ತಮಾಷೆಗೆ ಹೇಳಿದ್ದು ನಿಜವಾಗೋಯ್ತು ? ಒಂದೇ ದಿನಕ್ಕೆ 12 ಕೋಟಿಯ ಒಡೆಯನಾದ 24 ವರ್ಷದ ಯುವಕ !

ಕೆಲವೊಮ್ಮೆ ಅದೃಷ್ಟ ಅನ್ನೋದು ನಮ್ಮ ಹಿಂದೆಯೇ ಇರುತ್ತೆ ಎಂದು ಹೇಳುತ್ತಾರೆ. ಹಾಗಾಗಿ ಕೆಲವೊಮ್ಮೆ ನಾವು ಏನು ಮಾತನಾಡುತ್ತೇವೋ ಅದು ನಿಜವಾಗಿಬಿಡುತ್ತೆ. ಹೌದು, ಇಲ್ಲೊಬ್ಬ ಯುವಕ ತನ್ನ ಸ್ನೇಹಿತರ ಜೊತೆಗೆ ತಮಾಷೆಯಾಗಿ ಆಡಿದ್ದ ಮಾತೇ ನಿಜವಾಗಿದ್ದು ಸ್ವತಃ ಆ ಯುವಕನೇ ನಂಬಲಾರದ ಮಟ್ಟಿಗೆ ಶಾಕ್ ಗೆ ಒಳಗಾಗಿದ್ದಾನೆ. ನೀವು ನಂಬೋದಿಲ್ಲ ಒಂದೇ ದಿನಕ್ಕೆ ಹನ್ನೆರಡು ಕೋಟಿಗಳ ಒಡೆಯನಾಗಿಬಿಟ್ಟಿದ್ದಾನೆ. ಇದು ನಡೆದಿರುವುದು ನಮ್ಮ ಪಕ್ಕದ ರಾಜ್ಯ ಕೇರಳದಲ್ಲಿ..

ಕೇರಳ ಸರ್ಕಾರ ನಡೆಸುವ 2020ರ ತಿರುವೋಣಂ ಬಂಪರ್ ಲಾಟರಿಯನ್ನು ೨೪ ವರ್ಷದ ಅನಂತು ವಿಜಯನ್ ಎಂಬ ಯುವಕ ತೆಗೆದುಕೊಂಡಿದ್ದ. ಇನ್ನು ಭಾನುವಾರವಷ್ಟೇ ಈ ಬಂಪರ್ ಲಾಟರಿಯ ರಿಸಲ್ಟ್ ನ್ನ ಕೇರಳ ಸರ್ಕಾರ ಘೋಷಣೆ ಮಾಡಿದೆ. ಇನ್ನು ಈ ಫಲಿತಾಂಶ ಪ್ರಕಟಣೆಯಾಗುವ ಕೆಲ ಸಮಯ ಮುಂಚೆಯೇ ಯುವಕ ವಿಜಯನ್ ತನ್ನ ಸ್ನೇಹಿತರ ಜೊತೆಗೆ ಮಾತನಾಡುವ ವೇಳೆ ಈ ಸಲದ ಫಸ್ಟ್ ಬಹುಮಾನ ನನ್ನದೇ ಎಂದು ತಮಾಷೆಯಾಗಿ ಹೇಳಿದ್ದಾನೆ. ಇದನ್ನ ಕೇಳಿದ ಆತನ ಸ್ನೇಹಿತರು ನಕ್ಕು ಗೇಲಿ ಮಾಡಿದ್ದಾರೆ.

ವಿಜಯನ್ ಅವರ ಅದೃಷ್ಟ ತುಂಬಾ ಚೆನ್ನಾಗಿತ್ತು ಅನ್ನಿಸುತ್ತೆ. ಭಾನುವಾರ ಪ್ರಕಟವಾದ ತಿರುವೋಣಂ ಬಂಪರ್ ಲಾಟರಿಯಲ್ಲಿ ಈತನಿಗೆ ಪ್ರಥಮ ಬಹುಮಾನ ಹೊಡೆದಿದ್ದು ಬರೋಬ್ಬರಿ ಹನ್ನೆರಡು ಕೋಟಿಗಳ ಅಧಿಪತಿಯಾಗಿದ್ದಾನೆ. ವೃತ್ತಿಯಲ್ಲಿ ದೇವಸ್ಥಾನವೊಂದರಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ವಿಜಯನ್ ಲಾಕ್ ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದರು ಎನ್ನಲಾಗಿದೆ. ಇನ್ನು ಈತನ ತಂದೆ ಪೈಂಟರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಇನ್ನು ತನಗೆ 12 ಕೋಟಿಯ ಲಾಟರಿ ಹೊಡೆದಿರುವುದನ್ನ ತಿಳಿದ ವಿಜಯನ್ ಆ ರಾತ್ರಿ ನಿದ್ದೆ ಮಾಡಲಿಲ್ಲವಂತೆ.ನನಗೆ ಪ್ರಥಮ ಬಹುಮಾನ ಬಂದಿರುವುದನ್ನ ತಿಳಿದು ನಾನು ಶಾಕ್ ಗೆ ಒಳಗಾಗಿದ್ದೆ ಎಂದು ಅವರು ಹೇಳಿದ್ದಾರೆ. ಇನ್ನು ಅವರ ತಂದೆ ತಾಯಿಗೆ ತನಗೆ ಬಹುಮಾನ ಬಂದಿರುವುದರ ಬಗ್ಗೆ ಹೇಳಿದಾಗ ಅವರ ನಂಬಲಿಲ್ಲ ಎಂದು ಆ ಯುವಕ ಹೇಳಿಕೊಂಡಿದ್ದಾನೆ. ಇನ್ನು ಅನಂತು ವಿಜಯ್ ಗೆ ಟ್ಯಾಕ್ಸ್ ಹಾಗೂ ಏಜೆನ್ಸಿ ಕಮಿಷನ್ ಎಲ್ಲಾ ಹೋಗಿ 7.56 ಕೋಟಿ ಆತನ ಖಾತೆಗೆ ಬರಲಿದೆ ಎಂದು ಹೇಳಲಾಗಿದೆ.

You might also like

Comments are closed.