50000-can-be-earned-per-month-with-new-scheme-implemented-for-youth

ಯುವಕರಿಗಾಗಿ ಹೊಸ ಯೋಜನೆ ಜಾರಿಗೆ,ತಿಂಗಳಿಗೆ 50000 ಸಂಪಾಧಿಸಬಹುದು.

Free Govt Schemes/ಸರ್ಕಾರಿ ಉಚಿತ ಯೋಜನೆಗಳು

PM Yuva 2.0 Yojana: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಅದೆಷ್ಟೋ ಜನರು ವಿದ್ಯಾವಂತರಾಗಿದ್ದರು ಕೂಡ ಉದ್ಯೋಗ ಸಿಗದೇ ಬಹಳ ಕಷ್ಟ ಪಡುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಯುವ ಬರಹಗಾರರಿಗೆ ಸರಕಾರ ಬಂಪರ್ ಆಫರ್ ನೀಡಿದೆ.

ಯುವಕರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ
ಬರವಣಿಗೆಯಲ್ಲಿ ಆಸಕ್ತಿ ಹೊಂದಿದದ ಯುವಕರಿಗೆ ಕೇಂದ್ರ ಸರ್ಕಾರ ಬಂಪರ್ ಆಫರ್ ನೀಡಿದೆ. ಪಿಎಂ ಯುವ 2 .0 ಯೋಜನೆಗೆ ಚಾನಲ್ ನೀಡಲಾಗಿದೆ. ಈ ಮೂಲಕ ಬರವಣಿಗೆಯಲ್ಲಿ ವಿಶೇಷ ಆಸಕ್ತಿ ಹೊಂದಿದವರು ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬಹುದು.

PM Yuva 2.0 Yojana
Image Source: India Today

PM Yuva 2 .0 Yojana
ಕೇಂದ್ರ ಸರಕಾರ ಯುವಕರಿಗಾಗಿ ಪಿಎಂ ಯುವ 2 .0 ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ಯುವ ಬರಹಗಾರರಿಗೆ ವಿವಿಧ ವಿಷಯಗಳ ಕುರಿತು ಬರೆಯಲು ಅವಕಾಶ ಕಲ್ಪಿಸುವುದರ ಜೊತೆಗೆ ಆಕರ್ಷಕ ಸಂಬಳ ನೀಡಲಿದೆ.

ಮಾಸಿಕ 50 ಸಾವಿರ ವೇತನ
ಪಿಎಂ ಯುವ 2 .0 ಯೋಜನೆ ಅಡಿಯಲ್ಲಿ ಆಯ್ಕೆಯಾದ ಬರಹಗಾರರಿಗೆ ಮಾಸಿಕ 50 ಸಾವಿರ ವಿದ್ಯಾರ್ಥಿ ವೇತನ ನೀಡಲಾಗುವುದು. ಅಂದರೆ, 30 ವರ್ಷ ಒಳಗಿನ ಯುವಕರು ಈ ಯೋಜನೆಯಲ್ಲಿ ಭಾಗವಹಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜನವರಿ 15 ಕೊನೆಯ ದಿನಾಂಕವಾಗಿದೆ.

50000 can be earned per month with new scheme implemented for youth.
Image Source: India Today

ಅಖಿಲ ಭಾರತ ಸ್ಪರ್ಧೆ
ಅಖಿಲ ಭಾರತ ಸ್ಪರ್ಧೆಯ ಮೂಲಕ 75 ಬರಹಗಾರರು ತಿಂಗಳಿಗೆ 50,000 ಪಡೆಯುತ್ತಾರೆ. ಒಟ್ಟು 75 ಬರಹಗಾರರನ್ನು ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ (National Book Of  India) ಆಯ್ಕೆ ಮಾಡುತ್ತದೆ. ಆಯ್ಕೆಯಾದ ಪ್ರತಿ ಯುವ ಬರಹಗಾರರಿಗೆ ಆರು ತಿಂಗಳ ಅವಧಿಗೆ ತಿಂಗಳಿಗೆ 50,000 ರೂಗಳಂತೆ ಒತ್ತಿ 3 ಲಕ್ಷ ರೂಗಳನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜನವರಿ 15 ಕೊನೆಯ ದಿನಾಂಕವಾಗಿದೆ. ಇನ್ನು ಅರ್ಜಿ ಸಲ್ಲಿಸುವ ವಿಧಾನಗಳು ಈ ಕೆಳಗಿವೆ.
* ಮೊದಲು ನೀವು http://innovateindia.mygov.in/yuva/ ಅಧಿಕೃತ ವೆಬ್ಸೈಟ್ ಗೆ ಹೋಗಬೇಕಾಗುತ್ತದೆ.
* ಅಲ್ಲಿ ಕೆಳಗೆ ಎಡಭಾಗದಲ್ಲಿರುವ ‘ಸಲ್ಲಿಸುವ ಇಲ್ಲಿ’ ಕ್ಲಿಕ್ ಮಡುವ ಮೂಲಕ ಅರ್ಜಿ ಸಲ್ಲಿಸಬಹುದು.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...