ಮೂವತ್ತೈದು ವರ್ಷದ ಆಂಟಿಯೊಬ್ಬಳು ಇಪತ್ತೈದು ವರ್ಷದ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ ಘಟನೆ ಬೆಳಕಿಗೆ ಬಂದಿದೆ. ಹಾಗೂ ಪತ್ನಿಯ ಅನೈತಿಕ ಸಂಬಂಧಕ್ಕೆ ಗಂಡ ಕೊಲೆಗೀಡಾಗಿದ್ದಾನೆ.
ಪರಪುರುಷನ ತೆಕ್ಕೆಗೆ ಜಾರಿದ್ದ ಆಂಟಿಯೊಬ್ಬಳು ತನ್ನ ಲವರ್ ಜೊತೆ ಸೇರಿ ಗಂಡನ ಕಥೆ ಫಿನಿಷ್ ಮಾಡಿದ್ದಾಳೆ.ಯಾರಿಗೂ ತನ್ನ ಕಾಮಕಾಂಡ ಹಾಗೂ ಅಪರಾಧ ಕೃತ್ಯ ಗೊತ್ತಾಗದಂತೆ ಪತಿಯ ಶವವನ್ನು ಕಾಲೇಜೊಂದರ ಮುಂಭಾಗದಲ್ಲಿ ಎಸೆದು ಹೋಗಿದ್ದರು.
ಗಂಡನಿಗೆ ಕಾಣೆಯಾಗಿದ್ದು ಆ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಅಂತ ಪತ್ನಿ ಸರೋಜಾದೇವಿ ತಿಳಿಸಿದ್ದಳು. ಆದರೆ ಕೊಲೆಯಾದ ಗಂಡ ತಂಗವೇಲು ಸಂಬಂಧಿಕರು ಮಾತ್ರ ಕೊಲೆ ಪ್ರಕರಣ ದಾಖಲು ಮಾಡಿದ್ರು.ತನಿಖೆ ಕೈಗೊಂಡ ಪೊಲೀಸರು ಗಂಡನನ್ನು ಕೊಲೆ ಮಾಡಿರೋ ಐನಾಯಿ ಆಂಟಿಯನ್ನು ಬಂಧನ ಮಾಡಿದ್ದಾರೆ.ಆಂಟಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ತಿರುಮಲ ಹಾಗೂ ಕೊಲೆಗೆ ಸಹಕರಿಸಿದ ಹುಲಿಕಾಳ್ ಪರಾರಿಯಾಗಿದ್ದಾರೆ.
24ರ ಯುವಕನೊಂದಿಗೆ 30ರ ಆಂಟಿ ಲವ್ವಿ-ಡವ್ವಿ.. ಅಡ್ಡಿಯಾದ ಪತಿಯ ಕುತ್ತಿಗೆಗೆ ಸೀರೆ ಬಿಗಿದು ಕೊಲೆ!
ವಿಜಯಪುರ: ಮನೆಯಲ್ಲಿ ಅನುಮಾನಾಸ್ಪದವಾಗಿ ಗಂಡನ ಶವ ಪತ್ತೆಯಾದ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ. ಅನೈತಿಕ ಸಂಬಂಧಕ್ಕಾಗಿ ಪ್ರಿಯಕರನೊಂದಿಗೆ ಸೇರಿ ಹೆಂಡತಿ ಗಂಡನನ್ನು ಕತ್ತು ಹಿಸುಕಿ ಕೊಲೆ ಮಾಡಿರೋದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಜೂನ್ 8 ರಂದು ವಿಜಯಪುರದ ಸಾಯಿ ಪಾರ್ಕ್ ಏಕತಾನಗರದ ಮನೆಯೊಂದರಲ್ಲಿ ಪ್ರಕಾಶ್ ಹಳ್ಳಿ (41) ಎಂಬಾತನ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ಪತ್ತೆಯಾಗಿತ್ತು. ಇದು ಕೊಲೆ ಅನ್ನೋ ಸುಳಿವು ಹಿನ್ನೆಲೆ ಪೊಲೀಸರು, ಮೃತನ ಪತ್ನಿ ರಾಜೇಶ್ವರಿಯನ್ನು ವಶಕ್ಕೆ ಪಡೆದುಕೊಂಡಿದ್ದರು.
ವಿಚಾರಣೆ ನಡೆಸಿದ ಪೊಲೀಸರಿಗೆ ಶಾಕ್ ಆಗಿತ್ತು. ತನಿಖೆ ವೇಳೆ ಪ್ರಿಯಕರನಿಗಾಗಿ ಗಂಡನನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದನ್ನು ಬಾಯ್ಬಿಟ್ಟಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಕೇವಲ ನಾಲ್ಕೇ ದಿನದಲ್ಲಿ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಿಯಕರನೊಂದಿಗೆ ಸೇರಿ ಬೆಡ್ ರೂಮ್ನಲ್ಲಿ ಗಂಡನಿಗೆ ಸೀರೆಯಿಂದ ಕುತ್ತಿಗೆ ಹಿಚುಕಿ ಕೊಲೆ ಮಾಡಿರೋದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪತ್ನಿ ರಾಜೇಶ್ವರಿ ಪ್ರಕಾಶ್ ಹಳ್ಳಿ (30) ಹಾಗೂ ಆಕೆಯ ಪ್ರಿಯಕರ ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ರವಿ ಕಾಂತಪ್ಪ ತಳವಾರ (24), ಈ ಕೃತ್ಯಕ್ಕೆ ಸಹಕರಿಸಿದ ಗುರಪ್ಪ ಬಸಲಿಂಗಪ್ಪ ದಳವಾಯಿ (30) ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ.
ಇನ್ನು ಮೃತನ ಪತ್ನಿ ರಾಜೇಶ್ವರಿ ಪತಿಯ ಸಾವು ಸಹಜ ಎಂದು ಬಿಂಬಿಸಲು ಪ್ರಿಯಕರನೊಂದಿಗೆ ಪ್ಲಾನ್ ರೂಪಿಸಿದ್ದಳು. ಆದರೆ ಕೃತ್ಯ ನಡೆದ ಸಂದರ್ಭದಲ್ಲಿ ಗಂಡ-ಹೆಂಡತಿ ಇಬ್ಬರು ಮಾತ್ರ ಮನೆಯಲ್ಲಿದ್ದರು. ಇದರಿಂದ ಅನುಮಾನಗೊಂಡ ಮೃತ ಪ್ರಕಾಶ್ ತಂದೆ ಜೂನ್ 10 ರಂದು ಘಟನೆ ನಡೆದ ವ್ಯಾಪ್ತಿಯ ಜಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ಪಡೆದ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್ ಡಿ ಆನಂದಕುಮಾರ್ ವಿಜಯಪುರ ಉಪವಿಭಾಗದ ಡಿವೈಎಸ್ಪಿ ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ ತನಿಖಾ ತಂಡವೊಂದನ್ನ ರಚಿಸಿ ಕಾರ್ಯಪ್ರವೃತ್ತರಾಗಿದ್ದರು. ಘಟನೆ ನಡೆದ ಕೇವಲ ನಾಲ್ಕೇ ದಿನದಲ್ಲಿ ಪ್ರಕರಣವನ್ನ ಬೇಧಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಯಾದ ಪ್ರಕಾಶನ ಪತ್ನಿ ರಾಜೇಶ್ವರಿ, ರವಿ ಎಂಬ ಯುವಕನ ಜೊತೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದಳಂತೆ. ಇದನ್ನು ಅರಿತ ಗಂಡ ಪ್ರಕಾಶ ಆಕ್ಷೇಪ ವ್ಯಕ್ತಪಡಿಸಿ, ಮನೆಯ ಹಿರಿಯರ ಗಮನಕ್ಕೂ ತಂದಿದ್ದರಂತೆ. ಹಿರಿಯರೆಲ್ಲ ಸೇರಿ ನ್ಯಾಯ ಪಂಚಾಯತಿ ಸಹ ಮಾಡಿ ಇದನ್ನೆಲ್ಲ ಕೈಬಿಟ್ಟು, ಗಂಡನೊಂದಿಗೆ ಹೊಂದಿಕೊಂಡು ಹೋಗುವಂತೆ ಬುದ್ಧಿವಾದ ಹೇಳಿದ್ದರಂತೆ.
ಆದರೂ ರಾಜೇಶ್ವರಿ ಅನೈತಿಕ ಸಂಬಂಧ ಮುಂದುವರಿಸಿದ್ದಳಂತೆ. ಆದರೆ ಇದಕ್ಕೆ ಗಂಡ ಪ್ರಕಾಶ ಅಡ್ಡಿಪಡಿಸುತ್ತಿದ್ದ ಕಾರಣ ಬೇಸತ್ತ ರಾಜೇಶ್ವರಿ ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಮುಗಿಸುವ ಪ್ಲಾನ್ ಮಾಡಿ ಗಂಡನನ್ನು ಯಮಲೋಕಕ್ಕೆ ಕಳುಹಿಸಿದ್ದಾಳೆ. ಇನ್ನು ಪೊಲೀಸರು ಕೊಲೆ ಕೃತ್ಯಕ್ಕೆ ಬಳಸಲಾದ ಪಾಲಿಸ್ಟರ್ ಸೀರೆ, ಎರಡು ಮೊಬೈಲ್ ಹ್ಯಾಂಡ್ ಸೆಟ್ ಹಾಗೂ ಅವರಿಂದ ಎಟಿಎಂ ಕಾರ್ಡ್ ಸೇರಿದಂತೆ ಇನ್ನಿತರ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ.