ವಿವಾಹಿತ ಮಹಿಳೆಯ ಗಂಡ ಬಿಟ್ಟು ಏಳು ವರ್ಷ ಆಯ್ತು,ಆಸ್ತಿ ಮನೆ ಬಂಗಾರ ನೀಡುತ್ತೇನೆ ಮದುವೆಯಾಗುವಿರ

“ಮನೆಯಲ್ಲಿ ಇಲಿ, ಆಚೆ ಹುಲಿ” ಅನ್ನೋ ಗಾದೆ ಮಾತು, ಅಥವಾ ಹೇಳಿಕೆಯನ್ನು ಬಹಳವಾಗಿ ಕೇಳಿದ್ದೇವೆ ಹಾಗು ಇದೆ ವಿಷಯನ್ನು ಆಧಾರಿತವಾಗಿ ಮಾಡಿರುವ ಎಷ್ಟೋ ಸಿನಿಮಾಗಳನ್ನು ನೋಡಿ ನಗುತ್ತಾ ಬಂದಿದ್ದೇವೆ.

ಆದರೆ, ಈ ವಿಚಾರವನ್ನು ಧೀರ್ಘವಾಗಿ ಪರಿಗಣಿಸುವವರು ಬಹಳ ಕಡಿಮೆ, ಎಂದು ಹೇಳಿದರೆ ತಪ್ಪಾಗಲಾರದು.

ಹೆಣ್ಣು ಮಕ್ಕಳ ಕಣ್ಣೀರಿಗೆ ಇರುವ ಬೆಲೆ, ಗಂಡು ಮಕ್ಕಳ ನೋವು ಸಂತಾಪಕ್ಕೆ ಇಲ್ಲದಾಗಿದೆ. ಗಂಡು ಮಕ್ಕಳ್ಳು ಅತ್ತರೆ ಅಥವಾ, ಮಾನಸಿಕ ನೋವನ್ನು ಹಂಚಿಕೊಂಡರೇ ಅವರನ್ನು “ಬೇರೆ ಬೇರೆ ಹೆಸರಿನಿಂದ” ಅಣಕಿಸುವವರು ಸಹ ನಮ್ಮ ಸಮಾಜದಲ್ಲಿ ಬಹಳವಾಗಿ ಇದ್ದಾರೆ (ಉದಾಹರಣೆಗೆ: ಸಂಗಣ್ಣ, ಸಂಗಾಬುಲ್ಲಾ ಇತ್ಯಾದಿ)

ಖಂಡಿತವಾಗಿಯೂ ಎಲ್ಲರೂ ಒಂದೇ ಎಂದು ಹೇಳುತ್ತಿಲ್ಲ..

ಗಂಡು ಮಕ್ಕಳು ಅಳುವುದೇ ತಪ್ಪು ಎಂದು ಹೇಳಿಕೊಡುವ ಸಮಾಜ ನಮ್ಮದು, ಹಾಗು ಅವರಿಗೂ ಮನಸ್ಸಿದೆ, ಭಾವನೆಗಳಿವೆ ಎನ್ನುವುದನ್ನು ಕೆಲವೊಮ್ಮೆ ಮರೆಯುತ್ತಾ ಬಂದು, ಈಗ ಅದರೆಡೆಗೆ ನಾವು ಗಮನ ಕೊಡಬೇಕು ಎನ್ನುವುದನ್ನೇ ಮರೆತುಬಿಟ್ಟಿದ್ದೇವೆ.

ಗಂಡು ಹೆಣ್ಣಿನ ನಡುವೆ ಸಮಾನತೆಗೆ ಹೋರಾಡುತ್ತ, ಎಲ್ಲೋ ಒಂದೆಡೆ ಇದರ ಅರ್ಥವನ್ನೇ ಬದಲಿಸಿ ಬಿಟ್ಟಿದ್ದೆವೋ ಏನೋ ಎಂದು ಅನಿಸಿದ್ದು ಸಹ ಉಂಟು.

ಮಾನಸಿಕ ಅಥವಾ ಶಾರೀರಿಕ ನೋವು ಹೆಣ್ಣಿಗಾದರು, ಗಂಡಿಗಾದರು ಅದು ಒಂದೇ ಪರಿಣಾಮವನ್ನು ಬೀರುತ್ತದೆ ಎನ್ನುವುದು ಎಷ್ಟು ಸತ್ಯವೋ;

ಒಂದು ಹೆಣ್ಣಿನ ಮೈ ಮೇಲೆ ಕೈ ಮಾಡಿದ ಗಂಡಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಹೇಗೆ ಹೋರಾಡುತ್ತೇವೆಯೋ;

ಹಾಗೆಯೆ ಗಂಡಿನ ಶೋಷಣೆಗೂ ಸಮನಾದ ಪ್ರಾಮುಖ್ಯತೆ ಕೊಡಬೇಕೆಂಬುದು ನನ್ನ ಅಭಿಪ್ರಾಯ.

ಹಾಗಾಗಿ, ಹೆಂಡತಿ ಗಂಡನನ್ನು ಹೊಡೆದರೆ ಅಥವಾ ಯಾವುದೇ ರೀತಿಯ ಶೋಷಣೆಗೆ ಒಳಪಡಿಸಿದರೆ, ಅವರು ಅದನ್ನು ಹಂಚಿಕೊಂಡರೆ ಅವಮಾನವಾಗುವುದೆಂದು, ಸುಮ್ಮನಿದ್ದು ಸಹಿಸಿಕೊಳ್ಳದೆ; ಅವರ ಹತ್ತಿರದವರೊಡನೆ ಈ ವಿಷಯವನ್ನು ಪ್ರಸ್ತಾಪಿಸಿ – ಪ್ರೊಫೆಷನಲ್ ಸಹಾಯ ಪಡೆಯಬೇಕೆಂದು ಹೇಳಲಿಚ್ಚಿಸುತ್ತೇನೆ.

ಹಾಗು ಹಂಚಿಕೊಳ್ಳಲ್ಲು ಅಂಜುವವರು, ಹೆದರದೆ ಇದರ ವಿಚಾರವಾಗಿ ಮನ ಬಿಚ್ಚಿ ಮಾತಾಡಿ, ಹಾಗು ಸಹಾಯವನ್ನು ಕೇಳುವುದು ತಪ್ಪಲ್ಲ ಎಂದು ಸಹ ಹೇಳಬಯಸುತ್ತೇನೆ.

You might also like

Comments are closed.