ಕಳೆದ ಎರಡು ವರ್ಷದಿಂದ ಚಿತ್ರಮಂದಿರಗಳಿಗೆ ಹೋಗದೆ ಹೊಸ ಸಿನಿಮಾ ನೋಡದೆ ಬೇಸರ ಗೊಂಡಿದ್ದ ಸಿನಿ ಪ್ರಿಯರಿಗೆ ಈ ವರ್ಷದಲ್ಲಿ ಭರಪೂರ ಮನೋರಂಜನೆ ಸಿಗುತ್ತಿದೆ. ಒಂದಾದರ ಮೇಲೊಂದರಂತೆ ಒಳ್ಳೆಯ ಕನ್ನಡ ಸಿನಿಮಾಗಳು ತೆರೆ ಮೇಲೆ ಬರುತ್ತಿದೆ. ಇದೇ ರೀತಿ ಇದೀಗ ಇವತ್ತು ಯುಗಾದಿ ಹಬ್ಬದ ದಿನದಲ್ಲಿ ಸಿನಿ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಸ್ಯಾಂಡಲ್ ವುಡ್ ನ ಆಪಲ್ ಬ್ಯೂಟಿ ಆಶಿಕಾ ರಂಗನಾಥ್ ಹಾಗೂ ಶರಣ್ ನಟಿಸಿರುವ ‘ಅವತಾರ ಪುರುಷ’ ಸಿನಿಮಾದ ‘ಹೀರೋ ಹೋಂಡಾ’ ವಿಡಿಯೋ ಸಾಂಗ್ ರಿಲೀಸ್ ಆಗಿದೆ.
ಅವತಾರ ಪುರುಷ ಸಿನಿಮಾ ತಂಡ ಅದ್ದೂರಿಯಾಗಿ ಅಯೋಜಿಸಿದ ಈ ಕಾರ್ಯಕ್ರಮದಲ್ಲಿ ನಟಿ ಆಶಿಕಾ ರಂಗನಾಥ್ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದು, ಆ ಹಾಡಿಗೆ ನಟ ಶರಣ್ ಜೊತೆ ಅದ್ಭುತವಾಗಿ ಸ್ಟೆಪ್ ಹಾಕಿದ್ದಾರೆ. ಅಶಿಕಾ ಅವರ ಲುಕ್ ಹಾಗೂ ಸಖತ್ ಆಗಿರುವ ಡ್ಯಾನ್ಸ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಅಶಿಕಾ ರಂಗನಾಥ್ ಹಾಗೂ ಶರಣ್ ಜೋಡಿ ರ್ಯಾಂಬೋ ಸಿನಿಮಾದ ಮೂಲಕ ಹಿಟ್ ಆಗಿತ್ತು.
ಅ ಸಿನಿಮಾದ ಉತ್ತರ ಕರ್ನಾಟಕ ಶೈಲಿಯ ಚುಟು ಚುಟು ಹಾಡು ಕೂಡ ಸಂಗೀತ ಪ್ರಿಯರ, ಪಡ್ಡೆ ಹೈಕ್ಳ ಫೆವರಿಟ್ ಹಾಡಾಗಿತ್ತು. ಇದೀಗ ಈ ಅವತಾರ ಪುರುಷ ಸಿನಿಮಾದ ‘ಹೀರೋ ಹೋಂಡಾ’ ಹಾಡು ಕೂಡ ಉತ್ತರ ಕರ್ನಾಟಕ ಶೈಲಿಯ ಹಾಡೇ ಆಗಿದೆ. ವಿಶೇಷ ಅಂದರೆ ಚುಟು ಚುಟು ಹಾಡಿಗೆ ಹಾಗೂ ಈ ಹೀರೋ ಹೋಂಡಾ ಹಾಡಿಗೆ ಅರ್ಜುನ್ ಜನ್ಯಾ ಅವರದ್ದೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಹೀಗಾಗಿ ಈ ಹಾಡು ಕೂಡ ಹಿಟ್ ಆಗುವುದರಲ್ಲಿ ಸಂದೇಹವಿಲ್ಲ.
ಅದರಲ್ಲೂ ಮುದ್ದು ಮೊಗದ ಚೆಲುವೆ ಆಶಿಕಾ ರಂಗನಾಥ್ ಅವರ ಅಭಿಮಾನಿಗಳಿಗೆ ಕಾರ್ಯಕ್ರಮ ದಲ್ಲಿ ಅಶಿಕಾ ಅವರ ಡ್ಯಾನ್ಸ್ ನೋಡಿ ಸಿನಿಮಾ ನೋಡಲು ಕಾತರರಾಗಿದ್ದಾರೆ.ಅಶಿಕಾ ರಂಗನಾಥ್ ಅವರು, 2016ರಲ್ಲಿ ಕ್ರೇಜಿ ಬಾಯ್ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಚೆಲುವೆ. ಚುಟು ಚುಟು ಚೆಲುವೆ, ಆಪಲ್ ಬ್ಯೂಟಿ ಏಂದು ಕರೆಯಲ್ಪಡುವ ಆಶಿಕಾ.ಸುಮಾರು 14 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ರೀಲ್ಸ್ ಮಾಡುತ್ತಾ, ಭಿನ್ನ ಭಿನ್ನ ಫೋಟೋ ಗಳನ್ನು ಅಪ್ಲೋಡ್ ಮಾಡುತ್ತಾ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮದಗಜ ಸಿನಿಮಾ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ, ಕೋಟಿಗೊಬ್ಬ 3 ಸಿನಿಮಾದಲ್ಲಿ ಕಿಚ್ಚಸುದೀಪ್ ಜೊತೆ ಐಟಂ ಸಾಂಗ್ ಗೆ ಸ್ಡೆಪ್ ಹಾಕಿರುವ ಆಶಿಕಾ ರಂಗನಾಥ್ ಅವರ ಹೊಸ ಸಿನಿಮಾ ಅವತಾರ ಪುರುಷದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಶಿಕಾ ರಂಗನಾಥ್ ಅವರ ಈ ಡ್ಯಾನ್ಸ್ ಸ್ಟೆಪ್ ನೋಡಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.