10-kg-rice

ಚುನಾವಣಾ ಗೆಲುವಿಗಾಗಿ ಕಾಂಗ್ರೇಸ್‍ನಿಂದ,ಬಿಪಿಎಲ್ ಕಾರ್ಡುದಾರರಿಗೆ ಕೊಡ್ತಾರಂತೆ 10 ಕೆ.ಜಿ ಅಕ್ಕಿ.

Free Govt Schemes/ಸರ್ಕಾರಿ ಉಚಿತ ಯೋಜನೆಗಳು RATION CARD/ರೇಷನ್ ಕಾರ್ಡ್ ಮಾಹಿತಿ

ಚುನಾವಣೆ ಹತ್ತಿರವಾಗುತ್ತಾ ಇದ್ದಂತೆ ರಾಜಕೀಯ ಪಕ್ಷಗಳು ಗರಿಗೆದರಿ, ರಾಜಕೀಯ ನಾಯಕರಲ್ಲಿ ಹಿಂದೆಂದು ಇರದ ಉತ್ಸಾಹ ತುಂಬಿತುಳುಕುತ್ತಿರುತ್ತದೆ. ಆಡಳಿತ ಪಕ್ಷವನ್ನ ದೂರುತ್ತಾ, ಆರೋಪ ಪ್ರತ್ಯಾರೋಪದಲ್ಲಿ ಮುಳುಗಿದ್ದ ಕಾಂಗ್ರೇಸ್ ಇದೀಗ ಮತದಾರಿಗಾಗಿ ಹೊಸ ಯೋಜನೆಯನ್ನ ತಂದಿದೆ. ಈ ಹಿಂದೆ ಇದ್ದ ಅನ್ನಭಾಗ್ಯ ಯೋಜನೆಯ ಅಸ್ತ್ರವನ್ನ ಮರು ಪ್ರಯೋಗಿಸಿದ್ದು, ಬಿಪಿಎಲ್ ಕಾರ್ಡುದಾರರಿಗೆ 10 ಕೆ.ಜಿ ಅಕ್ಕಿ ನೀಡೋದಾಗಿ ಘೋಷಣೆ ಮಾಡಿದೆ.

2024ರ ವಿಧಾನ ಸಭಾ ಚುನಾವಣಾ ಅಖಾಡಲ್ಲಿ ಗೆಲುವಿನ ಪತಾಕೆ ಹಾರಿಸಿಯೇ ಸಿದ್ದ ಎಂದು ಹೊರಟಿರುವ ರಾಜಕೀಯ ಪಕ್ಷಗಳು ಹರಸಾಹಸ ಪಡ್ತಿವೆ.

Great preparation for former cm Siddaramaiah Amrit Mahotsav in davangere | ಸಿದ್ದರಾಮಯ್ಯ 'ಅಮೃತ ಮಹೋತ್ಸವ' : 50 ಎಕರೆ ಜಾಗದಲ್ಲಿ ಬೃಹತ್ ವೇದಿಕೆ! Karnataka News in Kannada

ಸದ್ಯ ವಿಧಾನ ಸಭಾ ಚುನಾವಣೆಯಲ್ಲಿ ಗೆಲ್ಲುವ ಪಣತೊಟ್ಟಿರೋ ಕಾಂಗ್ರೆಸ್ ಈ ಹಿಂದೆ ಗೃಹ ಲಕ್ಷಿ, ಗೃಹ ಜ್ಯೋತಿಗಳಂತ ಯೋಜನೆಗಳನ್ನ ಜನರ ಮುಂದಿಟ್ಟು ಮತಬೇಟೆಗೆ ಮುಂದಾಗಿತ್ತು. ಈ ಹಿಂದೆ ಕರ್ನಾಟಕಕ್ಕೆ ಭೇಟಿ ನೀಡದ್ದ ಪ್ರಿಯಾಂಕ ಗಾಂಧಿ ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಬಡ ಕುಟುಂಬಗಳ ಯಜಮಾನಿಗೆ ಪ್ರತೀ ತಿಂಗಳಿಗೆ 2000 ಸಹಾಯ ಧನವನ್ನ ನೀಡೋದಾಗಿ ಘೋಷಣೆ ಮಾಡಿದ್ದರು.. ಬಳಿಕ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಗೃಹಜ್ಯೋತಿ ಯೋಜನೆ ಅಡಿ ಪ್ರತೀ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಅನ್ನ ಉಚಿತವಾಗಿ ನೀಡೋದಾಗಿ ಘೋಷಣೆ ಮಾಡಲಾಗಿತ್ತು.. ಇದೀಗ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಪ್ರತೀ ಬಿಪಿಎಲ್ ಕಾರ್ಡುದಾರ ಕುಟುಂಬದ ಸದಸ್ಯರಿಗೆ 10 ಕೆ.ಜಿ ಅಕ್ಕಿ ನೀಡೋದಾಗಿ ಘೋಷಿಣೆ ಮಾಡಿದೆ. ಈ ಮೂಲಕ ಚುನಾವಣೆಗೂ ಮುನ್ನಾ ಕಾಂಗ್ರೇಸ್ 3 ಯೋಜನೆಗಳನ್ನ ಘೋಷಣೆ ಮಾಡಿದಂತಾಗಿದೆ.




ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.