5

ಚಾಣಿಕ್ಯ ಪ್ರಕಾರ ಪ್ರತಿ ಹೆಂಡತಿ ತನ್ನ ಗಂಡನಿಂದ ಈ 5 ವಿಚಾರಗಳನ್ನು ಮುಚ್ಚಿಡ್ತಾಳಂತೆ

Entertainment/ಮನರಂಜನೆ Girls Matter/ಹೆಣ್ಣಿನ ವಿಷಯ

ಸ್ನೇಹಿತರೆ ಗಂಡ ಹಾಗೂ ಹೆಂಡತಿಯ ಸಂಬಂಧ ಎನ್ನುವುದು ಏಳೇಳು ಜನುಮದ ಪವಿತ್ರವಾದ ಸಂಬಂಧ ಎಂಬುದಾಗಿ ಪುರಾಣ ಶಾಸ್ತ್ರಗಳಲ್ಲಿ ಉಲ್ಲೇಖಿತವಾಗಿದೆ. ಈ ಪವಿತ್ರವಾದ ಸಂಬಂಧದಲ್ಲಿ ಪ್ರೀತಿ ಹಾಗೂ ನಂಬಿಕೆ ಎನ್ನುವುದು ಪ್ರಮುಖವಾಗಿ ಬೇಕಾಗಿರುವಂತಹ ಅಂಶಗಳಾಗಿವೆ. ಆದರೂ ಕೂಡ ಸಂಸಾರದಲ್ಲಿ ಗಂಡನಿಂದ ಹೆಂಡತಿ ಕೆಲವೊಂದು ವಿಚಾರಗಳನ್ನು ಮುಚ್ಚಿಟ್ಟುಕೊಳ್ಳುತ್ತಾಳೆ. ಚಾಣಕ್ಯ ಶಾಸ್ತ್ರದ ಪ್ರಕಾರ ಗಂಡನಿಂದ ಹೆಂಡತಿ ಮುಚಿಟ್ಟುಕೊಳ್ಳುವ ಆ ಐದು ರಹಸ್ಯಮಯ ವಿಚಾರಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಎಲ್ಲಾ ಮಹಿಳೆಯರು ಅಲ್ಲ ಆದರೂ ಕೂಡ ಬಹುತೇಕ ಮಹಿಳೆಯರು ಮದುವೆಗೂ ಮುನ್ನ ಬೇರೆಯವರ ಮೇಲೆ ಮನಸ್ಸನ್ನು ಹೊಂದಿರುತ್ತಾರೆ ಆದರೆ ಮದುವೆಯಾದ ನಂತರ ಗಂಡನಿಗೆ ಅದರ ಬಗ್ಗೆ ಹೇಳಲು ಹೋಗುವುದಿಲ್ಲ. ಇನ್ನೊಂದು ವಿಚಾರವೇನೆಂದರೆ ಗಂಡ ಹಾಗು ಹೆಂಡತಿ ಇಬ್ಬರೂ ಕೂಡ ಸಂಸಾರದಲ್ಲಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕೆಲವೊಮ್ಮೆ ನಿರ್ಧಾರಗಳನ್ನು ಗಂಡ ತೆಗೆದುಕೊಳ್ಳುತ್ತಾನೆ ಅದು ತನಗೆ ಇಷ್ಟ ಇಲ್ಲದಿದ್ದರೂ ಕೂಡ ಗಂಡನ ಎದುರು ಆ ನಿರ್ಧಾರ ನನಗೆ ಸಂತೋಷವನ್ನು ತಂದಿದೆ ಎಂಬ ರೀತಿಯಲ್ಲಿ ನಟಿಸಬೇಕಾಗುತ್ತದೆ.

ಹಲವಾರು ಸಂದರ್ಭದಲ್ಲಿ ತನ್ನ ಗಂಡನ ಜೊತೆಗೆ ಪ್ರಣಯ ಪ್ರಸಂಗವನ್ನು ಹೊಂದಬೇಕು ಎನ್ನುವ ಆಸೆಯನ್ನು ಹೆಂಡತಿಯರು ಹೊಂದಿರುತ್ತಾರೆ ಆದರೆ ಕೆಲವೊಮ್ಮೆ ಗಂಡ ಕೆಲಸದಿಂದ ದಣಿದು ಬಂದಾಗ ಆತನನ್ನು ನೋಡಿ ಅದನ್ನು ಕೇಳುವ ಧೈರ್ಯ ಅವರಲ್ಲಿ ಇರುವುದಿಲ್ಲ ಹೀಗಾಗಿ ಅದನ್ನು ಮುಚ್ಚಿಟ್ಟುಕೊಳ್ಳುತ್ತಾರೆ.

ಇದೊಂದು ವಿಚಾರ ಖಂಡಿತವಾಗಿ ಎಲ್ಲಾ ಮಹಿಳೆಯರು ಕೂಡ ಮುಚ್ಚಿಟ್ಟುಕೊಳ್ಳುತ್ತಾರೆ ಅದೇನೆಂದರೆ ಸಾಮಾನ್ಯವಾಗಿ ಮಹಿಳೆಯರು ಚಿಕ್ಕ ಪ್ರಮಾಣದಲ್ಲಾದರೂ ಕೂಡ ಮುಂದೆ ತಮಗೆ ಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಹಣವನ್ನು ಉಳಿತಾಯ ಮಾಡಿಟ್ಟಿರುತ್ತಾರೆ. ಇದನ್ನು ಗಂಡನ ಬಳಿ ಹೇಳುವುದಕ್ಕೆ ಹೋಗುವುದಿಲ್ಲ ಆದರೆ ಕಷ್ಟದ ಸಮಯ ಬಂದಾಗ ಈ ಹಣದ ಮೂಲಕ ಗಂಡನ ಕಷ್ಟಕ್ಕೆ ಬೆಂಬಲವಾಗಿ ನಿಲ್ಲುತ್ತಾರೆ.

ಇನ್ನು ಇದೊಂದು ವಿಚಾರ ಕೇವಲ ಹೆಂಡತಿಯರು ಮಾತ್ರವಲ್ಲದೆ ಗಂಡಂದಿರು ಕೂಡ ಪ್ರಮುಖವಾಗಿ ಗಮನ ವಹಿಸಬೇಕು. ಹೆಂಡತಿಯರು ಹಲವಾರು ವೈಯಕ್ತಿಕ ದೈಹಿಕ ಸಮಸ್ಯೆಗಳನ್ನು ಹೊಂದಿರುತ್ತಾರೆ ಆದರೆ ಅದನ್ನು ಗಂಡನ ಬಳಿ ಹೇಳಲು ಅವರು ಹೋಗುವುದಿಲ್ಲ ಬಹುತೇಕ ಮರೆ ಮಾಚಿಕೊಳ್ಳುತ್ತಾರೆ. ಗಂಡಂದಿರಾಗಿ ಅದರ ಕುರಿತಂತೆ ತಿಳಿದು ಅವರಿಗೆ ಆ ಸಂದರ್ಭದಲ್ಲಿ ನೆರವಾಗುವುದು ನಿಮ್ಮ ಕರ್ತವ್ಯವಾಗಿದೆ. ಈ ಎಲ್ಲಾ ವಿಚಾರಗಳನ್ನು ಸಂಸಾರದಲ್ಲಿ ಹೆಂಡತಿಯರು ಗಂಡನಿಂದ ಮುಚ್ಚಿಟ್ಟುಕೊಳ್ಳುವ ವಿಚಾರವಾಗಿದೆ.

]


ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...