಿಕಾ ರಂಗನಾಥ್ ಅವರು ನಟನೆಗೆ ಸಂಬಂಧ ಇಲ್ಲದ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಇವರ ಅಕ್ಕ ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿದ್ದವರು. ಹಾಗೆಯೇ ಆಶಿಕಾ ರಂಗನಾಥ್ ಅವರಿಗೂ ನಟನೆಯಲ್ಲಿ ಆಸಕ್ತಿ ಬೆಳೆಯಿತು. ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೊದಲು ಆಶಿಕಾ ರಂಗನಾಥ್ ಅವರು ಬಹಳ ಕಷ್ಟಪಟ್ಟಿದ್ದಾರೆ. ಬ್ಯಾಕ್ ಸ್ಟೇಜ್ ಡ್ಯಾನ್ಸರ್ ಆಗಿ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅಂದು ಪಟ್ಟ ಆ ಶ್ರಮದ ಪ್ರತಿಫಲವೆ ಇಂದು ಆಶಿಕಾ ಅವರು ಸ್ಟಾರ್ ಹೀರೋಯಿನ್ ಆಗಿದ್ದಾರೆ. ಆಶಿಕಾ ರಂಗನಾಥ್ ಅವರು ಹೀರೋಯಿನ್ ಆಗಿದ್ದು, ಜಾಲಿ ಬಾಯ್ ಎನ್ನುವ ಸಿನಿಮಾ ಮೂಲಕ, ಆದರೆ ಇವರಿಗೆ ಹೆಸರು ಕೀರ್ತಿ ತಂದುಕೊಟ್ಟಿದ್ದು, ರಾಂಬೋ2 ಸಿನಿಮಾ. ಚುಟು ಚುಟು ಹಾಡಿನ ಮೂಲಕ ಫೇಮಸ್ ಆದರು ಆಶಿಕಾ ರಂಗನಾಥ್. ರಾಂಬೋ2 ಸಿನಿಮಾ ಮೂಲಕ ಕರ್ನಾಟಕದ ಹುಡುಗರ ಕ್ರಶ್ ಆದರು.

ಇವರು ಮಾತನಾಡುವ ಮುದ್ದು ಕನ್ನಡ ಹಲವರ ಫೇವರೆಟ್ ಆಗಿದೆ. ನಟನೆಯಲ್ಲಿ ಸಹ ಅಚ್ಚುಕಟ್ಟಾಗಿ ಅಭಿನಯಿಸುತ್ತಾರೆ ಆಶಿಕಾ ರಂಗನಾಥ್. ರಾಂಬೋ ನಂತರ ಗಣೇಶ್ ಅವರೊಡನೆ ಮುಗುಳುನಗೆ, ಶ್ರೀಮುರಳಿ ಅವರೊಡನೆ ಮದಗಜ, ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳಿಗೆ ನಾಯಕಿಯಾದರು ಆಶಿಕಾ ರಂಗನಾಥ್. ಪ್ರಸ್ತುತ ಆಶಿಕಾ ರಂಗನಾಥ್ ಅಭಿನಯದ ಅವತಾರ್ ಪುರುಷ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.




ಈ ಸಿನಿಮಾದಲ್ಲಿ ಮತ್ತೊಮ್ಮೆ ಶರಣ್ ಅವರೊಡನೆ ಅಭಿನಯಿಸಿದ್ದಾರೆ ಆಶಿಕಾ. ಈ ಸಿನಿಮಾ ವಿಭಿನ್ನವಾಗಿದ್ದು, ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಇದರ ಜೊತೆಗೆ ಆಶಿಕಾ ಅವರು ತೆಲುಗಿನಲ್ಲಿ ಸಹ ಒಂದು ಸಿನಿಮಾ ಸೈನ್ ಮಾಡಿದ್ದು, ತೆಲುಗಿನ ಜನರನ್ನು ರಂಜಿಸಲು ಸಿದ್ಧವಾಗಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ ಆಶಿಕಾ, ತಮ್ಮ ಲೈಫ್ ನ ಸುಂದರ ಕ್ಷಣಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

ಆಗಾಗ ಆಶಿಕಾ ಅವರ ವಿಡಿಯೋ ಮತ್ತು ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಇದೀಗ ಆಶಿಕಾ ಅವರು ತಮ್ಮ ತೋಟದಲ್ಲಿ, ಬೇಸಿಗೆ ಕಾಲದ ಸ್ಪೆಷಲ್ ಮಾವಿನ ಕಾಯಿಯನ್ನು ಮರದಿಂದ ಕುಯ್ಯುತ್ತಿರುವ ವಿಡಿಯೋ ಒಂದು ವೈರಲ್ ಆಗಿದ್ದು, ಆಶಿಕಾ ರಂಗನಾಥ್ ಅವರಿಗೆ ಇದೆಲ್ಲಾ ಗೊತ್ತಾ ಎಂದು ಅಭಿಮಾನಿಗಳು ಆಶ್ಚರ್ಯಪಟ್ಟಿದ್ದಾರೆ. ಹಾಗೆ ಆಶಿಕಾ ಅವರ ಕ್ಯೂಟ್ನೆಸ್ ಅನ್ನು ಸಹ ಎಂಜಾಯ್ ಮಾಡುತ್ತಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.