ವಿನೋದ್ ರಾಜ್ ಅವರು ಅವರಿಗೆ ಇಷ್ಟು ವರ್ಷವಾದರೂ ಸಹ ಇನ್ನು ಮದುವೆಯಾಗಿಲ್ಲ . ಏಕೆಂದ್ರೆ ಅವರಿಗೆ ಬರುವ ಹೆಂಡತಿ ಅವರ ತಾಯಿಯನ್ನು ಚೆನ್ನಾಗೆ ನೋಡಿ ಕೊಳ್ಳುತ್ತಾರಾ ಎಂಬ ಭಯ ಅವರಿಗೆ ಇದೆ . ಅದ್ಕೊಸ್ಕರ ಅವರು ಇನ್ನು ಮದುವೆಯಾಗದೆ ಹಾಗೆ ಉಳಿದಿದ್ದಾರೆ. ಇದಲ್ಲವೇ ಅವರು ತಮ್ಮ ತಾಯಿಗೆ ತೋರುವ ಪ್ರೀತಿ . ಈಗ ಅವರು ಎಲ್ಲರೂ ಮೆಚ್ಚುವಂತಹ ಒಂದು ಒಳ್ಳೆಯ ಕಾರ್ಯ ಮಾಡಿದ್ದಾರೆ . ಅದು ಏನೆಂದು ತಿಳಿಯೋಣ ಬನ್ನಿ
ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಕಂಕಣ ಭಾಗ್ಯ ಕಲ್ಪಿಸಿರುವ ವಿನೋದ್ ರಾಜ್, ಖುದ್ದು ತಾವೇ ನಿಂತು ಯುವತಿಯ ಮದುವೆ ಮಾಡಿಸಿದ್ದಾರೆ. ಮದ್ದೂರು ತಾಲೂಕು ಹುಳಗನಹಳ್ಳಿ ಪ್ರಕಾಶ್ ಜೊತೆ ಯುವತೊಯ ವಿವಾಹ ಮಾಡಿಸಿದ್ದು, ನಾಲ್ಕೈದು ವರ್ಷಗಳಿಂದ ವಿನೋದ್ ರಾಜ್ ತೋಟದಲ್ಲಿ ಕೆಲಸ ಮಾಡುತ್ತಿದ್ದರಂತೆ ಅನ್ನಪೂರ್ಣ. ಪೊಲೀಸ್ ಇಲಾಖೆಯಲ್ಲಿ 7 ವರ್ಷದಿಂದ ಹೋಂ ಗಾರ್ಡ್ ಸೇವೆ ಸಲ್ಲಿಸುತ್ತಿರುವ ವರ ಪ್ರಕಾಶ್ ಹಾಗೂ ಅನ್ನಪೂರ್ಣ ಅವರ ವಿವಾಹವನ್ನು ಸರಳವಾಗಿ ನೆಲಮಂಗಲದ ಪುರಾತನ ಗೂಬೆಕಲ್ಲಮ್ಮ ದೇವಾಸ್ಥಾನದಲ್ಲಿ, ನೂರಾರು ಜನರ ಸಮ್ಮುಖದಲ್ಲಿ ಮದುವೆ ಮಾಡಿಸುವ ಮೂಲಕ ನಟ ವಿನೋದ್ ರಾಜ್ ಮತ್ತೊಂದು ಒಳ್ಳೆಯ ಕಾರ್ಯ ಮಾಡಿದ್ದಾರೆ.ಇವ್ರ ಈ ಒಳ್ಳೆಯ ಕೆಲಸವನ್ನು ಎಲ್ಲರೂ ಮೆಚ್ಚಿ ಕೊಂಡಿದ್ದಾರೆ. ನೀವೇನಂತೀರಾ