185-KG-WEIGHT

ಬರೋಬ್ಬರಿ 185 ಕೆಜಿ ತೂಕದ ಗುಂಡುಕಲ್ಲನ್ನು ಎರಡು ಬಾರಿ ಎತ್ತಿದ ಭೂಪ, ಮುಂದೇನಾಯ್ತು ಗೊತ್ತಾ? ಅಬ್ಬಾ ವಿಡಿಯೋ ನೋಡಿ!!

Today News / ಕನ್ನಡ ಸುದ್ದಿಗಳು

ವಿಶ್ವದಲ್ಲಿಯೇ ಭಾರತೀಯ ಕಲೆಗೆ ಸಾಕಷ್ಟು ಮಹತ್ವ ಇದೆ. ಇಂದು ವಿದೇಶಿಗರು ಕೂಡ ಭಾರತೀಯ ಕಲೆಯ ಸಂಪ್ರದಾಯಗಳಿಗೆ ಮಾರು ಹೋಗುತ್ತಿದ್ದಾರೆ. ಪುರಾತನ ಕಾಲದಿಂದ ಈಗಿನ ವರೆಗೂ ನಾವು ನಮ್ಮದೇ ಆದ ವಿಶೇಷ ಶೈಲಿಯ ಕ್ರೀಡೆಗಳಿಗೆ ಕಲೆಗಳಿಗೆ ಹೆಚ್ಚು ಹೊತ್ತು ಕೊಡುತ್ತಾ ಬಂದಿದ್ದೇವೆ. ಆದರೆ ಆಧುನಿಕರಣದ ಹಿನ್ನೆಲೆಯಲ್ಲಿ ಇಂದು ಸಾಕಷ್ಟು ಕಲೆಗಳು ಕಣ್ಣರೆಯಾಗುತ್ತಿವೆ. ಹೌದು ಮೊದಲು ನಮ್ಮಲ್ಲಿ ಯಾವುದೇ ಹಬ್ಬ ಹರಿದಿನಗಳಾಗಲಿ ಅಥವಾ ಯಾವುದೇ ದೇವರ ಪೂಜೆಯ ಸಮಯವಾಗಲಿ.

ಎಲ್ಲದಕ್ಕೂ ಒಂದೊಂದು ಅರ್ಥ ಇರುತ್ತಿತ್ತು. ಅಲ್ಲದೆ ಬಹಳ ವಿಜೃಂಭಣೆಯಿಂದ ಈ ಆಚರಣೆಗಳನ್ನು ಮಾಡಲಾಗುತ್ತಿತ್ತು. ಜೊತೆಗೆ ಆಯಾ ಸಂದರ್ಭದಲ್ಲಿ ಕ್ರೀಡೆ ಹಾಗೂ ಇತರ ಕಲೆಗಳ ಪ್ರದರ್ಶನ ಕೂಡ ಮಾಡಲಾಗುತ್ತಿತ್ತು. ಇವೆಲ್ಲವೂ ಸಂಪ್ರದಾಯದ ಒಂದು ಭಾಗ. ಆದರೆ ಈ ಎಲ್ಲಾ ಕಲೆ ಸಂಸ್ಕೃತಿಯು ಇಂದು ಬದಲಾಗುತ್ತಿದೆ ನಮ್ಮ ಅನುಕೂಲಕ್ಕೆ ತಕ್ಕ ಹಾಗೆ ಅವುಗಳನ್ನ ಬಳಸಿಕೊಳ್ಳುತ್ತಿದ್ದೇವೆ.

ರಾಜ್ಯದಲ್ಲಿಯೇ ತೆಗೆದುಕೊಂಡರೆ ಆಯಾ ಭಾಗದಲ್ಲಿ ಆಯಾ ಸಮುದಾಯಕ್ಕೆ ತಕ್ಕ ಹಾಗೆ ವಿಶೇಷ ಆಚರಣೆಗಳು ಇರುತ್ತಿತ್ತು. ಹಲವು ಗಂಡು ಕಲೆಗಳಾದ ಮಲ್ಲಕಂಬ, ಕರಗ, ಡೊಳ್ಳು ಕುಣಿತ, ಗುಂಡುಕಲ್ಲು ಎತ್ತುವುದು, ಸುಗ್ಗಿ ಕುಣಿತ, ಕತ್ತಿವರಸೆ, ಕುಸ್ತಿ, ಮಡಿಕೆ ಒಡೆಯುವುದು, ಹೀಗೆ ಹಲವಾರು ಗ್ರಾಮೀಣ ಕ್ರೀಡೆಗಳನ್ನು ನಡೆಸಲಾಗುತ್ತಿತ್ತು. ಈಗಿನ ಹಾಗೆ ಹಿಂದೆ ಮನೋರಂಜನೆಗಾಗಿ ಯಾವ ಸೋಶಿಯಲ್ ಮೀಡಿಯಾಗಳು ಇರಲಿಲ್ಲ ಟಿವಿಯು ಇರಲಿಲ್ಲ.

ಹಾಗಾಗಿ ಆಗಾಗ ಊರಿನವರೆಲ್ಲ ಒಟ್ಟಾಗಿ ಸೇರಿ ನಡೆಸುವಂತಹ ಇಂತಹ ಕ್ರೀಡೆ ಅಥವಾ ಇತರ ಆಚರಣೆಗಳೆ ಅವರ ಮನೋರಂಜನೆಯ ವಿಷಯಗಳಾಗಿದ್ದವು. ಆದರೆ ಇಂದು ಇವುಗಳನ್ನೆಲ್ಲ ನಡೆಸಲು ನಮಗೆ ಸಮಯವೇ ಇಲ್ಲ. ಆದರೂ ರಾಜ್ಯದ ಕೆಲವು ಭಾಗಗಳಲ್ಲಿ ಕೆಲವು ಆಚರಣೆಗಳು ಇಂದಿಗೂ ಜಾರಿಯಲ್ಲಿರುವುದು ನಿಜಕ್ಕೂ ಸಂತೋಷದ ವಿಷಯ.

ಅದರಲ್ಲೂ ಉತ್ತರ ಕರ್ನಾಟಕ ಭಾಗಕ್ಕೆ ಹೋದರೆ ವಿಶೇಷವಾದ ಸಂದರ್ಭದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಇಂದಿಗೂ ಕಾಣಬಹುದು. ಹೌದು ಗುನ್ನಾಪುರ ಎನ್ನುವ ಸ್ಥಳದಲ್ಲಿ ಹಬ್ಬದ ಸಂದರ್ಭದಲ್ಲಿ ಗ್ರಾಮೀಣ ಕ್ರೀಡೆಗಳನ್ನು ನಡೆಸಲಾಗುತ್ತದೆ. ಅದರಲ್ಲೂ ಶಕ್ತಿ ಪ್ರದರ್ಶನಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತೆ. ಅತ್ಯಂತ ಭಾರವಾದ ಕಲ್ಲು ಗುಂಡು ಎತ್ತುವ ಸಂಗ್ರಾಣಿ ಕಲ್ಲು ಎತ್ತುವ ಕ್ರೀಡೆ ಈಗಲೂ ಗುನ್ನಾಪುರ ಭಾಗದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ.

ಹೆಚ್ಚಾಗಿ ರಾತ್ರಿಯ ವೇಳೆ ಊರಿನ ಜನರೆಲ್ಲರೂ ಸೇರಿ ನಡೆಸುವಂತಹ ಈ ಕ್ರೀಡೆ ಶಕ್ತಿ ಪ್ರದರ್ಶನವನ್ನು ಮಾಡುವಂಥದ್ದು. ಯಾರು ಅತಿ ಹೆಚ್ಚು ತೂಕದ ಗುಂಡುಕಲ್ಲನ್ನು ಎತ್ತುತ್ತಾರೋ ಅವರೇ ಈ ಕ್ರೀಡೆಯ ವಿಜೇತರು. ಇನ್ನು ಕ್ರಿಕೆಟ್ ಹಾಗೂ ಮತಿತರ ಕ್ರೀಡೆಗಳಲ್ಲಿ ಇರುವ ಹಾಗೆ ಈ ಗ್ರಾಮೀಣ ಕ್ರೀಡೆಯಲ್ಲಿಯೂ ಕೂಡ ಸಣ್ಣಮಟ್ಟದ ಬೆಟ್ಟಿಂಗ್ ಕೂಡ ನಡೆಯುತ್ತೆ.

ಯಾವುದಾದರೂ ಒಬ್ಬ ವ್ಯಕ್ತಿಯ ಮೇಲೆ ಬೆಟ್ಟಿಂಗ್ ಕಟ್ಟಿ ಆಟ ಆಡುವುದು ಉಂಟು. ಇತ್ತೀಚಿಗೆ ನಡೆದ ಗುಂಡುಕಲ್ಲು ಎತ್ತುವ ಸ್ಪರ್ಧೆಯಲ್ಲಿ ಗುನ್ನಾಪುರದ ಗಂಡುಗಲಿ 185 ಕೆಜಿ ಭಾರದ ಗುಂಡು ಕಲ್ಲನ್ನು ಎರಡು ಬಾರಿ ಎತ್ತಿ ಬಿಸಾಕಿದ್ದಾರೆ. ಈ ಮೂಲಕ ನಿಜವಾದ ಬಾಹುಬಲಿ ಎನಿಸಿಕೊಂಡಿದ್ದಾರೆ. ಹೌದು 185 ಕೆಜಿ ಭಾರವಾದ ಕಲ್ಲು ಗುಂಡನ್ನು ಎತ್ತುವುದು ಅಷ್ಟು ಸುಲಭವಲ್ಲ ಅದಕ್ಕೆ ಅಷ್ಟೇ ದೇಹ ಧಾಡ್ಯತೆ ಬೇಕು. ಸ್ಪರ್ಧೆಯಲ್ಲಿ ಭಾಗವಹಿಸಿದ ಹಲವರ ಪೈಕಿ ಈ ವ್ಯಕ್ತಿ ಮಾತ್ರ ಅತ್ಯಂತ ಸುಲಭವಾಗಿ ಇಷ್ಟು ಭಾರವಾದ ಕಲ್ಲುಗುಂಡನ ಎರಡು ಬಾರಿ ಎತ್ತಿ ಬಿಸಾಕಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.