ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುವುದನ್ನು ನೀವು ನೋಡಬಹುದು. ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದ (Social Media) ಮೂಲಕವೇ ವೈರಲ್ ಆಗಿ ಸ್ಟಾರ್ ಆದವರು ಕೂಡ ನಮ್ಮ ನಿಮ್ಮ ಮುಂದೆ ಇದ್ದಾರೆ. ಸೋಶಿಯಲ್ ಮೀಡಿಯಾಗೆ ಯಾವುದೇ ವಿಚಾರವನ್ನು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಸುವಂತ ತಾಕತ್ತು ಇಂದಿನ ಕಾಲದಲ್ಲಿ ಇದೆ ಎಂಬುದು ಪ್ರತಿಯೊಬ್ಬರಿಗೂ ಕೂಡ ತಿಳಿದಿರುವ ವಿಚಾರ. ಸಾಕಷ್ಟು ವಿಡಿಯೋಗಳು ನಮಗೆ ಆ ರೀತಿಯ ತಪ್ಪುಗಳನ್ನು ಮಾಡಬಾರದು ಎನ್ನುವ ಅರಿವನ್ನು ಕೂಡ ನೀಡುತ್ತವೆ ಅದೇ ರೀತಿಯ ವಿಡಿಯೋದ ಕುರಿತಂತೆ ಇಂದಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ.
ಸಾಮಾನ್ಯವಾಗಿ ದ್ವಿಚಕ್ರ ವಾಹನ ಸವಾರರು ಹೆಚ್ಚಾಗಿ ಇಂತಹ ಅಪ’ ಘಾತಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈಗ ವೈರಲ್ ಆಗಿರುವಂತಹ ಈ ವಿಡಿಯೋ ಮೂಲಕ ಖಂಡಿತವಾಗಿ ಮುಂದಿನ ದಿನಗಳಲ್ಲಿ ಕೂಡ ಇಂತಹ ನಿರ್ಲಕ್ಷಗಳು ಕಡಿಮೆಯಾಗಬಹುದು ಎಂಬುದಾಗಿ ಭಾವಿಸುತ್ತೇವೆ. ವಿಡಿಯೋ ನೋಡಿದರೆ ಉತ್ತರ ಭಾರತದಲ್ಲಿ ನಡೆದಿರುವಂತಹ ಘಟನೆ ಎಂಬುದಾಗಿ ಕಂಡುಬರುತ್ತದೆ. ನಿಧಾನವಾಗಿ ಚಲಿಸುತ್ತಿದ್ದ ಸ್ಕಾರ್ಪಿಯೋ ಕಾರ್ (Scorpio Car) ರೈಟ್ ಟರ್ನ್ ಅನ್ನು ತೆಗೆದುಕೊಳ್ಳಲು ಇಂಡಿಕೇಟರ್ ಹಾಕಿ ನಿಧಾನವಾಗಿ ಬರುತ್ತಿತ್ತು. ಈ ಸಂದರ್ಭದಲ್ಲಿ ಅತ್ಯಂತ ವೇಗದಲ್ಲಿ ಹೆಲ್ಮೆಟ್ ಹಾಕದೆ ಗಾಡಿಯನ್ನು ಓಡಿಸುತ್ತಿದ್ದ ಯುವಕ ಬೈಕಿನಲ್ಲಿ ಬಂದು ನೇರವಾಗಿ ಸ್ಕಾರ್ಪಿಯೋ ಕಾರಿನ ಮುಂದಿನ ಚಕ್ರಕ್ಕೆ ಗುದ್ದುತ್ತಾನೆ. ಆತ ವೇಗವಾಗಿ ಬಂದಿದ್ದ ರೀತಿ ನೋಡಿದರೆ ಖಂಡಿತವಾಗಿ ಆತ ಉಳಿಯುವುದೇ ಕಷ್ಟ ಎಂಬುದಾಗಿ ಭಾವಿಸಲಾಗಿತ್ತು.
ಆದರೆ ಆತನ ಅದೃಷ್ಟ ಎನ್ನುವಂತೆ ಆತನ ಬೈಕಿಗಾಗಲೀ ಅಥವಾ ಕಾರಿಗಾಗಲಿ ಅಥವಾ ಬೈಕ್ ಸವಾರನಿಗೆ (Bike Rider) ಆಗಲಿ ಏನು ಕೂಡ ತೊಂದರೆ ಆಗದೆ ಪಾರಾಗುತ್ತಾನೆ. ಈತ ಪಾರಾಗಿರಬಹುದು ಆದರೆ ಈ ವಿಡಿಯೋ ನೋಡಿದ ಮೇಲೆ ನೀವು ಒಂದು ವೇಳೆ ಯೋಚನೆದಲ್ಲಿ ಅತ್ಯಂತ ವೇಗವಾಗಿ ಓಡಿಸುತ್ತಿದ್ದರೆ ಜಾಗೃತೆ ಮಾಡಿ ಇಲ್ಲವಾದಲ್ಲಿ ಅನಾಹುತ ನಡೆಯುವುದಕ್ಕೆ ಹೆಚ್ಚು ಹೊತ್ತು ಬೇಕಾಗಿರುವುದಿಲ್ಲ. ಈ ವಿಡಿಯೋ ಬಗ್ಗೆ ಎಲ್ಲರಿಗೂ ಶೇರ್ ಮಾಡಿ ಜಾಗೃತಿ ಮೂಡಿಸುವಂತೆ ಮಾಡಿ.