
1800 ರಲ್ಲಿ ಭಾರತೀಯರ ಜೀವನಶೈಲಿ ಹೇಗಿತ್ತು||1947ರಲ್ಲಿ ವಸ್ತುಗಳ ಬೆಲೆ ಹೇಗಿತ್ತು ||1800 ರ ಇಸವಿಯಲ್ಲಿ ನಮ್ಮ ಭಾರತ ದೇಶ ಹೇಗಿತ್ತು ಹಾಗೂ 1947ರಲ್ಲಿ ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಆಗ ಇದ್ದ ವಸ್ತುಗಳ ಬೆಲೆ ಹೇಗಿತ್ತು ಆದರೆ ಈಗ ವಸ್ತುಗಳ ಬೆಲೆ ಹೇಗೆ ಬದಲಾಗಿದೆ ಎಂಬುವುದರ ಬಗ್ಗೆ ತಿಳಿದುಕೊಳ್ಳೋಣ 1800 ನೇ ಇಸವಿಯಲ್ಲಿ ನಮ್ಮ ಭಾರತ ದೇಶ ಹೇಗಿತ್ತು ಆ ಕಾಲದಲ್ಲಿ ಭಾರತದ ಲ್ಲಾಗಲಿ ಅಥವಾ ಪ್ರಪಂಚದ ಬೇರೆ ದೇಶಗಳಲ್ಲಾಗಲಿ ಟೆಕ್ನಾಲಜಿ ಅಷ್ಟೊಂದು ಅಭಿವೃದ್ಧಿಯಾಗಿರಲಿಲ್ಲ ಆ ಕಾಲದಲ್ಲಿ ಭಾರತದಲ್ಲಿ ಜೀವಿಸುತ್ತಿದ್ದಂತಹ ಜನರು ಪಂಚೆಯನ್ನು ಧರಿಸುತ್ತಿದ್ದರು ಧನವಂತರು ಕುರ್ತಾ ಗಳನ್ನು ಧರಿಸುತ್ತಿದ್ದರು ಬ್ರಿಟಿಷರು ತಂದಂತಹ ಪ್ಯಾಂಟ್ ಮತ್ತು ಶರ್ಟುಗಳನ್ನು ಸಹ ನಮ್ಮವರು ಧೋತಿ ಕುರ್ತಾ ಎಂದೇ ಕರೆಯುತ್ತಿದ್ದರು ಈಗಲೂ ಸಹ ನಮ್ಮ ಭಾರತದ ಕೆಲವೊಂದು ಭಾಗಗಳಲ್ಲಿ ಹಿರಿಯರು ಪ್ಯಾಂಟ್ ಮತ್ತು ಶರ್ಟುಗಳನ್ನು ಧೋತಿ ಕುರ್ತ ಎಂದೇ ಕರೆಯುತ್ತಾರೆ.
ಆ ಕಾಲದಲ್ಲಿ ಹೆಚ್ಚಿನ ಜನ ಇರಲಿಲ್ಲ ಏಕೆಂದರೆ ಭಾರತದಲ್ಲಿ ಕೇವಲ 14 ಕೋಟಿ ಜನಸಂಖ್ಯೆ ಮಾತ್ರ ಇತ್ತು ಇಲ್ಲಿ ಭಾರತ ಎಂದರೆ ಈಗಿರುವ ಭಾರತ ದೇಶ ಅಲ್ಲ ಶ್ರೀಲಂಕಾ ಬಾಂಗ್ಲಾದೇಶ ಪಾಕಿಸ್ತಾನ ಆಫ್ಘಾನಿ ಸ್ತಾನ ಟಿಬೆಟ್ ಈ ಎಲ್ಲಾ ದೇಶಗಳು ಸೇರಿದ ಅಖಂಡ ಭಾರತ ಅದಾಗಿತ್ತು ಅಂದರೆ ಇಷ್ಟು ದೊಡ್ಡ ದೇಶದ ಜನಸಂಖ್ಯೆ ಕೇವಲ 16 ಕೋಟಿ ಮಾತ್ರ ಆ ಕಾಲದಲ್ಲಿ ಈಗಿರುವಷ್ಟು ಪ್ರೊಫೆಶನ್ಸ್ ಇರಲಿಲ್ಲ ಎಲ್ಲರೂ ಕೇವಲ ವ್ಯವಸಾಯವನ್ನು ಮಾಡುತ್ತಾ ಹಸು ಕುರಿಗಳನ್ನು ಸಾಕುತ್ತಾ ಜೀವನವನ್ನು ಕಳೆಯುತ್ತಿದ್ದರು ಅದೇ ರೀತಿ ಮನರಂಜನೆಗಳಿಗಾಗಿ ನಾಟಕಗಳನ್ನು ಹಾಗೂ ಭಜನೆಗಳನ್ನು ಮಾಡುತ್ತಿದ್ದರು ಆಗ ದೇವರ ಮೇಲೆ ಭಕ್ತಿ ತುಂಬಾ ಆಘಾಡವಾಗಿ ಇತ್ತು ಇದರ ಜೊತೆಗೆ ಮೂಢನಂಬಿಕೆಗಳನ್ನು ಸಹ ಹೆಚ್ಚಾಗಿ ನಂಬುತ್ತಿದ್ದರು.
ಆಗ ವಿದ್ಯುತ್ ಇರಲಿಲ್ಲ ಅದರ ಬದಲಾಗಿ ದೀಪಗಳನ್ನು ಹಚ್ಚುತ್ತಿದ್ದರು ಅದೇ ರೀತಿ ಆ ಸಮಯದಲ್ಲಿ ಅಖಂಡ ಭಾರತ ದೇಶದಲ್ಲಿ ಹೆಚ್ಚು ಹಳ್ಳಿಗಳು ಇತ್ತು ಹಾಗಾಗಿ ಭಾರತವನ್ನು ಈಗಲೂ ಸಹ ಹಳ್ಳಿಗಳ ದೇಶ ಎಂದು ಕರೆಯುತ್ತಾರೆ ಇದಕ್ಕೆ ಕಾರಣ ನಮ್ಮ ದೇಶದಲ್ಲಿ ಹೆಚ್ಚು ಹಳ್ಳಿಗಳು ಇರುವುದು ಅದೇ ರೀತಿ ಕೆಲವೇ ಕೆಲವು ಪಟ್ಟಣಗಳು ಇದ್ದವು ಪಟ್ಟಣಗಳಲ್ಲಿ ಇರುವ ಜನರು ಗೋದಾಮುಗಳಲ್ಲಿ ಕೆಲಸ ಮಾಡುತ್ತಿದ್ದರು ಆಗಿನ ಕಾಲದಲ್ಲಿ ಕೆಲಸ ತುಂಬಾ ಕಷ್ಟಕರವಾಗಿತ್ತು ಏಕೆ ಎಂದರೆ ಆ ಕಾಲದಲ್ಲಿ ವಿದ್ಯುತ್ ಇರಲಿಲ್ಲ ಹಾಗೂ ಈಗಿರುವಂತಹ ಯಂತ್ರೋಪಕರಣಗಳು ಕೂಡ ಇರಲಿಲ್ಲ ಭಾರತದಲ್ಲಿ ಮೊದಲನೆಯ ಬಾರಿಗೆ 1879 ರಲ್ಲಿ ವಿದ್ಯುತ್ ಬರುತ್ತದೆ ಅದು ಕೂಡ ಮೊದಲನೆಯ ಹಂತದಲ್ಲಿ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.
Comments are closed.