Free Ration: ಪ್ರಧಾನಿ ನರೇಂದ್ರ ಮೋದಿ (Narendra Modi) ಭಾರತದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ದೇಶದಲ್ಲಿ ಜನಸಾಮಾನ್ಯರಿಗೆ ಉಚಿತವಾಗಿ ರೇಷನ್ (Free Ration For People) ನೀಡಲು ಮುಂದಾಗಿದ್ದಾರೆ. ನರೇಂದ್ರ ಮೋದಿ ಸರ್ಕಾರದಿಂದ ಜನರಿಗೆ ಹಲವಾರು ಸೌಲಭ್ಯಗಳು ಸಿಕ್ಕಿತು. ಇದೀಗ ಮೋದಿ ಹೊಸದಾಗಿ ಯೋಜನೆಯನ್ನು ಕೈಗೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹೊಸ ಯೋಜನೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 81 .3 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸುವ ಸಮಯವನ್ನು ಇನ್ನು 1 ವರ್ಷಕ್ಕೆ ವಿಸ್ತರಿಸಿದೆ.
ಶುಕ್ರವಾರ ಪ್ರಧಾನಿ ಅದ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಬಡವರಿಗೆ ಉಚಿತ ಪಡಿತರ ನೀಡಲು ಸುಮಾರು 2 ಲಕ್ಷ ಕೋಟಿ ರೂ. ವೆಚ್ಚವಾಗಲಿದ್ದು, ಇದು ಸರ್ಕಾರಕ್ಕೆ ಹೆಚ್ಚುವರಿ ಹೊರೆಯಾಗಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ (Piyush Goyal) ಹೇಳಿದ್ದಾರೆ.

ಶುಕ್ರವಾರ ಮಹತ್ವದ ನಿರ್ಧಾರ ಕೈಗೊಂಡಿರುವ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ 81.35 ಕೋಟಿ ಬಡವರಿಗೆ 1 ವರ್ಷಕ್ಕೆ ಉಚಿತ ಪಡಿತರ ನೀಡಲು ನಿರ್ಧರಿಸಿದೆ.
ಪ್ರಧಾನಿ ಮೋದಿ ಉಚಿತ ರೇಷನ್ ಯೋಜನೆ
ಕೇಂದ್ರ ಸಚಿವ ಸಂಪುಟದ ಮಹತ್ವದ ಸಭೆಯಲ್ಲಿ 81.3 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ವಿತರಿಸಲು ಖರ್ಚು ಮಾಡಿದ 2 ಲಕ್ಷ ಕೋಟಿ ರೂ. businessleague ಆರ್ಥಿಕ ಹೊರೆಯನ್ನು ಕೇಂದ್ರ ಸರ್ಕಾರ ಭರಿಸಲು ನಿರ್ಧರಿಸಿದೆ.

ಡಿಸೆಂಬರ್ 31ರಂದು ಮುಕ್ತಾಯಗೊಳ್ಳಲಿರುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (Pradhan Mantri Garib Kalyana Yojana) ಗಡುವನ್ನು ವಿಸ್ತರಿಸಲು ಸರ್ಕಾರ ನಿರಾಕರಿಸಿದೆ. ನರೇಂದ್ರ ಮೋದಿ ಈ ಯೋಜನೆಯಡಿಯಲ್ಲಿ ಇದುವರೆಗೆ ಸರ್ಕಾರ 81 .35 ಕೋಟಿ ಜನರಿಗೆ ಉಚಿತ ಪಡಿತರವನ್ನು ನೀಡುತ್ತಿದೆ.
ಈ ಯೋಜನೆಯಡಿ ಲಭ್ಯವಿರುವ ಧಾನ್ಯವು NFSA ಅಡಿಯಲ್ಲಿ ಲಭ್ಯವಿರುವ ಸಬ್ಸಿಡಿ ಧಾನ್ಯಕ್ಕಿಂತ ಭಿನ್ನವಾಗಿದೆ. ಈ ಹಿಂದೆ ಏನ್ಎಫ್ ಎಸ್ ಎ ಅಡಿಯಲ್ಲಿ ಬಡವರು ಪಡಿತರ ಅಂಗಡಿಯಿಂದ ಕೆಜಿಗೆ 2 ರಿಂದ 3 ರೂ. ಗೆ ಖರೀದಿಸುತ್ತದ್ದ ಆಹಾರ ಧಾನ್ಯಗಳನ್ನು ಈಗ 1 ವರ್ಷಕ್ಕೆ ಉಚಿತವಾಗಿ ನೀಡಲಾಗಿದೆ.

NFSA ಅಡಿಯಲ್ಲಿ ಬಡವರಿಗೆ ಕೆಜಿಗೆ 3 ರೂ.ಗೆ ಅಕ್ಕಿ ಮತ್ತು 2 ರೂ. ಗೆ ಗೋಧಿ ಸಿಗುತ್ತದೆ. ಕೇಂದ್ರ ಸರ್ಕಾರದ ಈ ನಿರ್ಧಾರ ಬಡವರಿಗೆ ಹೊಸ ವರ್ಷದ ಉಡುಗೊರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಈ ಯೋಜನೆಯಡಿ ಈಗ ಫಲಾನುಭವಿಗಳು ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ.